ಬೆಂಗಳೂರು: 2002ರ ಫೆಬ್ರವರಿ 27ರಂದು ಗುಜರಾತ್‌ನ ಗೋದ್ರಾದಲ್ಲಿ `ಸಬರಮತಿ ರೈಲಿಗೆ’ ಬೆಂಕಿ ಹಚ್ಚಿದ್ದ ವಿಧ್ವಂಸಕ ಕೃತ್ಯದಲ್ಲಿ 59 ಮಂದಿ ಮೃತಪಟ್ಟಿದ್ದರು. ಅದರ ಮಾರನೇ ದಿನ ಅಂದರೆ ಫೆ.28ರಂದು ರಾಜ್ಯದ ಹಲವೆಡೆ ಗಲಭೆಗಳು (Post Godhra Case) ನಡೆದಿದ್ದವು. ಇದೀಗ ʻಗೋದ್ರಾ ಹತ್ಯಾಕಾಂಡʼ ಕುರಿತ ಸಿನಿಮಾ ತಯಾರಾಗಿದೆ. ಈ ಚಿತ್ರಕ್ಕೆ ʻದಿ ಸಬರಮತಿ ರಿಪೋರ್ಟ್ʼʼಎಂದು (The Sabarmati Report) ಟೈಟಲ್ ಇಡಲಾಗಿದೆ. ಇದರ ಟೀಸರ್ ಔಟ್ ಆಗಿದ್ದು ಭಾರಿ ಸದ್ದು ಮಾಡುತ್ತಿದೆ.
’12th ಫೇಲ್’ ಸಿನಿಮಾ ಯಶಸ್ಸಿನ ಬಳಿಕ ವಿಕ್ರಾಂತ್ ಮಾಸ್ಸಿ ಈ ಸಿನಿಮಾ ಘೋಷಿಸಿದ್ದಾರೆ. ವಿಕ್ರಾಂತ್ ಮಾಸ್ಸಿ ಅವರು ಟೀಸರ್‌ನೊಂದಿಗೆ ಚಿತ್ರವನ್ನು ಘೋಷಿಸಿದರು. ವಿಡಿಯೊದಲ್ಲಿ, ಅವರು ಗೋದ್ರಾ ಘಟನೆಯ ಸುದ್ದಿಯನ್ನು ಬ್ರೇಕಿಂಗ್ ಮಾಡುವ ಪತ್ರಕರ್ತ ಶ್ರಬನ್ ಕುಮಾರ್ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ ಹಂಚಿಕೊಂಡ ಅವರು, “22 ವರ್ಷಗಳ ಹಿಂದೆ ಗೋದ್ರಾ ರೈಲು ದುರಂತದಲ್ಲಿ ಪ್ರಾಣ ಕಳೆದುಕೊಂಡ 59 ಅಮಾಯಕರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. 2024ರ ಮೇ 3ರಂದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆʼʼಎಂದು ಬರೆದುಕೊಂಡಿದ್ದಾರೆ.
ಸಬರಮತಿ ವರದಿಯಲ್ಲಿ ಮಾಸ್ಸಿಯ ಹೊರತಾಗಿ ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅಂಶುಲ್ ಮೋಹನ್ ನಿರ್ಮಾಣದ ರಂಜನ್ ಚಂದೇಲ್ ನಿರ್ದೇಶನದ ಈ ಚಿತ್ರ ಮೇ 3 ರಂದು ತೆರೆಗೆ ಬರಲಿದೆ.
ಇದನ್ನೂ ಓದಿ: Rama Devotees Insult: ಗೋಧ್ರಾ ಮಾದರಿ ರೈಲು ಸುಡುವ ಬೆದರಿಕೆ: ಬಿ.ಕೆ. ಹರಿಪ್ರಸಾದ್‌ರನ್ನೂ ತನಿಖೆಗೊಳಪಡಿಸಿ: ಸಿ.ಟಿ. ರವಿ
ʻದಿ ಸಾಬರಮತಿ ರಿಪೋರ್ಟ್ ಟೀಸರ್
ಏನಿದು ʻಗೋದ್ರಾ ಹತ್ಯಾಕಾಂಡʼ?
2002ರ ಪೆಬ್ರವರಿ 27ರಂದು ಅಯೋಧ್ಯೆಯಿಂದ ಕರಸೇವಕರನ್ನು ಹೊತ್ತು ಬಂದ ಸಬರಮತಿ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಗೋಧ್ರಾ ರೈಲ್ವೆ ನಿಲ್ದಾಣದ ಬಳಿಕ ನಿಲ್ಲಿಸಿತ್ತು. ಆಗ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ತಗುಲಿ 59 ಮಂದಿ ಸಜೀವ ದಹನವಾದರು. ಇನ್ನೂ ದುರಂತವೆಂದರೆ ಸತ್ತವರಲ್ಲಿ 25 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದರು. ಒಂದು ವರ್ಷದವರೆಗೆ ನಡೆದ ಗಲಭೆಗಳಲ್ಲಿ 1044 ಮಂದಿ ಮೃತಪಟ್ಟಿರುವುದು ಅಧಿಕೃತವಾಗಿ ದಾಖಲಾಗಿರುವ ಮಾಹಿತಿ. 2500 ಜನರು ಗಾಯಗೊಂಡಿದ್ದರು. ಇನ್ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು ಮೃತಪಟ್ಟ ಸಾವಿರ ಮಂದಿ ಪೈಕಿ ಮುಸ್ಲಿಮರು 790 ಮತ್ತು ಹಿಂದೂಗಳು 254 ಮಂದಿ ಎಂಬುದು ಅಧಿಕೃತ ಲೆಕ್ಕ. ಕೆಲವೊಂದು ವರದಿಗಳ ಪ್ರಕಾರ ಹತ್ಯೆಯಾದವರ ಸಂಖ್ಯೆ 2 ಸಾವಿರಕ್ಕೂ ಹೆಚ್ಚು.