Site icon Vistara News

Cannes Film Festival 2023: ಕಾನ್‌ ಚಲನಚಿತ್ರೋತ್ಸವದಲ್ಲಿ ಹಾಟ್‌ ಲುಕ್‌ನಲ್ಲಿ ಮಿಂಚಿದ ನಟಿ ಇಶಾ ಗುಪ್ತಾ

Cannes Film Festival 2023 Esha Gupta Sexy Video

ಬೆಂಗಳೂರು: ಬಾಲಿವುಡ್ ನಟಿ ಇಶಾ ಗುಪ್ತಾ ಅವರು 2023ರ (Cannes Film Festival 2023) ಕಾನ್‌ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಪದಾರ್ಪಣೆ ಮಾಡಿದರು. ರೆಡ್ ಕಾರ್ಪೆಟ್ ಮೇಲೆ ನಟಿ ಹಾಟ್‌ ಆಗಿ ಕಾಣಿಸಿಕೊಂಡಿದ್ದು, ತೆಳು ಗುಲಾಬಿ ಬಣ್ಣದ ಗೌನ್‌ನಲ್ಲಿ ನೋಡುಗರನ್ನು ಬೆರಗುಗೊಳಿಸಿದ್ದಾರೆ. ಮೇ 16ರಂದು 76ನೇ ಆವೃತ್ತಿ ಕಾನ್‌ ಚಲನಚಿತ್ರೋತ್ಸವ ಆರಂಭವಾಗಿದೆ. ಚಲನಚಿತ್ರೋತ್ಸದ ಆರಂಭದ ದಿನ ಸ್ಟಾರ್‌ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ನೃತ್ಯ ಕಲಾವಿದರು ಇತರರು ಭಾಗಿಯಾಗಿದ್ದರು.

ಇಶಾ ಗುಪ್ತಾ ತಮ್ಮ ಗ್ಲಾಮರಸ್ ಲುಕ್‌ಗಾಗಿ ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ. ನಟಿಯ ಫೋಟೊಗಳು ವೈರಲ್‌ ಆಗುತ್ತಿದ್ದಂತೆ ʻʻಇಶಾ ಗುಪ್ತಾ ಸುಂದರಿ. ಅವರನ್ನು ಮೀರಿಸುವವರು ಯಾರು ಇಲ್ಲʼʼಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಇಶಾ ಫ್ರೆಡ್ ಪ್ಯಾರಿಶ್ ಜ್ಯುವೆಲ್ಲರಿ ಲೈನ್‌ನಿಂದ ಬಿಳಿ ಉಂಗುರ ಮತ್ತು ಕಿವಿಯೋಲೆಗಳನ್ನು ಧರಿಸಿದ್ದರು.

ಕಾನ್‌ ಚಿತ್ರೋತ್ಸವದಲ್ಲಿ ಭಾಗವಹಿಸುವದಕ್ಕೂ ಮೊದಲು ನಟಿ ವಿಡಿಯೊವನ್ನು ಪೋಸ್ಟ್‌ ಮಾಡಿ ʻʻಭಾರತ ಸರ್ಕಾರದ ನಿಯೋಗದ ಭಾಗವಾಗಿ 2023ರ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ನಾನು ಸಂತೋಷಪಡುತ್ತೇನೆ. ಜಾಗತಿಕ ವೇದಿಕೆಯಲ್ಲಿ ಈ ಅವಕಾಶ ಒದಗಿಸಿದ್ದಕ್ಕೆ ಭಾರತ ಸರ್ಕಾರ ಮತ್ತು FICCIಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಈ ಕ್ಷಣದಲ್ಲಿ ಬಯಸುತ್ತೇನೆʼʼಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Cannes Film Festival: ಇದೆ ಮೊದಲ ಬಾರಿಗೆ ಕಾನ್‌ ಚಿತ್ರೋತ್ಸವದಲ್ಲಿ ಅನುಷ್ಕಾ ಶರ್ಮಾ; ಇಲ್ಲಿದೆ ಫುಲ್‌ ಡಿಟೇಲ್ಸ್‌

ಆಗಾಗ ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಇಶಾ

ಇತ್ತೀಚೆಗಷ್ಟೇ ಇಶಾ ಗುಪ್ತಾ ಅವರು ಮುಂಬೈನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಪಾಪರಾಜಿಗಳ (ಫೋಟೊಗ್ರಾಫರ್‌ಗಳು) ಕ್ಯಾಮೆರಾದಲ್ಲಿ ಸಖತ್‌ ಹಾಟ್‌ ಆಗಿ ಸೆರೆಯಾಗಿದ್ದರು. ಬ್ರಾ ಧರಿಸದೆ ಬಿಳಿ ಬಾಡಿಕಾನ್ ಉಡುಪನ್ನು ಧರಿಸಿದ್ದರು. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಮನಬಂದಂತೆ ಕಾಮೆಂಟ್‌ ಮಾಡಿದ್ದರು. ʻʻಮನೆಯಿಂದ ಹೊರಡುವ ಮುನ್ನ ಕನ್ನಡಿಯಲ್ಲಿ ನಿಮ್ಮನ್ನು ನೋಡಿಕೊಂಡಿಲ್ಲವೇ?ʼʼಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ‘ನಾಚಿಕೆಗೇಡು’ ಎಂದು ಬರೆದುಕೊಂಡಿದ್ದರು.

ಇಶಾ ಗುಪ್ತಾ ಕೊನೆಯದಾಗಿ ಪ್ರಕಾಶ್ ಝಾ ಅವರ ಆಶ್ರಮ್‌ 3ರಲ್ಲಿ ಕಾಣಿಸಿಕೊಂಡರು. ‘ಜನ್ನತ್ 2’ ಚಿತ್ರದೊಂದಿಗೆ 2012 ರಲ್ಲಿ ಇಶಾ ಗುಪ್ತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

Exit mobile version