Site icon Vistara News

Kantara Movie | ಕಂಗನಾಗೆ ಕೆರಳಿದ ಕುತೂಹಲ; ‘ಕಾಂತಾರ ಯಾವಾಗ ನೋಡ್ತೀನೋ’ ಎಂದ ನಟಿ !

Kangana Kantara

ಮುಂಬಯಿ: ಕರಾವಳಿಯ ದೈವದ ಕಥೆಯಾದ ‘ಕಾಂತಾರ’ ಸಿನಿಮಾ (Kantara Movie) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಕನ್ನಡ ಸಿನಿಮಾ ಬಗ್ಗೆ ಭಾರತ ಚಿತ್ರರಂಗದ ಪ್ರತಿಯೊಂದು ಕ್ಷೇತ್ರದ ನಟ-ನಟಿಯರು-ವೀಕ್ಷಕರು ಮಾತನಾಡುತ್ತಿದ್ದಾರೆ, ‘ಇಂಥ ಸಿನಿಮಾ ನೋಡಿರಲಿಲ್ಲ’ ಎಂದು ಮನಸುತುಂಬಿ ಹೇಳುತ್ತಿದ್ದಾರೆ. ಇಡೀ ದೇಶದೆಲ್ಲೆಡೆಯಿಂದ ಕಾಂತಾರ ಸಿನಿಮಾಕ್ಕೆ ಪ್ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಂಗನಾ ರಣಾವತ್​ ಇನ್​ಸ್ಟಾಗ್ರಾಂ ಪೋಸ್ಟ್​​

ಅನಿಲ್ ಕುಂಬ್ಳೆ, ಪ್ರಥ್ವಿರಾಜ್​ ಸುಕುಮಾರನ್​, ಧನುಷ್​, ರಾಣಾ ದುಗ್ಗುಬಾಟಿ, ಶಿಲ್ಪಾಶೆಟ್ಟಿ ಸೇರಿ ಹಲವು ಗಣ್ಯರು ಈಗಾಗಲೇ ಕಾಂತಾರವನ್ನು ಹೊಗಳಿದ್ದಾರೆ. ಅದ್ಭುತ ಸಿನಿಮಾ ಎಂದು ಕೊಂಡಾಡಿದ್ದಾರೆ. ಅದರ ಬೆನ್ನಲ್ಲೇ ಬಾಲಿವುಡ್​ ನಟಿ ಕಂಗನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿ ‘ಹಿಂದೆಂದೂ ಯಾವುದೇ ಸಿನಿಮಾಗಳ ಬಗ್ಗೆ ಕೇಳಿರದಷ್ಟು ವಿಭಿನ್ನ ವಿಷಯಗಳನ್ನು ಕಾಂತಾರ ಸಿನಿಮಾದ ಬಗ್ಗೆ ಕೇಳುತ್ತಿದ್ದೇನೆ. ಚಿತ್ರದ ಬಗ್ಗೆ ಕುತೂಹಲ ಕೆರಳುತ್ತಿದೆ. ಯಾವಾಗ ಸಿನಿಮಾ ನೋಡುತ್ತೇನೋ ಎನ್ನಿಸುತ್ತಿದೆ. ಕಾಯಲು ಸಾಧ್ಯವೇ ಆಗುತ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಹಾಗೇ, ಕಾಂತಾರ ಸಿನಿಮಾದ ದೃಶ್ಯಗಳನ್ನು ಕೊಲ್ಯಾಜ್​ ಮಾಡಿದ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ಇನ್ನು ಅದಕ್ಕೂ ಮೊದಲು ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಕಾಂತಾರ ಬಗ್ಗೆ ಪೋಸ್ಟ್​ ಹಾಕಿಕೊಂಡಿದ್ದರು. ಮೂಲತಃ ಕರಾವಳಿಯರವೇ ಆದ ಶಿಲ್ಪಾ ಶೆಟ್ಟಿ ಸಿನಿಮಾ ನೋಡಿದ ಬಳಿಕ ಸಿಕ್ಕಾಪಟೆ ಹೊಗಳಿದ್ದರು. ‘ನಾನು ಕಾಂತಾರವನ್ನು ಥಿಯೇಟರ್​​ನಲ್ಲಿ ನೋಡಿದೆ. ಅಬ್ಬಾ, ಅದೆಂಥಾ ನಿರೂಪಣೆ, ಭಾವನೆ. ಕಂಪನವನ್ನು ಸೃಷ್ಟಿಸುವ ಹೊಸ ಜಗತ್ತು ಇದೆ ! .. ಸಿನಿಮಾ ಕೊನೆಯಲ್ಲಂತೂ ಮೈನವಿರೆದ್ದಿತ್ತು. ನಿಜಕ್ಕೂ ಪ್ರೇಕ್ಷಕರನ್ನು ಹೊಸ ಜಗತ್ತಿಗೆ ಕೊಂಡೊಯ್ಯುತ್ತದೆ. ಅದೇ ಜಗತ್ತಿಗೆ ನಾನೂ ಸೇರಿದವಳು ಎಂಬುದು ನನಗೆ ಹೆಮ್ಮೆ’ ಎಂದಿದ್ದರು. ಹಾಗೇ, ರಿಷಬ್​ ಶೆಟ್ಟಿಯವರನ್ನು ಟ್ಯಾಗ್ ಮಾಡಿ ‘ನಿಮಗೆ ನನ್ನ ನಮನ’ ಎಂದು ಕ್ಯಾಪ್ಷನ್​ ಬರೆದಿದ್ದರು.

ಇದನ್ನೂ ಓದಿ: Kantara Movie | ʻಇದು ಸಿನಿಮಾದ ಪವರ್‌, ಅದ್ಭುತ ನಿರೂಪಣೆʼ: ಕಾಂತಾರ ಸಿನಿಮಾ ಹೊಗಳಿದ ನಟಿ ಶಿಲ್ಪಾ ಶೆಟ್ಟಿ

Exit mobile version