Site icon Vistara News

Urfi Javed: ಉರ್ಫಿ ʻಮ್ಯಾಜಿಕ್ʼ ಡ್ರೆಸ್‌ಗೆ ಸಮಂತಾ ಮೆಚ್ಚುಗೆ; ಗೌನ್‌ನಿಂದ ಹಾರಿತು ಬಣ್ಣದ ಚಿಟ್ಟೆ!

Urfi Javed magical butterflies dress Samantha reacts

ಬೆಂಗಳೂರು: ವಿಶಿಷ್ಟವಾದ ಬಟ್ಟೆಗಳಿಂದಲೇ ಹೆಸರುವಾಸಿಯಾಗಿರುವ ಸ್ಟೈಲ್ ಐಕಾನ್‌ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೊಂದು ಅವತಾರದಲ್ಲಿ ಕಂಡಿದ್ದಾರೆ. ಈ ಬಾರಿ ಉರ್ಫಿ ಉಡುಪಿಗೆ ಸಮಂತಾ ರುತ್ ಪ್ರಭು ಸೇರಿದಂತೆ ಅನೇಕ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಮೆಚ್ಚಿದ್ದಾರೆ. ಉರ್ಫಿ ಕಪ್ಪು ಬಣ್ಣದ ಲೆಹೆಂಗಾ ಧರಿಸಿದ್ದರು. ಉರ್ಫಿ ಈ ಸಲ 3D ಫ್ಲವರ್​​ ಗೌನ್​​​​ ಧರಿಸಿದ್ದಾರೆ. ಇದರಲ್ಲಿರುವ ಮ್ಯಾಜಿಕಲ್​​ ಬಟರ್‌ಫ್ಲೈ, ಪ್ಲವರ್​​ ಥೀಮ್ ಗೌನ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದ್ದು, ಸಾಕಷ್ಟು ಮಂದಿ ಲೈಕ್‌ ಮಾಡಿದ್ದಾರೆ​.

ವೈರಲ್‌ ಆದ ವಿಡಿಯೊದಲ್ಲಿ ಉರ್ಫಿ ಅವರು ಚಪ್ಪಾಳೆ ತಟ್ಟುವಾಗ ಉಡುಪಿನಿಂದ ಚಿಟ್ಟೆಗಳು ಹಾರಿಹೋಗುತ್ತವೆ. ಉರ್ಫಿ ಧರಿಸಿರುವ ಬ್ಲ್ಯಾಕ್​ ಗೌನ್​​ ಮೇಲಿರುವ ಎಲೆ, ಹೂಗಳು ತನ್ನಷ್ಟಕ್ಕೆ ಅರಳಿಕೊಳ್ಳುತ್ತವೆ. ಒಂದಿಷ್ಟು ಡಿಸೈನ್ಸ್​​​ ನಟಿಯ ಸುತ್ತ ಬೀಳುತ್ತವೆ. ಅವು ಹೂ ಮತ್ತು ಚಿಟ್ಟೆಯಾಕಾರದಲ್ಲಿ ಕಂಡುಬಂದಿದ್ದು ಅದ್ಭುತ ಗಾರ್ಡನ್​​ ಥೀಮ್​ ಡ್ರೆಸ್​​​​​ನಂತೆ ಭಾಸವಾಗುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಡ್ರೆಸ್‌ನಲ್ಲಿರುವವಿಡಿಯೊವನ್ನು ಹಂಚಿಕೊಂಡ ಉರ್ಫಿ, “ಮ್ಯಾಜಿಕ್ʼʼ ಎಂದು ಬರೆದಿದ್ದಾರೆ. ವಿಡಿಯೊಗೆ ಪ್ರತಿಕ್ರಿಯಿಸಿದ ಕುಶಾ ಕಪಿಲಾ, “ರಾಣಿ ರೀತಿ ಕಾಣುತ್ತಿದ್ದೀರಾ” ಎಂದು ಬರೆದಿದ್ದಾರೆ.

ಇದನ್ನೂ ಓದಿ: Uorfi Javed: ಉಫ್‌! 100 ಕೆ.ಜಿ. ತೂಕದ ಗೌನ್ ಧರಿಸಿದ ಉರ್ಫಿ ಜಾವೇದ್‌; ವಿಡಿಯೊ ಇಲ್ಲಿದೆ

ಉರ್ಫಿಯ ಉಡುಪಿಗೆ ಸಮಂತಾ ರಿಯಾಕ್ಷನ್‌!

ಸಮಂತಾ ರುತ್ ಪ್ರಭು ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಉರ್ಫಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಸುಂದರವಾಗಿದೆ ಉರ್ಫಿ”ಎಂದು ಬರೆದುಕೊಂಡಿದ್ದಾರೆ. ಸಮಂತಾ ಶೇರ್‌ ಮಾಡಿಕೊಂಡ ಪೋಸ್ಟ್‌ನಲ್ಲಿ ಉರ್ಫಿ ಅವರು ಗೌನ್‌ವನ್ನು ಹೇಗೆ ತಯಾರಿಸಿದ್ದಾರೆ ಎಂಬುದರ ಕುರಿತು ಇದೆ. “ಹಾರುವ ಚಿಟ್ಟೆಗಳ ಉಡುಗೆ” ಎಂಬ ಶೀರ್ಷಿಕೆ ಶೇರ್‌ ಮಾಡಿಕೊಂಡ ವಿಡಿಯೊದಲ್ಲಿ ಇದೆ. ಮತ್ತೋರ್ವ ಅಭಿಮಾನಿ, ಉರ್ಫಿ ಸುಂದರವಾಗಿ ಕಾಣುತ್ತಿದ್ದಾರೆ ಎಂಬರ್ಥದಲ್ಲಿ ಬರೆದಿದ್ದಾರೆ. ಅಭಿಮಾನಿಗಳು ನಟಿಯನ್ನು ಮೆಟ್ ಗಾಲಾ 2024ರಲ್ಲಿ ನೋಡಲು ಬಯಸಿದ್ದಾರೆ.

ಬಾಲಿವುಡ್‌ಗೆ ಪದಾರ್ಪಣೆ

ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು. ಬಾಲಿವುಡ್‌ ಕಲಾವಿದರಾದ ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಇದು ಉರ್ಫಿ ಜಾವೇದ್‌ ಅಭಿನಯದ ಮೊದಲ ಬಾಲಿವುಡ್‌ ಚಿತ್ರ. ಬಿಗ್‌ಬಾಸ್‌ ರಿಯಾಲಿಟಿ ಶೋದ ಮೂಲಕ ಗಮನ ಸೆಳೆದಿದ್ದ ಅವರು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿತ್ತು. ಮಾತ್ರವಲ್ಲ ಅವರು ಸ್ಪ್ಲಿಟ್‌ವಿಲ್ಲಾ ಎಕ್ಸ್ 5 (Splitsvilla X5) ಶೋದಲ್ಲಿಯೂ ಕಾಣಿಸಿಕೊಂಡಿದ್ದಾರೆ.

Exit mobile version