ಬೆಂಗಳೂರು: ಹಾಲಿವುಡ್ “ಡೈ ಹಾರ್ಡ್” ಖ್ಯಾತಿಯ ನಟ ಬ್ರೂಸ್ ವಿಲ್ಲೀಸ್ (Bruce Willis) ಅವರು ಬುದ್ಧಿಮಾಂದ್ಯ ರೋಗದಿಂದ ಬಳಲುತ್ತಿದ್ದಾರೆ. ಫ್ರಂಟೊಟೆಂಪೊರಲ್ ಡಿಮೆನ್ಶಿಯಾ (FTD) ಎನ್ನುವುದು ಬುದ್ಧಿಮಾಂದ್ಯದ ಒಂದು ವಿಧ. ಮುಂದಿನ ದಿನಗಳಲ್ಲಿ ಅವರ ಜೀವನ ಮತ್ತಷ್ಟು ಕಷ್ಟ ಆಗಲಿದೆ ಎಂದು ಕುಟುಂಬದವರೇ ಹೇಳಿಕೆ ನೀಡಿದ್ದಾರೆ.
ʻʻಅವರು ಬರುಬರುತ್ತ ಸಂವಹನ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಇದೀಗ ಈ ರೋಗದ ಒಂದು ಲಕ್ಷಣವಾಗಿದೆ ಎಂದು ಹೇಳಿದ್ದಾರೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆಗಳಿಲ್ಲ, ಮುಂಬರುವ ವರ್ಷಗಳಲ್ಲಿ ಬದಲಾಗಬಹುದು ಎಂದು ನಾವು ಭಾವಿಸುತ್ತೇವೆ” ಎಂದು ಕುಟುಂಬ ತಿಳಿಸಿದೆ.
ೊ‘ಎಫ್‌ಟಿಡಿ ಒಂದು ಕೆಟ್ಟ ಕಾಯಿಲೆ. ನಮ್ಮಲ್ಲಿ ಅನೇಕರು ಇದನ್ನು ಈವರೆಗೆ ಕೇಳಿಲ್ಲ. ಇದು ಯಾರಲ್ಲಿ ಬೇಕಿದ್ದರೂ ಕಾಣಿಸಿಕೊಳ್ಳಬಹುದು. 60 ವರ್ಷದ ವ್ಯಕ್ತಿಗಳಿಗೆ FTD ಕಾಣಿಸಿಕೊಳ್ಳುತ್ತದೆ. ಆದರೆ, ಇದನ್ನು ಪತ್ತೆಹಚ್ಚಲು ಅನೇಕ ವರ್ಷಗಳೇ ಬೇಕಾಗಬಹುದು. ಈ ರೋಗಕ್ಕೆ ಯಾವುದೇ ಔಷಧ ಇಲ್ಲ. ಮುಂದಿನ ವರ್ಷಗಳಲ್ಲಿ ಏನಾದರೂ ಪಾಸಿಟಿವ್ ಬದಲಾವಣೆ ಆಗಬಹುದು ಎಂದು ನಾವು ಭಾವಿಸುತ್ತೇವೆ’ ಎಂದು ಬ್ರೂಸ್ ಕುಟುಂಬದವರು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಡೈ ಹಾರ್ಡ್’ ಮತ್ತು ‘ದಿ ಸಿಕ್ಸ್ತ್ ಸೆನ್ಸ್’ ನಂತಹ ಹಿಟ್ ಚಿತ್ರಗಳಲ್ಲಿ ಅವರು ಮೆಚ್ಚುಗೆ ಗಳಿಸಿದ್ದರು.
ಇದನ್ನೂ ಓದಿ: Dhrishyam Movie : ಹಾಲಿವುಡ್‌ಗೂ ಹಾರಿದ ದೃಶ್ಯಂ ಸಿನಿಮಾ! ಚೀನಾ, ಕೋರಿಯಾ ಭಾಷೆಗಳಿಗೂ ಸಿನಿಮಾ ರಿಮೇಕ್
ಇದನ್ನೂ ಓದಿ: ನಿಕ್ ಜೋನಸ್ ಮತ್ತು ಸೋದರರಿಗೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವ; ಅಪ್ಪನ ಸಂಭ್ರಮಕ್ಕೆ ಸಾಕ್ಷಿಯಾದ ಮಗಳು ಮಾಲತಿ
FTD ಎಂದರೇನು?
ಫ್ರಂಟೊಟೆಂಪೊರಲ್ ಡಿಮೆನ್ಶಿಯಾ (FTD) ಮೆದುಳಿನ ಮುಂಭಾಗ ಮತ್ತು ನ್ಯೂರಾನ್‌ಗಳಿಗೆ ಹಾನಿಯುಂಟು ಮಾಡುತ್ತದೆ. ಭಾವನಾತ್ಮಕ ಸಮಸ್ಯೆಗಳು, ಸಂವಹನದಲ್ಲಿ ತೊಂದರೆ, ಕೆಲಸ ಅಥವಾ ನಡಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗಲಕ್ಷಣಗಳದ ಜೀವಿತಾವಧಿ ಸರಾಸರಿ 7 ರಿಂದ 13 ವರ್ಷಗಳವರೆಗೆ ಇರುತ್ತದೆ.