Site icon Vistara News

Brijesh Tripathi: ಭೋಜ್‌ಪುರಿ ಜನಪ್ರಿಯ ನಟ ಬ್ರಿಜೇಶ್ ತ್ರಿಪಾಠಿ ಇನ್ನಿಲ್ಲ

Brijesh Tripathi passes away

ಬೆಂಗಳೂರು: ಭೋಜ್‌ಪುರಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಬ್ರಿಜೇಶ್ ತ್ರಿಪಾಠಿ (Brijesh Tripathi) ಇಂದು (ಡಿ.18) ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಭೋಜ್‌ಪುರಿ ಸಿನಿಮಾ ಮಾತ್ರವಲ್ಲದೆ 46 ವರ್ಷಗಳ ಕಾಲ ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿದ್ದರು. ಇತರ ಪ್ರಾದೇಶಿಕ ಭಾಷೆಗಳಲ್ಲೂ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಬ್ರಿಜೇಶ್ ತ್ರಿಪಾಠಿ ನಿಧನಕ್ಕೆ ಅವರ ಫ್ಯಾನ್ಸ್‌ ಸೋಷಿಯಲ್‌ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಬ್ರಿಜೇಶ್ ತ್ರಿಪಾಠಿ ಡೆಂಗ್ಯೂನಿಂದ ಬಳಲುತ್ತಿದ್ದರು. ಮೀರತ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಅವರ ಇಡೀ ಕುಟುಂಬ ಮುಂಬೈನಲ್ಲಿ ವಾಸಿಸುತ್ತಿದೆ.

ಬ್ರಿಜೇಶ್ ತ್ರಿಪಾಠಿ ಅವರು ಭೋಜ್‌ಪುರಿಯ ‘ಓಂ’ ಸಿನಿಮಾ ಮೂಲಕ ಭಾರೀ ಯಶಸ್ಸನ್ನು ಪಡೆದರು. ಪವನ್ ಸಿಂಗ್, ದಿನೇಶ್ ಲಾಲ್ ಯಾದವ್ ಮತ್ತು ರವಿ ಕಿಶನ್ ಸೇರಿದಂತೆ ಹಲವು ಭೋಜ್‌ಪುರಿ ಖ್ಯಾತ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Mooru Muttugalu Nataka: ಮೂರು ಮುತ್ತುಗಳು ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ಇನ್ನಿಲ್ಲ

ಹಿಂದಿಯಲ್ಲಿ ‘ಮೊಹ್ರಾ’, ‘ಗುಪ್ತ್’ ಮತ್ತು ‘ನೋ ಎಂಟ್ರಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಎಲ್ಲಾ ಚಿತ್ರಗಳು ಸಕ್ಸೆಸ್‌ ಕಂಡಿವೆ.

Exit mobile version