ಬೆಂಗಳೂರು: ವಿಕ್ಕಿ ಕೌಶಲ್ (Vicky Kaushal) ತಮ್ಮ ಮುಂದಿನ ಚಿತ್ರ `ಛಾವಾ’ದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಈ ಸಿನಿಮಾಗಾಗಿ ರಶ್ಮಿಕಾ ವಿಶೇಷವಾದ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು. ಇದೀಗ ವಿಕ್ಕಿ ಕೌಶಲ್ ಕೂಡ ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಈಗ ಅವರು 25 ಕೆಜಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಅವರು ಛತ್ರಪತಿ ಶಿವಾಜಿ ಮಗ ಛತ್ರಪತಿ ಸಾಂಬಾಜಿ ಮಹರಾಜ್ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಇನ್ನೂ ದಪ್ಪ ಆಗಬೇಕಿದೆ. ಈ ಕಾರಣಕ್ಕೆ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ವಿಕ್ಕಿ ಕೌಶಲ್ ಅವರು ದೇಹದ ತೂಕ ಹೆಚ್ಚಿಸಿಕೊಳ್ಳಲು ಬೇರೆ ಡಯಟ್ ಫಾಲೋ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೂ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆ. ಅವರು ಛತ್ರಪತಿ ಸಾಂಬಾಜಿ ಮಹರಾಜ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.
ಇದನ್ನೂ ಓದಿ: Rashmika Mandanna: ಸಿನಿಮಾ ಮಾತ್ರವಲ್ಲ ಫೋಟೊಶೂಟ್‌ನಲ್ಲೂ ಮಿಂಚುತ್ತಿರುವ ನ್ಯಾಷನಲ್ ಕ್ರಶ್!
ರಶ್ಮಿಕಾ ಈಗಾಗಲೇ ಈ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಧ್ವನಿತರಬೇತಿಯನ್ನು ಪಡೆಯುತ್ತಿದ್ದಾರೆ. ಕತ್ತಿ ಕಾಳಗ, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾಗಲು ನಾಲ್ಕು ತಿಂಗಳ ಕಾಲ ತರಬೇತಿಯನ್ನು ವಿಕ್ಕಿ ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪ್ರಾಜೆಕ್ಟ್ ಅನ್ನು ದೊಡ್ಡದಾಗಿ ಮಾಡಲು ತಾಂತ್ರಿಕವಾಗಿಯೂ ಪಳಗಿದವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಸ್ತ್ರೀ’, ‘ಭೇಡಿಯಾ’ ಮೊದಲಾದ ಸಿನಿಮಾಗಳಿಗೆ ಬಂಡವಾಳ ಹೂಡಿದ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ʻಛಾವಾʼ ಸಿನಿಮಾ ಈ ಪ್ರೊಡಕ್ಷನ್ ಹೌಸ್‌ನ ಮೊದಲ ಐತಿಹಾಸಿಕ ಯೋಜನೆಯಾಗಿದೆ. ಈ ಯೋಜನೆ ವಿಕ್ಕಿ ಮತ್ತು ರಶ್ಮಿಕಾ ಅವರ ಮೊದಲ ಸಹಯೋಗವಾಗಿದೆ. ಈ ಹಿಂದೆ ಒಳಉಡುಪುಗಳ ಜಾಹೀರಾತಿಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು.