Site icon Vistara News

Vicky Kaushal: ಅಂಬಾನಿ ಮದುವೆಯಲ್ಲಿ ಪ್ಲೇ ಆಯ್ತು ವಿಕ್ಕಿ ಕೌಶಲ್‌ ಹಿಟ್‌ ಸಾಂಗ್‌; ʻತೌಬಾ ತೌಬಾʼ ಹುಕ್‌ ಸ್ಟೆಪ್ಸ್‌ಗೆ ಹೆಜ್ಜೆ ಹಾಕಿದ ತಾರೆಯರು!

Vicky Kaushal Tauba Tauba shake a leg at Ambani wedding

ಬೆಂಗಳೂರು: ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭ ಶುಕ್ರವಾರ (ಜು.12) ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಶಾರುಖ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್ (Vicky Kaushal), ಅರ್ಜುನ್ ಕಪೂರ್, ಕೃತಿ ಸನೋನ್, ಮಹೇಶ್ ಬಾಬು, ಮತ್ತು ನಮ್ರತಾ ಶಿರೋಡ್ಕರ್ ಸೇರದಂತೆ ಅನೇಕರು ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಶಾರುಖ್‌ ಸೇರಿದಂತೆ ಅನೇಕರ ಹಿಟ್‌ ಹಾಡುಗಳಿಗೆ ಸ್ಟೆಪ್ಸ್‌ ಹಾಕಿದ್ದಾರೆ. ಇದೆ ವೇಳೆ ಇತ್ತೀಚೆಗೆ ವಿಕ್ಕಿ ಕೌಶಲ್‌ ಅವರ ʻ ತೌಬಾ ತೌಬಾʼ ಹಾಡಿಗೆ ಸಖತ್‌ ಸೆಪ್ಸ್‌ ಹಾಕಿದ್ದಾರೆ ಸೆಲೆಬ್ರಿಟಿಗಳು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ವಿಕ್ಕಿ, ರಣಬೀರ್, ಕೃತಿ, ಅರ್ಜುನ್, ಆಲಿಯಾ, ಕತ್ರಿನಾ, ಶಾರುಖ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರು ಒಟ್ಟಿಗೆ ವೃತ್ತಾಕಾರದಲ್ಲಿ ನಿಂತು ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಶಾರುಕ್‌ ಅವರ ಐಕಾನಿಕ್ ಹಾಡುʻ ಚೈಯ್ಯ ಚೈಯಾʼ ವೀಡಿಯೊ ಪ್ರಾರಂಭವಾಗುತ್ತದೆ. ಮಣಿರತ್ನಂ ಅವರ ʻದಿಲ್ ಸೆʼ (1998) ಚಿತ್ರದ ಹುಕ್‌ ಸ್ಟೆಪ್ ಅನ್ನು ವಿಕ್ಕಿ ಹುರಿದುಂಬಿಸುವಂತೆ ಮಾಡುತ್ತಾರೆ. ಕೆಲವು ಸೆಕೆಂಡುಗಳ ನಂತರ, ವಿಕ್ಕಿಯ ಹೊಸ ವೈರಲ್ ಹಾಡು, ʻಬ್ಯಾಡ್ ನ್ಯೂಸ್‌ʼಸಿನಿಮಾದ ತೌಬಾ ತೌಬಾ ಹಾಡು ಪ್ಲೇ ಆಗುತ್ತದೆ. ರಣಬೀರ್ ನಂತರ ವಿಕ್ಕಿ ಜತೆ ʻತೌಬಾ ತೌಬಾ; ಹಾಡಿಗೆ ಹುಕ್ ಸ್ಟೆಪ್ ಕೂಡ ಹಾಕಿದ್ದಾರೆ.

ಕಳೆದ ವರ್ಷ ರಾಜ್‌ಕುಮಾರ್ ಹಿರಾನಿಯವರ ಡಂಕಿಯಲ್ಲಿ ಶಾರುಖ್ ವಿಕ್ಕಿಯೊಂದಿಗೆ, ಕರಣ್ ಜೋಹರ್ ಅವರ ಏ ದಿಲ್ ಹೈ ಮುಷ್ಕಿಲ್ (2016) ನಲ್ಲಿ ರಣಬೀರ್ ಅವರೊಂದಿಗೆ, ಡಿಯರ್ ಜಿಂದಗಿ (2016) ನಲ್ಲಿ ಆಲಿಯಾ ಅವರೊಂದಿಗೆ ಮತ್ತು ಜಬ್ ತಕ್ ಹೈ ಚಿತ್ರದಲ್ಲಿ ಕತ್ರಿನಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದರಿಂದ ಮತ್ತೆ ಈ ಎಲ್ಲ ನಟರ ಸಮಾಗಮ ನೋಡಲು ಚಂದವಾಗಿತ್ತು.

ʻಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ವಿಕ್ಕಿ ಹಾಗೂ ‘ಅನಿಮಲ್’ ಖ್ಯಾತಿಯ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡಿಗಾಗಿ ತೃಪ್ತಿ ಹಾಟ್ ಅವತಾರ ತಾಳಿದ್ದಾರೆ. ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದಾರೆ. ʻತೌಬಾ ತೌಬಾʼ ಹಾಡು ಹಿಟ್ ಆಗುತ್ತಿದ್ದಂತೆ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡಿತ್ತು.

ಇದನ್ನೂ ಓದಿ: Vicky Kaushal-Tripti Dimri: ತೃಪ್ತಿಯನ್ನು ತಬ್ಬಿ ಮುದ್ದಾಡಿದ ಕತ್ರಿನಾ ಪತಿ ವಿಕ್ಕಿ ಕೌಶಲ್;  ಹಾಟ್ ಸಾಂಗ್‌ಗೆ ಫ್ಯಾನ್ಸ್‌ ಫಿದಾ!

 ‘ಬ್ಯಾಡ್ ನ್ಯೂಸ್’ ಸಿನಿಮಾವನ್ನು ಆನಂದ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಇದು ರೊಮ್ಯಾಂಟಿಕ್ ಮತ್ತು ಹಾಸ್ಯ ಪ್ರಧಾನ ಚಿತ್ರವಾಗಿದೆ. ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಅಮೃತಪಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ವಿಕ್ಕಿ ಕೌಶಲ್,ತೃಪ್ತಿ ಡಿಮ್ರಿ ಮತ್ತು ಆಮಿ ವಿರ್ಕ್ ಮೂವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಲಿಯೊ ಮೀಡಿಯಾ ಕಲೆಕ್ಟಿವ್ ಸಹಯೋಗದಲ್ಲಿ ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. 

Exit mobile version