ಬೆಂಗಳೂರು: ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (Cannes 2024) ಕೂಡ ಒಂದು. 2024ರ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಭಾರತದ 7 ಸಿನಿಮಾಗಳು 77ನೇ ಸಾಲಿನ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿವೆ. ಪ್ರತಿ ವರ್ಷದಂತೆ ಈ ವರ್ಷವೂ ನಟಿ ಐಶ್ವರ್ಯಾ ರೈ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದಾರೆ. ಐಶ್ವರ್ಯಾ ಫಲ್ಗುಣಿ ಶೇನ್ ಪೀಕಾಕ್ ಗೌನ್ (Falguni Shane Peacock creation ) ಧರಿಸಿದ್ದರು. ವಿಶೇಷ ಏನೆಂದರೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಅವರು ರೆಡ್ ಕಾರ್ಪೆಟ್‌ನಲ್ಲಿ (Cannes Red Carpet) ನಡೆದು ಬಂದಿದ್ದಾರೆ. ಅವರ ಫೋಟೊ ಮತ್ತು ವಿಡಿಯೊಗಳು ವೈರಲ್ ಆಗಿವೆ.
ಬುಧವಾರ (ಮೇ 15) ರಾತ್ರಿ ಐಶ್ವರ್ಯಾ ರೈ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರ ಕೈಗೆ ಗಾಯ ಆಗಿದ್ದನ್ನು ನೋಡಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಕೈಗೆ ಪೆಟ್ಟಾಗಿರುವುದರಿಂದ ಈ ಬಾರಿ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವುದು ಅನುಮಾನ ಎಂದು ಅನೇಕರು ಭಾವಿಸಿದ್ದರು. ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್ ಧರಿಸಿ ಅವರು ಮಿಂಚಿದ್ದಾರೆ. ಬಲಗೈನಲ್ಲಿ ಬ್ಯಾಂಡೇಜ್ ಇದ್ದರೂ ಕೂಡ ಅವರು ಆ ಬಗ್ಗೆ ಹೆಚ್ಚು ಗಮನ ನೀಡಿಲ್ಲ.
ಇದನ್ನೂ ಓದಿ: Cannes 2024 Fashion: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್ ಟ್ರೆಂಡ್ ಹೇಗಿದೆ ನೋಡಿ!
2002ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಅವರು ಕೆಂಪು ಕಾರ್ಪೆಟ್‌ನಲ್ಲಿ ಭಾರೀ ಚಿನ್ನದ ಆಭರಣಗಳೊಂದಿಗೆ ನೀತಾ ಲುಲ್ಲಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಆ ವರ್ಷ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಉಪಸ್ಥಿತರಿದ್ದರು. ಅಂದಿನಿಂದ, ನಟಿ ಬಹುತೇಕ ಪ್ರತಿ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ . ಲೋರಿಯಲ್ ಪ್ಯಾರಿಸ್‌ನ ಬ್ರ್ಯಾಂಡ್ ಅಂಬಾಸಿಡರ್‌ಗಳಲ್ಲಿ ಒಬ್ಬರಾಗಿ ಅವರು ಮತ್ತೊಮ್ಮೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ.
ಐಶ್ವರ್ಯಾ ಜತೆಗೆ, ನಟರಾದ ಅದಿತಿ ರಾವ್ ಹೈದರಿ, ಶೋಬಿತಾ ಧೂಳಿಪಾಲ ಮತ್ತು ಕಿಯಾರಾ ಆಡ್ವಾಣಿ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರೌಟೇಲಾ ಅವರು ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಗುಲಾಬಿ ಬಣ್ಣದ ಉಡುಪಿನಿಂದ ಕಂಗೊಳಿಸಿದ್ದಾರೆ. ಪೋಸ್ ಕೂಡ ಕೊಟ್ಟಿದ್ದಾರೆ. 2024, ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ.