ಬೆಂಗಳೂರು: ವೆಡ್ಡಿಂಗ್ ಫಿಲ್ಮರ್ ಎಂದೂ ಕರೆಯಲ್ಪಡುವ ನಿರ್ಮಾಪಕ ವಿಶಾಲ್ ಪಂಜಾಬಿ ( Vishal Punjabi) ಅವರು ಹಲವಾರು ಉನ್ನತ-ಪ್ರೊಫೈಲ್ ಜೋಡಿಗಳ ವೀಡಿಯೊಗ್ರಾಫ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಕಿಯಾರಾ ಆಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಕೆಲಸ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವಿಶಾಲ್ ಪಂಜಾಬಿ ಅವರು ಚಿತ್ರೀಕರಿಸಿದ ಯಾವುದಾದರೂ ಒಂದು ಜೋಡಿ ವಿಚ್ಛೇದನದಲ್ಲಿ ಕೊನೆಗೊಂಡಿತೆ? ಎಂದು ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ವಿಶಾಲ್ ಹೇಳಿದ್ದು ಹೀಗೆ.
ವಿಶಾಲ್ ಪಂಜಾಬಿ ಈ ಬಗ್ಗೆ ಮಾತನಾಡಿ ʻʻಸೆಲೆಬ್ರಿಟಿಗಳಲ್ಲಿಯೇ ಈ ಘಟನೆ ಜಾಸ್ತಿ. ಮದುವೆಯಾದ ಎರಡು ತಿಂಗಳ ನಂತರ ಆಕೆಗೆ ಮೋಸ ಮಾಡುವರು ಇರುತ್ತಿದ್ದರು. ಸೆಟ್‌ನಲ್ಲಿ ತನ್ನ ಮೇಕಪ್ ವ್ಯಾನ್‌ನಲ್ಲಿ ನಟಿಯರೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವವರು ಇದ್ದರು. ಹೆಂಡತಿ ಆ ಬಳಿಕ ಅವನನ್ನು ಬೆತ್ತಲೆಯಾಗಿ ನೋಡಿರುವ ಘಟನೆ ಇತ್ತು. ಇದು ಒಬ್ಬ ಖ್ಯಾತ ನಟನ ಸ್ಟೋರಿʼʼಎಂದರು.
ʻʻಕೆಲವೊಮ್ಮೆ ನಾನು ಕರೆ ಮಾಡುವಾಗ ವರ ಕಾಲ್ ತೆಗೆದುಕೊಳ್ಳುವುದಿಲ್ಲ, ವಧುವಿಗೆ ಕರೆ ಮಾಡಿದರೆ, ಮದುವೆಯ ವಿಡಿಯೊ ಬೇಡ, ಕರೆ ಮಾಡಬೇಡಿ ಎನ್ನುತ್ತಾರೆ. ಮ್ಯಾನೇಜರ್‌ಗೆ ಕರೆ ಮಾಡಿದರೆ ಅದೇ ರೀತಿ ಉತ್ತರ ಬರುತ್ತದೆ. ಆ ಸಂದರ್ಭದಲ್ಲಿ ನಾನು ಏನು ಮಾಡಬೇಕು? ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲೆ? ಹೀಗಾಗಿ ನಾನು ಕಾಂಟ್ರ್ಯಾಕ್ಟ್ ಮಾಡಲು ಆರಂಭಿಸಿದೆʼʼಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.
Dhruva Sarja: 3 ವರ್ಷವಾದರೂ ʻಮಾರ್ಟಿನ್ʼ ಸಿನಿಮಾ ರಿಲೀಸ್ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?ಇದನ್ನೂ ಓದಿ:
ʻʻಕೆಲವೊಮ್ಮೆ ವಿಡಿಯೊದಲ್ಲಿ ವರನು ಅಳುತ್ತಾ ನಾನು ನಿನ್ನನ್ನು ಪ್ರೀತಿಸುತ್ತೇನೆ, ಬೇಬಿ’ ಎಂದು ಹೇಳುತ್ತಾನೆ. ಅವು ಮೊಸಳೆ ಕಣ್ಣೀರು ಎಂದು ನಿಮಗೆ ತಿಳಿದಿದೆ. ಈ ಕಥೆ ದೊಡ್ಡ ಬಾಲಿವುಡ್ ನಟದ್ದು. ಹೆಸರು ಬೇಡ. ಆ ತುಣುಕಿನ ಮೌಲ್ಯವು ಲಕ್ಷಾಂತರ ಮೌಲ್ಯದ್ದಾಗಿದೆ. ನಾನು ಅದನ್ನು ಮಾರಿ ಹಣ ಸಂಪಾದಿಸಬಹುದು. ಆದರೆ ಅದು ಸರಿಯಲ್ಲʼʼಎಂದರು. ಮದುವೆಯ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು, ವಿಶಾಲ್ ಶಾರುಖ್ ಖಾನ್ ಅವರೊಂದಿಗೆ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ನಲ್ಲಿ ಒಂದು ದಶಕದ ಕಾಲ ಕೆಲಸ ಮಾಡಿದರು.