ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರತಿಭೆಗಳ ಸಿನಿಮಾಗಳು ಹೆಚ್ಚಾಗಿ ಬರುತ್ತಲೇ ಇರುತ್ತವೆ. ಅದೇ ರೀತಿಯಲ್ಲಿ ಇದೀಗ ಯುವ ತಂಡವೊಂದು ʼಬನ್ ಟೀʼ ಹೆಸರಿನಲ್ಲಿ ಸಿನಿಮಾ (Bun Tea Movie) ತಯಾರಿಸಿದ್ದು, ಅದರ ಟ್ರೈಲರ್ ಬಿಡುಗಡೆಯಾಗಿದೆ. ಪ್ರಸಿದ್ಧ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Viral News: 960 ಬಾರಿ ಟೆಸ್ಟ್ಗೆ ಒಳಗಾಗಿ ಡ್ರೈವಿಂಗ್ ಲೈಸೆನ್ಸ್ ಪಡೆದ ಮಹಿಳೆ; ಕಾರು ಗಿಫ್ಟ್ ಪಡೆದ ಈಕೆಯ ಸ್ಟೋರಿ 18ವರ್ಷ ಹಿಂದಿನದ್ದು
ಆನ್‌ಲೈನ್ ಎಡಿಟರ್ ಆಗಿ ಗುರುತಿಸಿಕೊಂಡಿರುವ ಹಾಗೂ ಖಾಕಿ ಸಿನಿಮಾದ ಬರಹಗಾರರಲ್ಲಿ ಒಬ್ಬರಾಗಿ ಕೆಲಸ ನಿರ್ವಹಿಸಿರುವ ಉದಯ್ ಕುಮಾರ್ ಪಿ.ಎಸ್. ಅವರ ಎರಡನೇ ಹೆಜ್ಜೆ ಇದಾಗಿದೆ. ಈ ಹಿಂದೆ ʼಕಾರ್ಮೋಡ ಸರಿದುʼ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ ಅವರು ಇದೀಗ ʼಬನ್ ಟೀʼ ಜತೆ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ.
ಟ್ರೈಲರ್ ಬಿಡುಗಡೆ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿದ್ದು, “ಉದಯ್ ಹೇಳಿದ ಕಥೆ ಇಷ್ಟವಾಯ್ತು. ಹಂಚಿ ತಿನ್ನುವ ಅಗತ್ಯವಿರುವ ಈ ದಿನಗಳಲ್ಲಿ ಹಂಚಿ ಉಣ್ಣದೇ ಬರೀ ಬಾಚಿಕೊಳ್ಳುವ ಮನಸ್ಥಿತಿ, ಅದರಿಂದ ಉಂಟಾಗುವ ಸಾಮಾಜಿಕ ತೊಂದರೆಗಳ ಸುತ್ತ ಕಥೆ ಸಾಗುತ್ತದೆ. ಉದಯ್ ನಿರ್ಮಾಪಕರು ಸಿಗುತ್ತಾರೆ ಎಂದು ಫ್ಯಾಷನ್‌ಗೋಸ್ಕರ್ ಸಿನಿಮಾ ಮಾಡಿಲ್ಲ. ಆಳವಾಗಿ, ತಾಂತ್ರಿಕವಾಗಿ ಚಿತ್ರ ಮಾಡಿದ್ದಾರೆ. ತಮ್ಮದೇ ಟೆಂಟ್ ಸಿನಿಮಾ ಸೂಲ್ಕ್ ಪ್ರತಿಭೆಗಳನ್ನು ಸೇರಿಸಿಕೊಂಡು ಬನ್ ಟೀ ಚಿತ್ರ ಮಾಡಿದ್ದು, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: Viral Video: ಗುಡ್ಡದ ತುದಿಯಲ್ಲಿ, ಹಸಿರ ಮಧ್ಯೆ ಸೂರ್ಯ ನಮಸ್ಕಾರ ಮಾಡಿದ ಚಿರತೆ; ಇದು ಪ್ರಕೃತಿ ಸಹಜವೇ ಅಲ್ಲವೇ?
ನಿರ್ದೇಶಕ ಉದಯ್ ಮಾತನಾಡಿ, “ಬನ್ ಟೀ ಸಿನಿಮಾ ನಿರ್ದೇಶಕನಾಗಿ ನನ್ನ ಎರಡನೇ ಸಿನಿಮಾ. ಇದು ನನ್ನ ಏಳು ವರ್ಷದ ಕನಸು. ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರ ಸುತ್ತುವಾಗ ಬನ್ ಟೀ ನಮ್ಮ ಊಟ. ಟೈಟಲ್ ಡಿಫರೆಂಟಾಗಿದೆ. ಶೀರ್ಷಿಕೆ ವಿಭಿನ್ನವಾಗಿ ಇದ್ದರೇ ಕುತೂಹಲ ಮೂಡುತ್ತದೆ. ಟೈಟಲ್ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕಷ್ಟಪಟ್ಟು ಓದು ಅನ್ನುವ ಬದಲು ಇಟ್ಟಪಟ್ಟು ಓದು ಅನ್ನೋದನ್ನು ಯಾಕೆ ಹೇಳುವುದಿಲ್ಲ ಅನ್ನೋದೇ ಚಿತ್ರದ ಒಟ್ಟಾರೆ ಸಾರಾಂಶ” ಎಂದು ತಿಳಿಸಿದ್ದಾರೆ.
ನೈಜ ಘಟನೆಯಿಂದ ಸ್ಫೂರ್ತಿ ಪಡೆದು ರೂಪಿಸಿರುವ ಬನ್ ಟೀ ಸಿನಿಮಾಗೆ ಉದಯ್ ಕಥೆ ಬರೆದು ನಿರ್ದೇಶನದ ಜತೆಗೆ ಸಂಕಲನ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಮೌರ್ಯ, ತನ್ಮಯ್, ಉಮೇಶ್ ಸಕ್ಕರೆನಾಡು, ಶ್ರೀದೇವಿ, ನಿಶಾ, ಗುಂಡಣ್ಣ, ಸುನಿಲ್ ನಟಿಸಿರುವ ಈ ಚಿತ್ರಕ್ಕೆ ರಾಧಾಕೃಷ್ಣ ಬ್ಯಾನರ್ ಅಡಿಯಲ್ಲಿ ಆರ್.ಕೇಶವ ನಿರ್ಮಾಣ ಮಾಡಿದ್ದಾರೆ. ರಾಜರಾವ್ ಅಂಚಲ್ಕರ್ ಕ್ಯಾಮೆರಾ, ಪ್ರದ್ಯೋತನ್ ಸಂಗೀತ ಸಿನಿಮಾಕ್ಕಿದೆ. ಸಿನಿಮಾವನ್ನು ಏಪ್ರಿಲ್ ತಿಂಗಳಾಂತ್ಯಕ್ಕೆ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.