ಬೆಂಗಳೂರು: ಯಾಮಿ ಗೌತಮ್ (Yami Gautam) ಮತ್ತು ಆದಿತ್ಯ ಧರ್ (Aditya Dhar) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುಂಬೈನಲ್ಲಿ ನಡೆದ ‘ಆರ್ಟಿಕಲ್ 370’ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದಂಪತಿ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡರು. ಯಾಮಿ ಅವರು ‘ಆರ್ಟಿಕಲ್ 370’ ಪತ್ರಿಕಾಗೋಷ್ಠಿಯಲ್ಲಿ ಬ್ಲೇಜರ್‌ನೊಂದಿಗೆ ಬಿಳಿ ಮ್ಯಾಕ್ಸಿ ಡ್ರೆಸ್‌ನಲ್ಲಿ ಮಿಂಚಿದ್ದರು. ಪತಿ ಆದಿತ್ಯ ಅವರು ಯಾಮಿ ಗೌತಮ್ ಅವರಿಗೆ ಕಮ್‌ಫರ್ಟ್ ಆಗಿ ಕುಳಿತುಕೊಳ್ಳಬೇಕೆಂದು ದಿಂಬನ್ನು ನೀಡಿದ್ದು ಎಲ್ಲರ ಗಮನ ಸಳೆದಿದೆ. ಯಾಮಿ ಗೌತಮ್ ಫ್ಯಾನ್ಸ್ ಆದಿತ್ಯ ಅವರು ಮಾಡುವ ಕೇರ್‌ಗೆ ಹಾಡಿ ಹೊಗಳುತ್ತಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಫೆಬ್ರವರಿ 8ರಂದು ಮುಂಬೈನಲ್ಲಿ ನಡೆದ ‘ಆರ್ಟಿಕಲ್ 370’ ಪತ್ರಿಕಾಗೋಷ್ಠಿಯಲ್ಲಿ ಯಾಮಿ ಗೌತಮ್ ಅವರು ಮಿಂಚಿದ್ದಾರೆ. ಯಾಮಿ ಮತ್ತು ಆದಿತ್ಯ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸುದ್ದಿಯನ್ನು ಈ ವೇಳೆ ಹಂಚಿಕೊಂಡರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ವಿಧಿ 370 ರದ್ದಾದ ಬಗ್ಗೆ ಸಿನಿಮಾ ಸಿದ್ಧಗೊಂಡಿದೆ. ಯಾಮಿ ಗೌತಮ್ ನಟನೆಯ ಈ ಚಿತ್ರ ಇದೇ ತಿಂಗಳಾಂತ್ಯದಲ್ಲಿ ತೆರೆ ಕಾಣಲಿದೆ. ‘ಆರ್ಟಿಕಲ್ 370’ ಚಿತ್ರದಲ್ಲಿ ನಾಯಕಿಯಾಗಿ ಮತ್ತೊಮ್ಮೆ ಮಿಂಚಲಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಚಿತ್ರದ ಟೀಸರ್ ಭಾರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು.
ಚಿತ್ರ ಫೆಬ್ರವರಿ 23ರಂದು ಬಿಡುಗಡೆಯಾಗಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ, ಅದರಿಂದ ಉಂಟಾದ ರಾಜಕೀಯ ಅಸ್ಥಿರತೆ ಒಂದು ಸಣ್ಣ ನೋಟವನ್ನು ಟ್ರೈಲರ್‌ನಲ್ಲಿ ಕಾಣಬಹುದು.
ಇದನ್ನೂ ಓದಿ: Yami Gautam:ಚಿತ್ರರಂಗ ತೊರೆಯಲು ನಿರ್ಧಾರ ಮಾಡಿದ್ರಂತೆ ಯಾಮಿ ಗೌತಮ್
ಆದಿತ್ಯ ಸುಹಾಸ್ ಜಂಭಳೆ ನಿರ್ದೇಶನದ ಈ ಸಿನಿಮಾ ಪ್ರಿಯಾಮಣಿ, ವೈಭವ್ ತತ್ವವಾದಿ, ಅರುಣ್ ಗೋವಿಲ್ ಮತ್ತು ರಾಜ್ ಅರ್ಜುನ್ ಅವರನ್ನೂ ಒಳಗೊಂಡಿದೆ. ಆದಿತ್ಯ ಧರ್, ಲೋಕೇಶ್ ಧರ್ ಮತ್ತು ಜ್ಯೋತಿ ದೇಶ್ಪಾಂಡೆ ಬಂಡವಾಳ ಹೂಡಿದ್ದಾರೆ.