Site icon Vistara News

Box Office Collection: ಎರಡನೇ ದಿನ ʻದಿ ವ್ಯಾಕ್ಸಿನ್ ವಾರ್ʼಗಳಿಕೆ 85 ಲಕ್ಷ ರೂ.; ಕಂಗನಾ ಸಾಧಾರಣ, ಗೆದ್ದು ಬೀಗಿದ ಕನ್ನಡತಿ!

vaccine war chandramukhi skanda

ಬೆಂಗಳೂರು: ಸೆ.28ರಂದು (The Vaccine War Box Office) ಬಹು ನಿರೀಕ್ಷಿತ ವಿವೇಕ್‌ ಅಗ್ನಿಹೋತ್ರಿ ಅವರ ‘ದಿ ವ್ಯಾಕ್ಸಿನ್ ವಾರ್’ ಬಿಡುಗಡೆಗೊಂಡಿತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದ (Box Office Collection) ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಕ್ಸ್ ಆಫೀಸ್‌ನಲ್ಲಿ ಮೊದಲನೇ ದಿನ ಕೇವಲ ಒಂದು ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ‘ಚಂದ್ರಮುಖಿ 2’ ಸಿನಿಮಾ ಮೊದಲ ದಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕನ್ನಡತಿ ಶ್ರೀಲೀಲಾ ತೆಲುಗಿನಲ್ಲಿ ನಟಿಸಿರುವ ‘ಸ್ಕಂದ’ ಸಿನಿಮಾ ಇವೆರಡು ಸಿನಿಮಾಗಳಿಗಿಂತ ಉತ್ತಮ ಕಲೆಕ್ಷನ್‌ ಮಾಡಿದೆ.

ದಿ ವ್ಯಾಕ್ಸಿನ್ ವಾರ್

‘ದಿ ವ್ಯಾಕ್ಸಿನ್ ವಾರ್’ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಮೊದಲನೇ ದಿನ ಕೇವಲ ಒಂದು ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಯಾದಾಗ ಸಾಕಷ್ಟು ಪ್ರಚಾರಗಳು ಆಗಿದ್ದರೂ ಜನರನ್ನು ತಲಪುವಲ್ಲಿ ಸಿನಿಮಾ ಸೋತಿದೆ. ವರದಿಯ ಪ್ರಕಾರ, ಆರಂಭಿಕ ಅಂದಾಜಿನ ಪ್ರಕಾರ ವ್ಯಾಕ್ಸಿನ್ ವಾರ್ ಭಾರತದಲ್ಲಿ ತನ್ನ ಎರಡನೇ ದಿನ 85 ಲಕ್ಷ ರೂ. ನಿವ್ವಳ ಗಳಿಸಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ 3.75 ಕೋಟಿ ರೂಪಾಯಿ ಗಳಿಸಿತ್ತು. ‘ದಿ ವ್ಯಾಕ್ಸಿನ್ ವಾರ್’ ಗುರುವಾರ (ಸೆ.28) ಶೇ.10.17 ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಸುಮಾರು 10 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ ಎನ್ನಲಾಗಿದೆ. ಮಹಿಳಾ ವಿಜ್ಞಾನಿಗಳು ಕೋವ್ಯಾಕ್ಸಿನ್‌ಗೋಸ್ಕರ ಹೇಗೆಲ್ಲ ಶ್ರಮಿಸುತ್ತಾರೆ ಎಂಬ ಬಗ್ಗೆ ಸಿನಿಮಾವಿದೆ.

ಇದನ್ನೂ ಓದಿ: Jawan box office collection: 9 ತಿಂಗಳಲ್ಲೇ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್‌; ʻಜವಾನ್‌ʼ ಹೊಸ ದಾಖಲೆ!

ಚಂದ್ರಮುಖಿ 2

 ತಮಿಳಿನ ಚಂದ್ರಮುಖಿ ಸಿನಿಮಾದ ಎರಡನೇ ಭಾಗವಾದ ಚಂದ್ರಮುಖಿ 2 (Chandramukhi 2) ಸಿನಿಮಾ ಸೆ.28ರಂದು ತೆರೆಗೆ ಬಂತು. ಈ ಸಿನಿಮಾ ಮೊದಲ ದಿನವೇ 7.5 ಕೋಟಿ ರೂಪಾಯಿ ಹಣ ಗಳಿಸಿದೆ. ಎರಡನೇ ದಿನ ಸಿನಿಮಾ 4.50 ಕೋಟಿ ರೂ. ಗಳಿಕೆ ಕಂಡಿದೆ. ಪಿ ವಾಸು ಅವರು ನಿರ್ದೇಶನ ಮಾಡಿರುವ ಚಂದ್ರಮುಖಿ 2 ಸಿನಿಮಾದಲ್ಲಿ ಕಂಗನಾ ಜತೆ ರಾಘವ ಲಾರೆನ್ಸ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಚಂದ್ರಮುಖಿ ಸಿನಿಮಾದಲ್ಲಿ ರಜನಿಕಾಂತ್‌ ಮತ್ತು ನಟಿ ಜ್ಯೋತಿಕಾ ಅವರು ನಟಿಸಿದ್ದರು. ಕನ್ನಡದ ಆಪ್ತಮಿತ್ರ ಸಿನಿಮಾವನ್ನೇ ಚಂದ್ರಮುಖಿ ಸಿನಿಮಾವನ್ನಾಗಿ ರಿಮೇಕ್‌ ಮಾಡಲಾಗಿತ್ತು. ಇದೀಗ ಚಂದ್ರಮುಖಿ 2 ಸಿನಿಮಾದಲ್ಲಿ ರಜನಿಕಾಂತ್‌ ಅವರ ವೆಟ್ಟೈಯಾನ್‌ ಪಾತ್ರವನ್ನು ರಾಘವ್‌ ಅವರು ನಿಭಾಯಿಸಿದ್ದಾರೆ.

ಸ್ಕಂದ ಸಿನಿಮಾ

ರಾಮ್ ಪೋತಿನೇನಿ (ram pothineni) ಹಾಗೂ ಶ್ರೀಲೀಲಾ (Actress Sreeleela) ನಟನೆಯ ‘ಸ್ಕಂದ’ ಸಿನಿಮಾ ಮೊದಲನೇ ದಿನವೇ ವಿಶ್ವದಾದ್ಯಂತ 18.2 ಕೋಟಿ ರೂಪಾಯಿ ಹಣ ಗಳಿಸಿದೆ. ಎರಡು ತೆಲುಗು ರಾಜ್ಯಗಳಲ್ಲಿಯೇ ಈ ಸಿನಿಮಾ ಮೊದಲ ದಿನ 9 ಕೋಟಿ ರೂಪಾಯಿ ಹಣ ಗಳಿಸಿದೆ. ಬೇರೆ ರಾಜ್ಯಗಳು ಹಾಗೂ ದುಬೈ ಸೇರಿದಂತೆ ಇತರೆ ದೇಶಗಳ ಕಲೆಕ್ಷನ್ ಒಟ್ಟು ಮಾಡಿ ಮೊದಲ ದಿನ 18.20 ಕೋಟಿ ಹಣ ಗಳಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು 22.55 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Chandramukhi 2: ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ-2’ ರಿಲೀಸ್‌ ಪೋಸ್ಟ್‌ಪೋನ್‌!

ಇಷ್ಟು ದಿನಗಳ ಕಾಲ ಲವರ್ ಬಾಯ್ ಆಗಿ ಮಿಂಚಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕನ್ನಡತಿ ಶ್ರೀಲೀಲಾ, ರಾಮ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್‌ಎಸ್ ಮ್ಯೂಸಿಕ್ ಕಿಕ್ ಈ ಚಿತ್ರಕ್ಕಿದೆ.ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾವನ್ನು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಬೋಯಪಾಟಿ ಶ್ರೀನು ನಿರ್ದೇಶನವಿದೆ.

Exit mobile version