Site icon Vistara News

Jr NTR: `ವಾರ್‌ 2′ ಸಿನಿಮಾ ಶೂಟಿಂಗ್‌ ಫೋಟೊಗಳು ಲೀಕ್‌!

War 2 New leaked pics show

ಬೆಂಗಳೂರು: ʻವಾರ್‌ 2ʼ (Jr NTR) ಸಿನಿಮಾದ ಜ್ಯೂನಿಯರ್‌ ಎನ್‌ಟಿಆರ್‌ ಲುಕ್‌ ಇತ್ತಿಚೆಗಷ್ಟೇ ಅನಾವರಣಗೊಂಡಿತ್ತು. ಅಯಾನ್ ಮುಖರ್ಜಿ ( Ayan Mukerji) ಅವರ ಸ್ಪೈ ಆಕ್ಷನ್ ಥ್ರಿಲ್ಲರ್‌ ಈ ಸಿನಿಮಾದ ಸೆಟ್‌ಗಳಿಂದ ಹೆಚ್ಚಿನ ಚಿತ್ರಗಳು ಸೋರಿಕೆಯಾಗಿವೆ. ಇದೀಗ ಮುಂಬೈನಲ್ಲಿ ನಡೆದ ಚಿತ್ರದ ಚಿತ್ರೀಕರಣದ ಕೆಲವು ಫೋಟೊಗಳು ಲೀಕ್‌ ಆಗಿವೆ. ಅದರಲ್ಲಿ ಹೃತಿಕ್ ರೋಷನ್ (Hrithik Roshan) ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಇರುವ ಫೋಟೊ ಕೂಡ ಲೀಕ್‌ (New leaked pics) ಆಗಿದೆ.

ಸೋರಿಕೆಯಾದ ಹೊಸ ಫೋಟೊದಲ್ಲಿ ಹೃತಿಕ್ ವಾರ್‌ ಮೋಡ್‌ನಲ್ಲಿ ಇದ್ದಾರೆ. ಅವರು ಬಿಳಿ ಟಿ-ಶರ್ಟ್ ಮತ್ತು ಕಪ್ಪು ವೆಸ್ಟ್ ಧರಿಸಿರುವುದನ್ನು ಕಾಣಬಹುದು. ಜ್ಯೂನಿಯರ್‌ ಎನ್‌ಟಿಆರ್‌ ಕೂಡ ಬೂದು ಬಣ್ಣದ ಟಿ-ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಚಿತ್ರೀಕರಣ ಮಾಡುತ್ತಿದ್ದರು. ಮತ್ತೊಂದು ಸ್ಟಿಲ್‌ನಲ್ಲಿ, ಹೃತಿಕ್ ಅವರ ಹಣೆಯ ಮೇಲೆ ಸ್ವಲ್ಪ ರಕ್ತ ಕಾಣಿಸಿಕೊಂಡಿದ್ದು, ಅವರು ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುತ್ತಿದ್ದಾರೆ ಎಂದು ಸೂಚಿಸುತ್ತದೆ.

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಜ್ಯೂನಿಯರ್‌ ಎನ್‌ಟಿಆರ್‌ ಇತ್ತೀಚಿನ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ ಸಿನಿಮಾಗಾಗಿ 45 ಕೋಟಿ ರೂ. ಪಡೆದಿದ್ದರು. ವಾರ್‌ 2 ಸಿನಿಮಾಗಾಗಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Jr NTR: ಗೋವಾದಲ್ಲಿ ಜ್ಯೂ. ಎನ್‌ಟಿಆರ್ ಸಿನಿಮಾ ಶೂಟಿಂಗ್‌; ಲೀಕ್‌ ಆಯ್ತು ದೃಶ್ಯ!

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ. ಕಿಯಾರಾ ಆಡ್ವಾಣಿ ಈ ಸಿನಿಮಾ ನಾಯಕಿ. ವಾರ್ 2 2025ರ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

Exit mobile version