ಬೆಂಗಳೂರು: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಅವರ `ಬ್ರೋʼ ಸಿನಿಮಾ (Bro Movie Collection) ವೀಕೆಂಡ್‌ನಲ್ಲಿ ಭಾರಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ.
ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳ ಹೊರತಾಗಿಯೂ ಚಿತ್ರವು ಅದ್ಭುತ ಪ್ರದರ್ಶನ ಕಾಣುತ್ತಿದೆ. ವರದಿಗಳ ಪ್ರಕಾರ, ಚಿತ್ರವು ಕೆಲವೇ ದಿನಗಳಲ್ಲಿ ವಿಶ್ವಾದ್ಯಂತ 100 ಕೋಟಿ ರೂ. ಗಳಿಕೆ (Bro Movie Collection) ಕಾಣಲಿದೆ ಎನ್ನಲಾಗಿದೆ.
`ಬ್ರೋʼ ಸಿನಿಮಾ ತಮಿಳು ಚಿತ್ರ ‘ವಿನೋದಯ ಸಿತಂʼ ಅಧಿಕೃತ ತೆಲುಗು ರಿಮೇಕ್ ಆಗಿದೆ. ಇದನ್ನು ಸಮುದ್ರಕನಿ ನಿರ್ದೇಶನ ಮಾಡಿದ್ದಾರೆ. ತೆಲುಗು ರಿಮೇಕ್ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಜುಲೈ 30ರಂದು 20 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ. ಈ ಚಿತ್ರವು ಭಾರತದಲ್ಲಿ 16 ಕೋಟಿ ರೂ. ನಿವ್ವಳ ಗಳಿಸಿದೆ ಎಂದು ಅಂದಾಜಿಸಲಾಗಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಮೂರು ದಿನಗಳ ಒಟ್ಟು ಕಲೆಕ್ಷನ್ 63.1 ಕೋಟಿ ರೂ. ಆಗಿದೆ.
ಪವನ್ ಕಲ್ಯಾಣ್ (Pawan Kalyan) ತಮ್ಮ ಸಹೋದರಿಯ ಪುತ್ರ ಸಾಯಿ ಧರಮ್ ತೇಜ್ (Sai Dharam Tej) ಜತೆಗೆ ನಟಿಸಿರುವ (Pawan Kalyan Sai Dharam Tej) ‘ಬ್ರೋ’ ಸಿನಿಮಾ ಜುಲೈ 28ರಂದು ಆಂಧ್ರ-ತೆಲಂಗಾಣ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ತಮಿಳು ಸಿನಿಮಾ ರೀಮೇಕ್ ಆಗಿದ್ದರೂ ಮೂಲ ಸಿನಿಮಾಕ್ಕಿಂತಲೂ ಸಾಕಷ್ಟು ಬದಲಾವಣೆಗಳನ್ನು ತಂದು ಸಿನಿಮಾವನ್ನು ತೆಲುಗು ಪ್ರೇಕ್ಷಕರಿಗೆ ಹಾಗೂ ಪವನ್ ಅಭಿಮಾನಿಗಳಿಗೆ ಒಪ್ಪಿಗೆ ಆಗುವಂತೆ ಮಾಸ್ ರೂಪದಲ್ಲಿ ಪ್ರೆಸೆಂಟ್ ಮಾಡಲಾಗಿದೆ.
ಇದನ್ನೂ ಓದಿ; Pawan Kalyan: ಡಿವೋರ್ಸ್ ಗಾಸಿಪ್‌ಗಳಿಗೆ ಫುಲ್‌ಸ್ಟಾಪ್ ಇಟ್ಟ ಪವನ್ ಕಲ್ಯಾಣ್!
ಸೂಪರ್‌ನ್ಯಾಚುರಲ್ ಫ್ಯಾಂಟಸಿ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್, ಕೇತಿಕಾ ಶರ್ಮಾ, ರೋಹಿಣಿ, ಬ್ರಹ್ಮಾನಂದಂ ಮತ್ತು ಸುಬ್ಬರಾಜು ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಜೀ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ. ಸುಜಿತ್ ವಾಸುದೇವ್ ಛಾಯಾಗ್ರಹಣ ಮತ್ತು ನವೀನ್ ನೂಲಿ ಸಂಕಲನಿವಿದೆ,