ಬೆಂಗಳೂರು: ನಟಿ ಊರ್ವಶಿ ರೌಟೇಲಾ (Urvashi Rautela) ಅವರ ಖಾಸಗಿ ವಿಡಿಯೊವೊಂದು ವೈರಲ್ ಆಗಿರುವುದು ಗೊತ್ತೇ ಇದೆ. ನಟಿ ಬಾತ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿರುವುದನ್ನು ಕಂಡು ಫ್ಯಾನ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಹೊಸ ಆಡಿಯೊವೊಂದು ಲೀಕ್ ಆಗಿತ್ತು.. ಇದೀಗ ನಟಿ ಈ ಬಗ್ಗೆ ಮಾತನಾಡಿದ್ದಾರೆ. ‘ಸೋರಿಕೆಯಾದ’ ಬಾತ್ರೂಮ್ ವೀಡಿಯೊ ತನ್ನ ಮುಂಬರುವ ʻಘುಸ್ಪೈತಿಯೇʼ ಸಿನಿಮಾದ ದೃಶ್ಯ ಎಂದು ಹೇಳಿದ್ದಾರೆ. ತನ್ನ ಚಿತ್ರದದ್ದಾದರೂ, ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಅಸಮಾಧಾನಗೊಂಡಿದ್ದಾರೆ.
ನಟಿ ಈ ಬಗ್ಗೆ ಮಾತನಾಡಿ ʻʻಕ್ಲಿಪ್ ಸೋರಿಕೆಯಾದ ದಿನ, ನಾನು ಅಸಮಾಧಾನಗೊಂಡಿದ್ದೆ. ಖಂಡಿತವಾಗಿಯೂ ಇದು ನನ್ನ ವೈಯಕ್ತಿಕ ಕ್ಲಿಪ್ ಅಲ್ಲ, ಇದು ಘುಸ್ಪೈತಿಯೇ ಚಲನಚಿತ್ರದ ಭಾಗವಾಗಿದೆʼʼಎಂದರು. ಘುಸ್ಪೈತಿಯೇ ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ. ಅಕ್ಷಯ್ ಒಬೆರಾಯ್ ಅವರೊಂದಿಗೆ ಊರ್ವಶಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.
ಊರ್ವಶಿ ಅವರ ಸ್ನಾನ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅನೇಕರು ವೀಡಿಯೊ ಕಂಡು PR ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವೀಡಿಯೋದಲ್ಲಿ ಮಂಗಳಸೂತ್ರ ಬೇರೆ ಧರಿಸಿದ್ದರು. ಹೀಗಾಗಿ ಇದು ಫೇಕ್ ಎಂದು ಹೇಳಲಾಗಿತ್ತು.
ಇದನ್ನೂ ಓದಿ: Urvashi Rautela: ಊರ್ವಶಿ ರೌಟೇಲಾ ಸ್ನಾನ ಮಾಡುವ ವಿಡಿಯೊ ಲೀಕ್ ಆದ ಬೆನ್ನಲ್ಲೇ ಮ್ಯಾನೇಜರ್ ಜತೆಗಿನ ಆಡಿಯೋನೂ ಬಹಿರಂಗ!
ಇದಾದ ಬಳಿಕ ಆಡಿಯೊ ಒಂದು ವೈರಲ್ ಆಗಿತ್ತು. ಸಂಭಾಷಣೆಯಲ್ಲಿ, ಊರ್ವಶಿ ತನ್ನ ಮ್ಯಾನೇಜರ್ ಹತ್ತಿರ ನೀವು ವೀಡಿಯೊವನ್ನು ನೋಡಿದ್ದೀರಾ ಎಂದು ಕೇಳುತ್ತಾರೆ. ಅವರು ಪ್ರತಿಕ್ರಿಯಿಸುತ್ತಾರೆ, “ಹೌದು, ನಾನು ನೋಡಿದೆ ಮತ್ತು ತಂಡ ವೈರಲ್ ಆದ ವಿಡಿಯೊವನ್ನು ಡಿಲಿಟ್ ಮಾಡಲು ಪ್ರಯತ್ನಿಸುತ್ತಿದೆ.” ಎನ್ನುತ್ತಾರೆ,ಆಗ ಊರ್ವಶಿ ಹೇಳುತ್ತಾರೆ, “ಈ ವಿಷಯಗಳು ಹೇಗೆ ವೈರಲ್ ಆಗುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ತಕ್ಷಣ ಅವರೊಂದಿಗೆ ಕರೆ ಮಾಡಬೇಕಾಗಿದೆʼʼಎನ್ನುತ್ತಾರೆ. ಆಗ ಮ್ಯಾನೇಜರ್ ʻʻಹೌದು, ಊರ್ವಶಿ ನನಗೆ ಗೊತ್ತು, ಇದು ತುಂಬಾ ದುಃಖದ ಪರಿಸ್ಥಿತಿ, ಆದರೆ ನಾವು ಈ ವಿಚಾರಗಳನ್ನು ಫೋನ್‌ನಲ್ಲಿ ಮಾತನಾಡಬಾರದು. ಜುಲೈ 19 ರಂದು ನೀವು ಹಿಂತಿರುಗಿದಾಗ ಈ ಬಗ್ಗೆ ಚರ್ಚಿಸೋಣʼʼಎನ್ನುತ್ತಾರೆ. ಆಗ ಊರ್ವಶಿ “ಯಾಕೆ?” ಎಂದು ಪ್ರಶ್ನಿಸಿದಾಗ, ಮ್ಯಾನೇಜರ್ “ಏನಾಗುತ್ತಿದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟವಾಗಿಲ್ಲ, ನೀವು ಬಂದ ಬಳಿಕ ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ.” ಎಂಬ ಸಂಭಾಷಣೆ ಲೀಕ್ ಆಗಿತ್ತು.
ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಊರ್ವಶಿ, ‘ಸಿಂಗ್ ಸಾಬ್ ದಿ ಗ್ರೇಟ್’ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಸನ್ನಿ ಡಿಯೋಲ್ ಅಭಿನಯದ ಈ ಚಿತ್ರ ಕಮರ್ಷಿಯಲ್ ಫ್ಲಾಪ್ ಆಗಿತ್ತು. ಇದರ ನಂತರ ಯೋ ಯೋ ಹನಿಸಿಂಗ್ ಅವರೊಂದಿಗೆ ‘ಲವ್ ಡೋಸ್’ ಎಂಬ ಆಲ್ಬಂನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದರು. ಮೆಗಾ ಸ್ಟಾರ್ ಚಿರಂಜೀವಿ ನಟನೆಯ, ‘ವಾಲ್ತೇರು ವೀರಯ್ಯ’ದಲ್ಲಿ ಐಟಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ ಸಿನಿಮಾದಲ್ಲಿಯೂ ಮೈ ಡಿಯರ್ ಮಾರ್ಕಂಡೇಯ ಎಂದು ಸೊಂಟ ಬಳುಕಿಸಿ ಸೌತ್ ಸಿನಿರಸಿಕರ ಮನಗೆದ್ದರು.