Site icon Vistara News

Vinesh Phogat: ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ, ಇದು ಮಹಿಳೆಯರಿಗೆ ಪಾಠ ಎಂದ ಹೇಮಾ ಮಾಲಿನಿ ಫುಲ್‌ ಟ್ರೋಲ್‌!

Vinesh Phogat Hema Malini's Comment Loses 100 gm

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics 2024) 50 ಕಿಲೋ ತೂಕದ ವಿಭಾಗದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬೆನ್ನಲ್ಲೇ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಕುಸ್ತಿಗೆ (Wrestling) ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ (Social media X) ಪೋಸ್ಟ್ ಮೂಲಕ ಅವರು ಕುಸ್ತಿಯಿಂದ ನಿವೃತ್ತಿ (retirement) ಘೋಷಿಸಿದರು. ಒಲಿಂಪಿಕ್ ಕ್ರೀಡಾಕೂಟದ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ ವಿನೇಶ್ ಪೋಗಟ್, ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇದೀಗ ಅನರ್ಹತೆಯಿಂದಾಗಿ ಕಂಚು ಕೂಡ ಅವರಿಗೆ ದೊರೆಯುವುದಿಲ್ಲ. ಈ ಅಹಿತಕರ ಘಟನೆಗೆ ಪ್ರತಿಕ್ರಿಯಿಸಿದ ಹಿರಿಯ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಹೇಳಿಕೆಯು ನೆಟ್ಟಿಗರಿಗೆ ಸರಿ ಎನಿಸಿಲ್ಲ.

ಈ ಬಗ್ಗೆ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ ʻʻಇದು ತುಂಬಾ ಆಶ್ಚರ್ಯಕರವಾಗಿದೆ. 100 ಗ್ರಾಂ ಅಧಿಕ ತೂಕದ ಕಾರಣಕ್ಕಾಗಿ ಅನರ್ಹಗೊಳಿಸಿರುವುದು ವಿಚಿತ್ರವಾಗಿದೆ. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಇದು ನಮಗೆಲ್ಲರಿಗೂ ಪಾಠವಾಗಿದೆ. ಕಲಾವಿದರಿಗೆ, ಮಹಿಳೆಯರಿಗೆ ಇದು ಒಂದು ಪಾಠ. ವಿನೇಶ್​ ಆದಷ್ಟು ಬೇಗ 100 ಗ್ರಾಂ ತೂಕ ಇಳಿಸಿಕೊಳ್ಳಲಿ. ಆದರೆ ಅವರಿಗೆ ಇನ್ನೊಂದು ಅವಕಾಶ ಸಿಗುವುದಿಲ್ಲ’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಇಂಥ ಹೇಳಿಕೆಗಳನ್ನು ನೀಡುವ ಹೇಮಾ ಮಾಲಿನಿ ಅವರು ಸಂಸದೆ ಆಗಲು ಅನರ್ಹರು ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ‘ಇಂಥವರಿಗೆ ಜನರು ಹೇಗೆ ಮತ ಹಾಕುತ್ತಾರೆ ಅಂತ ನನಗೆ ಅರ್ಥವೇ ಆಗುತ್ತಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Vinesh Phogat: ಬೆಳ್ಳಿ ಪದಕಕ್ಕಾಗಿ ಕೋರ್ಟ್‌ ಕದ ತಟ್ಟಿದ ವಿನೇಶ್‌ ಫೋಗಟ್‌; ಇಂದು ತೀರ್ಪು ಪ್ರಕಟ

ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ವಿನೇಶ್​ ಫೋಗಟ್​ ಅವರಿಗೆ ಧೈರ್ಯ ತುಂಬಿದ್ದಾರೆ. ಆಲಿಯಾ ಭಟ್​, ಫರ್ಹಾನ್​ ಅಖ್ತರ್​, ಕರೀನಾ ಕಪೂರ್​, ತಾಪ್ಸಿ ಪನ್ನು, ರಣವೀರ್​ ಸಿಂಗ್​, ರಕುಲ್​ ಪ್ರೀತ್​ ಸಿಂಗ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‘ವಿನೇಶ್​ ಅವರೇ ನಮ್ಮ ಪಾಲಿನ ಚಾಂಪಿಯನ್​’ ಎಂದು ಹೇಳಿದ್ದಾರೆ. 

ವಿನೇಶ್‌ಗೆ ತಾರೆಯರ ಬೆಂಬಲ

ವಿನೇಶ್‌ ಫೋಗಟ್‌ ಅವರ ಪರವಾಗಿ ಬಾಲಿವುಡ್‌ ಸೆಲೆಬ್ರಿಟಿಗಳು ನಿಂತಿದ್ದಾರೆ. ಫರ್ಹಾನ್ ಅಖ್ತರ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಕುಸ್ತಿಪಟುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ವಿನೇಶ್ ಫೋಗಟ್ ನೀವು ಇಡೀ ದೇಶಕ್ಕೆ ಸ್ಫೂರ್ತಿ. ನಿಮ್ಮ ಸ್ಥೈರ್ಯವನ್ನು , ನಿಮ್ಮ ಧೈರ್ಯವನ್ನು ಯಾವುದೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮತ್ತು ಇತಿಹಾಸವನ್ನು ಸೃಷ್ಟಿಸಲು ನೀವು ಅನುಭವಿಸಿದ ಕಷ್ಟಗಳನ್ನು ಯಾವುದೂ ತೆಗೆದುಹಾಕುವುದಿಲ್ಲ! ನಾವು ನಿಮ್ಮೊಂದಿಗೆ ಇರುತ್ತೇವೆ. ನೀವೇ ಚಿನ್ನ – ನೀವೇ ಕಬ್ಬಿಣ ಮತ್ತು ನೀವೇ ಸ್ಟೀಲ್‌! ಯಾವುದೂ ನಿಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ! ಯುಗಗಳ ಚಾಂಪಿಯನ್! ನಿಮ್ಮಂತೆ ಯಾರೂ ಇಲ್ಲʼʼ ಎಂದು ಬರೆದುಕೊಂಡಿದ್ದಾರೆ.

ಫರ್ಹಾನ್ ಅಖ್ತರ್ ಅವರು ಪೋಸ್ಟ್‌ನಲ್ಲಿ ವಿನೇಶ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತು ಶೀರ್ಷಿಕೆಯಲ್ಲಿ ಬರೆದಿದ್ದಾರೆ, ” ವಿನೇಶ್ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಮತ್ತು ನೀವು ಕ್ರೀಡೆಗಾಗಿ ಮಾಡಿದ್ದೀರಿʼʼ ಎಂದು ಬರೆದುಕೊಂಡಿದ್ದಾರೆ. ಜೋಯಾ ಅಖ್ತರ್ “ಚಾಂಪಿಯನ್ ನೀವು ಚಿನ್ನ! ನೀವು ಸಾಧಿಸಿದ್ದು ಪದಕಗಳನ್ನು ಮೀರಿದ್ದು. ತುಂಬಾ ಹೆಮ್ಮೆ. ಸ್ಫೂರ್ತಿʼʼಎಂದು ಬರೆದುಕೊಂಡಿದ್ದಾರೆ. ವಿಕ್ಕಿ ಕೌಶಲ್‌, ಪದಕಗಳನ್ನು ಮೀರಿದ ವಿಜೇತೆ ಎಂದು ಬರೆದುಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್‌ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು.

Exit mobile version