Site icon Vistara News

Voot Select | ವೂಟ್ ಸೆಲೆಕ್ಟ್‌ನಲ್ಲಿ 4 ಬ್ಲಾಕ್‌ಬಸ್ಟರ್ ಕನ್ನಡ ಚಲನಚಿತ್ರಗಳ ಪ್ರಸಾರ!

Voot Select

ಬೆಂಗಳೂರು: ವೂಟ್ ಸೆಲೆಕ್ಟ್‌ನಲ್ಲಿ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳು ಈಗಾಗಲೇ (Voot Select) ತೆರೆ ಕಂಡಿದ್ದು, ಈ ವಾರಾಂತ್ಯದಲ್ಲಿ ೪ ಬ್ಲಾಕ್‌ಬಸ್ಟರ್‌ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಚಿತ್ರಪ್ರೇಕ್ಷಕರ ಮನ ಗೆದ್ದಿರುವ 777 ಚಾರ್ಲಿ, ನಗೆಗಡಲಲ್ಲಿ ತೇಲಿಸುವ ಪೆಟ್ರೋಮ್ಯಾಕ್ಸ್ ಮತ್ತು ಹರಿಕಥೆಯಲ್ಲ ಗಿರಿಕಥೆ, ಬೈರಾಗಿ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದೆ.

777 ಚಾರ್ಲಿ
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರವು ನಾಯಕ ಮತ್ತು ಶ್ವಾನದ ನಡುವಿನ ಬಾಂಧವ್ಯದ ಬಗ್ಗೆ ಹೆಣೆದಿರುವ ಸುಂದರ ಚಿತ್ರವಾಗಿದೆ. ತನ್ನ ನೆಚ್ಚಿನ ಶ್ವಾನದ ಜತೆಯಲ್ಲಿ ನಾಯಕನ ಹೃದಯಾಂತರಾಳದ ಸಂಬಂಧವನ್ನು ಇಲ್ಲಿ ಬಿಂಬಿಸಲಾಗಿದೆ.

ಇದನ್ನೂ ಓದಿ | Bigg Boss Kannada | ಲೋಕಿ ಹಾಗೂ ಆರ್ಯವರ್ಧನ್‌ ಮಾತಿನ ವಾರ್‌!

ಬೈರಾಗಿ
ಬೈರಾಗಿಯ ಕಥೆಯು ತನ್ನ ಮೌಲ್ಯಗಳು ಮತ್ತು ತತ್ವಗಳಿಗೆ ಬದ್ಧವಾಗಿರುವ ನಾಯಕನ ವ್ಯಕ್ತಿತ್ವಕ್ಕೆ ತಕ್ಕಂತೆ ಹೆಣೆದಿರುವ ಚಿತ್ರವಾಗಿದೆ. ಇದರಲ್ಲಿ ನಾಯಕ, ಕಲಾವಿದ ಹುಲಿ ಶಿವನ ಸುತ್ತ ಕತೆಯನ್ನು ಹೆಣೆಯಲಾಗಿದೆ. ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಲು ಈ ಕಲಾವಿದ ಹೆದರುವುದಿಲ್ಲ. ತನ್ನ ಕೋಪವನ್ನು ನಿಯಂತ್ರಣ ಮಾಡಲು ತನ್ನ ಪ್ರೀತಿಯ ಅಜ್ಜನಿಂದ ಪಡೆದ ಸಲಹೆ ಜತೆಗೆ ತನ್ನ ವ್ಯಕ್ತಿತ್ವವನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾನೆ ಎನ್ನುವುದು ಚಿತ್ರದ ಹೈಲೈಟ್‌.

ಪೆಟ್ರೋಮ್ಯಾಕ್ಸ್
ವಿಜಯ ಪ್ರಸಾದ್ ಚಿತ್ರಕತೆ ಬರೆದು ನಿರ್ದೇಶಿಸಿದ ಚಿತ್ರ ಪೆಟ್ರೋಮ್ಯಾಕ್ಸ್. ಇದೊಂದು ವಯಸ್ಕ ಕಾಮಿಡಿ ಚಿತ್ರವಾಗಿದ್ದು, ಕೌಟುಂಬಿಕ ಮೌಲ್ಯ ಮತ್ತು ಸಂಬಂಧಗಳನ್ನು ಬೆಸೆಯುವ ಅಂಶಗಳನ್ನು ಒಳಗೊಂಡಿದೆ. ಈ ಚಿತ್ರವು ಒಡನಾಟ, ಮಾನವ ಸಂಬಂಧಗಳು ಮತ್ತು ಒಗ್ಗಟ್ಟಿನ ಸಾರವನ್ನು ವಿವರಿಸುತ್ತದೆ. ಸಂಪೂರ್ಣ ಮನರಂಜನೆಯನ್ನು ನೀಡುವ ಈ ಚಿತ್ರ ವೂಟ್ ಸೆಲೆಕ್ಟ್‌ನಲ್ಲಿ ಪ್ರಸಾರವಾಗಲಿದೆ.

ಹರಿಕಥೆ ಅಲ್ಲ ಗಿರಿಕಥೆ
ನಿರ್ದೇಶಕ ರಿಷಬ್‌ ಶೆಟ್ಟಿ ನಟನೆಯ ಮತ್ತೊಂದು ಕಾಮಿಡಿ ಚಿತ್ರ ʻಹರಿಕಥೆ ಅಲ್ಲ ಗಿರಿಕಥೆ’ ಸಹ ವೂಟ್ ಸೆಲೆಕ್ಟ್‌ನಲ್ಲಿ ಪ್ರಸಾರವಾಗಲಿದೆ. ಇದು ನಾನ್‌ಸ್ಟಾಪ್ ಮನರಂಜನೆಯನ್ನು ನೀಡುವ ಚಿತ್ರವಾಗಿದೆ. ಸಂಪೂರ್ಣ ಹಾಸ್ಯಮಯವಾಗಿ ಕತೆಯನ್ನು ಹೆಣೆಯಲಾಗಿದೆ.

ಇದನ್ನೂ ಓದಿ | Voot | ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಈಗ ವೂಟ್‌ನಲ್ಲಿ ಲಭ್ಯ

Exit mobile version