ಬೆಂಗಳೂರು: ʻಅನಿಮಲ್ʼ ಸಿನಿಮಾ ಮೂಲಕ ತೃಪ್ತಿ ಡಿಮ್ರಿ (Triptii Dimri) ಅವರು ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ಪಡೆದಿದ್ದಾರೆ. ಅನಿಮಲ್ ಸಿನಿಮಾ ಬಳಿಕ ನಟಿಗೆ ಹಲವು ಆಫರ್‌ಗಳು ಬಂದಿವೆ. ಇದೀಗ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾ ಮೂಲಕ ಮತ್ತೆ ತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಮೋಷನ್ ಪೋಸ್ಟರ್ ಔಟ್ ಆಗಿದೆ. ‘ಬ್ಯಾಡ್ ನ್ಯೂಸ್’ ಹೊಸ ಪೋಸ್ಟರ್‌ನಲ್ಲಿ ತೃಪ್ತಿ ತನ್ನ ಬೇಬಿ ಬಂಪ್ ತೋರಿಸಿದ್ದಾರೆ. ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ (Ammy Virk) ಕೂಡ ಕಾಣಿಸಿಕೊಂಡಿದ್ದಾರೆ.
ತೃಪ್ತಿ ಡಿಮ್ರಿ ‘ಬ್ಯಾಡ್ ನ್ಯೂಸ್’ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಜುಲೈ 19 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಹಿಂದೆ ‘ಮೇರೆ ಮೆಹಬೂಬ್ ಮೇರೆ ಸನಮ್’ ಎಂದು ಹೆಸರಿಡಲಾಗಿತ್ತು.
‘ಬ್ಯಾಡ್ ನ್ಯೂಜ್’ ವಿಕ್ಕಿ ಮತ್ತು ಆಮಿ ವಿರ್ಕ್ ಒಟ್ಟಿಗೆ ಮಾಡುತ್ತಿರುವ ಎರಡನೇ ಸಿನಿಮಾ. ಈ ಹಿಂದೆ ನಿರ್ದೇಶಕರ ‘ಲವ್ ಪರ್ ಸ್ಕ್ವೇರ್ ಫುಟ್’ (2018) ನಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದರು. ಇದರಲ್ಲಿ ಆಮಿ ವಿರ್ಕ್ ಅವರ ಪತ್ನಿ ಅಂಗೀರ ಧಾರ್ ಕೂಡ ಕಾಣಿಸಿಕೊಂಡಿದ್ದರು. ಚಿತ್ರವು ಥಿಯೇಟರ್ ಬಿಡುಗಡೆಯಾದ ನಂತರ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.
ತೃಪ್ತಿ ಈ ಮುಂಚೆ ಸಾಜಿದ್ ಅಲಿ ನಿರ್ದೇಶನದ ಲೈಲಾ ಮಜ್ನು ಚಿತ್ರದಲ್ಲಿ ʻಲೈಲಾʼ ಎಂಬ ಪಾತ್ರವನ್ನು ನಿರ್ವಹಿಸಿದ್ದರು. 2017 ರ ʻಬಾಯ್ಸ್ʼ ಚಿತ್ರದಲ್ಲೂ ನಟಿಸಿದ್ದಾರೆ. ಕಳೆದ ವರ್ಷ, ನಟಿ ನೆಟ್‌ಫ್ಲಿಕ್ಸ್‌ನ ಕ್ವಾಲಾದಲ್ಲಿ ಬಾಬಿಲ್ ಖಾನ್ ಜತೆ ನಟಿಸಿದ್ದರು.
ಇದನ್ನೂ ಓದಿ: Bharat Jodo Nyay Yatra : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಾಪ್ತಿ
ಅನಿಮಲ್ ಸಿನಿಮಾದಿಂದ ಖ್ಯಾತಿ
ಚಿತ್ರದಲ್ಲಿ ತೃಪ್ತಿ ಡಿಮ್ರಿ ಅವರು ʻಜೋಯಾʼ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರದ ತೃಪ್ತಿ ಡಿಮ್ರಿ ಅಭಿನಯವನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಶ್ಲಾಘಿಸಿದ್ದರು. ಇತ್ತೀಚಿನ ಮಾಧ್ಯಮದ ಸಂದರ್ಶನವೊಂದರಲ್ಲಿ “ಜೋಯಾʼ ತಮ್ಮ ಬೋಲ್ಡ್ ಸೀನ್ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಮಾತ್ರವಲ್ಲ ಬೋಲ್ಡ್ ಸೀನ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ರಣಬೀರ್ ಕಪೂರ್ ಅವರು ಹೇಗೆ ತಮಗೆ ಸಪೋರ್ಟಿವ್ ಆಗಿದ್ದರು ಎಂಬದನ್ನು ಬಹಿರಂಗಪಡಿಸಿದ್ದರು.