ಬೆಂಗಳೂರು: 2023ರ ಕಾನ್ ಚಲನಚಿತ್ರೋತ್ಸವದಲ್ಲಿ (Cannes 2023) ನಟಿ ಐಶ್ವರ್ಯಾ ರೈ ಸಖತ್ ಮಿಂಚಿದರು. ಇಂಡಿಯಾನಾ ಜೋನ್ಸ್ ಮತ್ತು ದಿ ಡಯಲ್ ಆಫ್ ಡೆಸ್ಟಿನಿ ಪ್ರದರ್ಶನಕ್ಕೆ ಹಾಜರಾಗಿದ್ದರು. ರೆಡ್ ಕಾರ್ಪೆಟ್ ಮೇಲೆ ಬೆಳ್ಳಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡರು. 2023ನೇ ಸಾಲಿನ ಕಾನ್ ಚಿತ್ರೋತ್ಸವ ಮೇ 16ರಂದು ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.
ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಐಶ್ವರ್ಯಾ ರೈ ಅವರು ಕಾನ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2002ರಲ್ಲಿ. ನಂತರ ಅವರು ಈ ಚಿತ್ರೋತ್ಸವಕ್ಕೆ ಜ್ಯೂರಿ ಕೂಡ ಆದರು. ಹಲವು ಬಾರಿ ಐಶ್ವರ್ಯಾ ರೈ ಅವರು ರೆಡ್ ಕಾರ್ಪೆಟ್ ಮೇಲೆ ನಡೆದಿದ್ದಾರೆ.
ಐಶ್ವರ್ಯಾ ರೈ ಅವರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ‘ಐಶ್ವರ್ಯಾ ರೈ ನಿಜಕ್ಕೂ ಕ್ವೀನ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಐಶ್ವರ್ಯಾ ಅವರನ್ನು ಕೊಂಡಾಡಿದ್ದಾರೆ. ಫಾರ್ಮ್-ಫಿಟ್ಟಿಂಗ್ ಗೌನ್ ಮಾತ್ರವಲ್ಲದೆ ಮೇಕಪ್ ಮತ್ತು ಕೇಶವಿನ್ಯಾಸದಿಂದಲೂ ಹೈಲೈಟ್ ಆಗಿದ್ದಾರೆ.
ಇದನ್ನೂ ಓದಿ: Cannes Film Festival 2023: ಮೊಸಳೆ ಮರಿಯ ನೆಕ್‌ಪೀಸ್‌ನಲ್ಲಿಊರ್ವಶಿ ರೌಟೇಲಾ! ಇಲ್ಲಿದೆ ನಟಿಯ ಹೊಸ ಅವತಾರ!
ಈ ಚಲನಚಿತ್ರೋತ್ಸವದಲ್ಲಿ ಅನುಷ್ಕಾ ಶರ್ಮಾ, ಸಾರಾ ಅಲಿ ಖಾನ್, ಮಾನುಷಿ ಚೆಲ್ಲರ್ ಸೇರಿದಂತೆ ಅನೇಕರು ಮೊದಲ ಬಾರಿಗೆ ಕಾನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.