ಬೆಂಗಳೂರು: ನಟಿ ಊರ್ವಶಿ ರೌಟೇಲಾ (Urvashi Rautela) ಅವರ ಖಾಸಗಿ ವಿಡಿಯೊವೊಂದು ವೈರಲ್ ಆಗಿರುವುದು ಗೊತ್ತೇ ಇದೆ. ನಟಿ ಬಾತ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿರುವುದನ್ನು ಕಂಡು ಫ್ಯಾನ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಹೊಸ ಆಡಿಯೊವೊಂದು ಲೀಕ್ ಆಗಿದೆ. ಈಗ ಲೀಕ್ ಆಗಿರುವ ವಿಡಿಯೊದಲ್ಲಿ ಊರ್ವಶಿ ಮತ್ತು ಆಕೆಯ ಮ್ಯಾನೇಜರ್ ನಡುವಿನ ಮಾತುಕತೆ ಇದೆ. ಇದರಲ್ಲಿ ಘಟನೆಯನ್ನು ಊರ್ವಶಿ ಖಂಡಿಸಿದ್ದಾರೆ.
ಸಂಭಾಷಣೆಯಲ್ಲಿ, ಊರ್ವಶಿ ತನ್ನ ಮ್ಯಾನೇಜರ್ ಹತ್ತಿರ ನೀವು ವೀಡಿಯೊವನ್ನು ನೋಡಿದ್ದೀರಾ ಎಂದು ಕೇಳುತ್ತಾರೆ. ಅವರು ಪ್ರತಿಕ್ರಿಯಿಸುತ್ತಾರೆ, “ಹೌದು, ನಾನು ನೋಡಿದೆ ಮತ್ತು ತಂಡ ವೈರಲ್ ಆದ ವಿಡಿಯೊವನ್ನು ಡಿಲಿಟ್ ಮಾಡಲು ಪ್ರಯತ್ನಿಸುತ್ತಿದೆ.” ಎನ್ನುತ್ತಾರೆ,ಆಗ ಊರ್ವಶಿ ಹೇಳುತ್ತಾರೆ, “ಈ ವಿಷಯಗಳು ಹೇಗೆ ವೈರಲ್ ಆಗುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ತಕ್ಷಣ ಅವರೊಂದಿಗೆ ಕರೆ ಮಾಡಬೇಕಾಗಿದೆʼʼಎನ್ನುತ್ತಾರೆ. ಆಗ ಮ್ಯಾನೇಜರ್ ʻʻಹೌದು, ಊರ್ವಶಿ ನನಗೆ ಗೊತ್ತು, ಇದು ತುಂಬಾ ದುಃಖದ ಪರಿಸ್ಥಿತಿ, ಆದರೆ ನಾವು ಈ ವಿಚಾರಗಳನ್ನು ಫೋನ್‌ನಲ್ಲಿ ಮಾತನಾಡಬಾರದು. ಜುಲೈ 19 ರಂದು ನೀವು ಹಿಂತಿರುಗಿದಾಗ ಈ ಬಗ್ಗೆ ಚರ್ಚಿಸೋಣʼʼಎನ್ನುತ್ತಾರೆ. ಆಗ ಊರ್ವಶಿ “ಯಾಕೆ?” ಎಂದು ಪ್ರಶ್ನಿಸಿದಾಗ, ಮ್ಯಾನೇಜರ್ “ಏನಾಗುತ್ತಿದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟವಾಗಿಲ್ಲ, ನೀವು ಬಂದ ಬಳಿಕ ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ.” ಎಂಬ ಸಂಭಾಷಣೆ ಇದೀಗ ಲೀಕ್ ಆಗಿದೆ.
ಸೋಶಿಯಲ್ ಮೀಡಿಯಾ ಲೀಕ್ ಆದ ಆಡಿಯೋವನ್ನು ವಿಡಿಯೋ ರೀತಿಯಲ್ಲಿ ವೈರಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್ ಧರಿಸಿ ಬಂದ ನಿರ್ದೇಶಕ! ಏನು ಕಥೆ?
ಇದಕ್ಕೂ ಮುಂಚೆ ಊರ್ವಶಿ ಅವರ ಸ್ನಾನ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅನೇಕರು ವೀಡಿಯೊ ಕಂಡು PR ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವೀಡಿಯೋದಲ್ಲಿ ಮಂಗಳಸೂತ್ರ ಬೇರೆ ಧರಿಸಿದ್ದರು. ಹೀಗಾಗಿ ಇದು ಫೇಕ್ ಎಂದು ಹೇಳಲಾಗಿತ್ತು. ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಊರ್ವಶಿ, ‘ಸಿಂಗ್ ಸಾಬ್ ದಿ ಗ್ರೇಟ್’ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಸನ್ನಿ ಡಿಯೋಲ್ ಅಭಿನಯದ ಈ ಚಿತ್ರ ಕಮರ್ಷಿಯಲ್ ಫ್ಲಾಪ್ ಆಗಿತ್ತು. ಇದರ ನಂತರ ಯೋ ಯೋ ಹನಿಸಿಂಗ್ ಅವರೊಂದಿಗೆ ‘ಲವ್ ಡೋಸ್’ ಎಂಬ ಆಲ್ಬಂನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದರು. ಮೆಗಾ ಸ್ಟಾರ್ ಚಿರಂಜೀವಿ ನಟನೆಯ, ‘ವಾಲ್ತೇರು ವೀರಯ್ಯ’ದಲ್ಲಿ ಐಟಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ ಸಿನಿಮಾದಲ್ಲಿಯೂ ಮೈ ಡಿಯರ್ ಮಾರ್ಕಂಡೇಯ ಎಂದು ಸೊಂಟ ಬಳುಕಿಸಿ ಸೌತ್ ಸಿನಿರಸಿಕರ ಮನಗೆದ್ದರು.