ಬ್ರೆಜಿಲಿಯನ್ ಗಾಯಕ ಡಾರ್ಲಿನ್ ಮೊರೈಸ್ (Darlyn Morais) ಮುಖಕ್ಕೆ ಜೇಡ ಕಚ್ಚಿದ್ದರಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರಿಗೆ ಕೇವಲ 28 ವರ್ಷ ವಯಸ್ಸಾಗಿತ್ತು. ಮನೆಗೆ ಬಂದ ಬಳಿಕ ತೀವ್ರ ಆಯಾಸದಿಂದ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ಅವರ ದೇಹದ ಬಣ್ಣ ಕೂಡ ಬದಲಾಗುತ್ತಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಪತ್ನಿ ಜುಲ್ಲಿಯೆನ್ನಿ ಲಿಸ್ಬೋವಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅವರ 18 ವರ್ಷದ ದತ್ತು ಮಗಳು ಕೂಡ ಜೇಡದಿಂದ ಅಪಾಯಕ್ಕೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಕೆ ಕಂಡಿದ್ದಾರೆ ಎಂದು ವರದಿಯಾಗಿದೆ. ಗಾಯಕ ಡಾರ್ಲಿನ್ ಮೊರೈಸ್ ಸಂಗೀತ ವೃತ್ತಿಜೀವನವನ್ನು 15ನೇ ವಯಸ್ಸಿನಲ್ಲಿ ಪ್ರಾರಂಭಿಸಿದರು. ಜಬುಂಬಾ ಸೇರಿದಂತೆ ಹಲವು ವಾದ್ಯಗಳನ್ನು ಅವರು ನುಡಿಸುತ್ತಿದ್ದರು. ವಾದ್ಯ ಮತ್ತು ಹಾಡಿನ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು.
ಇದನ್ನೂ ಓದಿ: Gold Rate Today: ಹಬ್ಬ ಹತ್ತಿರ ಬರುತ್ತಿದ್ದಂತೆ ಬಂಗಾರದ ಬೆಲೆ ಇಳಿಕೆ, ಇಂದಿನ ದರ ಹೀಗಿದೆ
Brazilian singer, Darlyn Morais, di£s after he got bitten by a spider at his home in Brazil on October 31.#premiumblognaija pic.twitter.com/F7A4MgHmOq
— premium blog naija (@premium___blog) November 8, 2023
ಡಾರ್ಲಿನ್ ಮೊರೈಸ್ ಸೋದರಸಂಬಂಧಿ ವೆಸ್ಲಿಯಾ ಸಿಲ್ವಾ ಮಾಧ್ಯಮಕ್ಕೆ ಹೇಳಿಕೆ ನೀಡಿ ʻʻಸ್ನೇಹಿತರೆಂದರೆ ಅವರಿಗೆ ತುಂಬ ಇಷ್ಟ. ಯಾವಾಗಲೂ ತುಂಬಾ ಸಂತೋಷದಿಂದ ಮತ್ತು ಅವರ ಸುತ್ತಲಿರುವ ಜನರ ಸಂತಸದ ಕ್ಷಣವನ್ನು ಆನಂದಿಸುತ್ತಿದ್ದರುʼʼಎನದು ಹೇಳಿಕೆ ನೀಡಿದ್ದಾರೆ. ಮೆಚ್ಚಿನ ಗಾಯಕನ ಅಗಲಿಕೆಗೆ ಅವರ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.