Site icon Vistara News

Cannes 2024: ʻಕಾನ್ ಫಿಲ್ಮ್ ಫೆಸ್ಟಿವಲ್‌ʼನಲ್ಲಿ ಪ್ರದರ್ಶನ ಕಾಣಲಿರುವ ಭಾರತೀಯ ಸಿನಿಮಾಗಳಿವು

Cannes 2024 seven Indian Films To Be Screened

ಬೆಂಗಳೂರು: ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (Cannes 2024) ಕೂಡ ಒಂದು. 2024ರ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಭಾರತದ 7 ಸಿನಿಮಾಗಳು 77ನೇ ಸಾಲಿನ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿವೆ. 2024, ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಮಲಯಾಳಂ ಚಲನಚಿತ್ರ ʻಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ (All We Imagine As Light) ಪ್ರದರ್ಶನಗೊಳ್ಳಲಿದೆ. ಪಾಯಲ್ ಕಪಾಡಿಯಾ ನಿರ್ದೇಶನದ ಈ ಚಿತ್ರ ಮೇ 23ರಂದು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುವ ಇಬ್ಬರು ರೂಮ್‌ಮೇಟ್‌ಗಳ ಕಥೆ ಇದರಲ್ಲಿದೆ.

ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳಲಿರುವ ಮತ್ತೊಂದು ಚಿತ್ರ ʻಸಂತೋಷ್ʼ (Santosh). ಈ ಚಿತ್ರವನ್ನು ಸಂಧ್ಯಾ ಸೂರಿ ನಿರ್ದೇಶಿಸಿದ್ದಾರೆ. ಮತ್ತು 2024 ರ ಕ್ಯಾನೆಸ್ ಚಲನಚಿತ್ರೋತ್ಸವದ ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಪ್ರದರ್ಶಿಸಲಾಗುವುದು. ಈ ಸಿನಿಮಾದಲ್ಲಿ ಸಹನಾ ಗೋಸ್ವಾಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಧವೆಯಾಗಿರುವ ಮಹಿಳೆ ತನ್ನ ಪತಿಯ ಕಾನ್‌ಸ್ಟೆಬಲ್ ಕೆಲಸವನ್ನು ಪಡೆದಾಗ ಏನೆಲ್ಲ ಸವಾಲು ಎದುರಿಸುತ್ತಾಳೆ ಎಂಬ ಕಥೆಯಿದೆ.

ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

ಕನ್ನಡ ಕಿರುಚಿತ್ರ ʻಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋʼ ( Sunflowers Were The First Ones To Know) ಲಾ ಸಿನೆಫ್ ವಿಭಾಗದ ಅಡಿಯಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸುತ್ತಿದೆ. ಈ ಚಿತ್ರವನ್ನು ಎಫ್‌ಟಿಐಐ ವಿದ್ಯಾರ್ಥಿ ಚಿದಾನಂದ್ ನಾಯಕ್ ನಿರ್ದೇಶಿಸಿದ್ದಾರೆ.

1976ರಲ್ಲಿ ಬಿಡುಗಡೆಯಾದ ಸ್ಮಿತಾ ಪಾಟೀಲ್ ಮತ್ತು ನಾಸಿರುದ್ದೀನ್ ಶಾ ಅವರ ಚಲನಚಿತ್ರ ʻಮಂಥನ್ʼ (In Retreat) ಕೂಡ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಮತ್ತು ಕುಲಭೂಷಣ್ ಕರಬಂದ ಕೂಡ ನಟಿಸಿದ್ದಾರೆ. ನಟಿ ರಾಧಿಕಾ ಆಪ್ಟೆ ಅಭಿನಯದ ʻಸಿಸ್ಟರ್ ಮಿಡ್‌ನೈಟ್ʼ ಕೂಡ ಈ ವರ್ಷ ಫಿಲ್ಮ್ ಫೆಸ್ಟಿವಲ್‌ನಲ್ಲಿ ಡೈರೆಕ್ಟರ್ಸ್ ಫೋರ್ಟ್‌ನೈಟ್ ವಿಭಾಗದಲ್ಲಿ ಆಯ್ಕೆಯಾಗಿದೆ.

ಸೈಯದ್ ಮೈಸಮ್ ಅಲಿ ಷಾ ನಿರ್ದೇಶನದ ʻಇನ್ ರಿಟ್ರೀಟ್ʼ (In Retreat) ಸಿನಿಮಾ ಸ್ವತಂತ್ರ ಸಿನಿಮಾ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿದೆ.

ಕಾನ್‌ಸ್ಟಾಂಟಿನ್ ಬೊಜಾನೋವ್ (Konstantin Bojanov) ನಿರ್ದೇಶನದ `ದಿ ಶೇಮ್‌ಲೆಸ್’ (The Shameless) ಚಿತ್ರ ಕೂಡ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ನೇಪಾಳ ಹಾಗೂ ಭಾರತದಲ್ಲಿ ಚಿತ್ರೀಕರಣ ಮಾಡಲಾಗಿದೆ. ರಾಣಿ ಎಂಬ ಭಾರತೀಯ ಲೈಂಗಿಕ ಕಾರ್ಯಕರ್ತೆ, ತೀರ್ಥಯಾತ್ರೆಗೆ ಹೋಗಿರುತ್ತಾಳೆ. ಆ ಬಳಿಕ ಬೆಂಗಳೂರಿನಲ್ಲಿ ಆಕೆ ಕೊಲೆಯಾಗುತ್ತಾಳೆ.

2024ರ ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಭಾರತದ ತಾರೆಯರು ಹೆಜ್ಜೆ ಹಾಕುತ್ತಾರೆ. ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ, ಶೋಭಿತಾ ಧೂಲಿಪಾಲ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲಿದ್ದಾರೆ.

Exit mobile version