Site icon Vistara News

Usha Uthup: ಗಾಯಕಿ ಉಷಾ ಉತ್ತುಪ್‌ ಪತಿ ಹೃದಯಾಘಾತದಿಂದ ನಿಧನ

Usha Uthup's Husband Jani Chacko Uthup Dies

ಬೆಂಗಳೂರು: ಭಾರತೀಯ ಪಾಪ್ ಐಕಾನ್, ಬಹು ಭಾಷಾ ಗಾಯಕಿ ಉಷಾ ಉತ್ತುಪ್‌  ಅವರ ಪತಿ ಜಾನಿ ಚಾಕೋ ಉತ್ತುಪ್ (Jani Chacko Uthup) ಅವರು ಸೋಮವಾರ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ನಿಧನರಾದರು. ಜಾನಿ ಚಾಕೋ ಉತ್ತುಪ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ತಮ್ಮ ನಿವಾಸದಲ್ಲಿ ಟಿವಿ ನೋಡುವಾಗ ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲ ತಿಳಿಸಿದೆ.

ಜಾನಿ ಚಾಕೋ ಅವರು ಉಷಾ ಉತ್ತುಪ್‌ ಅವರಿಗೆ ಎರಡನೇ ಪತಿ. ದಂಪತಿಗೆ ಮಗ ಒಬ್ಬ ಮಗ ಮತ್ತು ಮಗಳು ಇದ್ದರು. ಇಂದು ಜು.9( ಮಂಗಳವಾರ) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ, ಸಂಗೀತ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಉಷಾ ಉತ್ತುಪ್ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಲಾಯಿತು. ಉಷಾ ಉತ್ತುಪ್‌ ಅವರು ಹಲವು ಬಾಲಿವುಡ್‌ ಸೇರಿದಂತೆ ಕನ್ನಡ ಹಾಡುಗಳನ್ನು ಹಾಡಿದ್ದಾರೆ. ರಂಬಾ ಹೋ, ಹರಿ ಓಂ ಹರಿ ಮತ್ತು ಕೋಯಿ ಯಹಾನ್ ನಾಚೆ ನಾಚೆ ಮುಂತಾದ ಚಾರ್ಟ್‌ಬಸ್ಟರ್‌ ಹಾಡುಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: Kalki 2898 AD: ‘ಪಿಕೆ’, ʻಗದರ್‌ʼ ಸಿನಿಮಾಗಳ ದಾಖಲೆ ಮುರಿದ ʻಕಲ್ಕಿ 2898 ಎಡಿʼ!

ಇತ್ತೀಚೆಗೆ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ (Abhishek Ambareesh) ಅಭಿನಯದ ʻಬ್ಯಾಡ್‌ ಮ್ಯಾನರ್ಸ್ʼ ಚಿತ್ರದದಲ್ಲಿ ಉಷಾ ಉತ್ತುಪ್‌ ಬ್ಯಾಡ್‌ ಮ್ಯಾನರ್ಸ್ ಟೈಟಲ್‌ ಟ್ರ್ಯಾಕ್‌ ಹಾಡಿದ್ದರು.

Exit mobile version