Site icon Vistara News

Cannes Film Festival: ಕಾನ್ ಚಿತ್ರೋತ್ಸವದಲ್ಲಿ ಅನಸೂಯಾ ಸೇನ್‌ಗುಪ್ತಾ ಅತ್ಯುತ್ತಮ ನಟಿ! ಈ ಪ್ರಶಸ್ತಿಗೆ ಪಾತ್ರರಾದ ಭಾರತದ ಮೊದಲ ತಾರೆ!

Cannes Film Festival Anasuya Sengupta gets Best Actress award

ಬೆಂಗಳೂರು: ಚೀನಾದ ನಿರ್ದೇಶಕ ʻಹೂ ಗುವಾನ್ʼ ಅವರ (Hu Guan) ಬ್ಲ್ಯಾಕ್ ಡಾಗ್ (Black Dog) ಸಿನಿಮಾ ಕಾನ್‌ ಅನ್ ಸರ್ಟೈನ್ ರಿಗಾರ್ಡ್ ಪ್ರಶಸ್ತಿಯನ್ನು (Un Certain Regard prize) ಗೆದ್ದುಕೊಂಡಿತು. ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ʻದಿ ಶೇಮ್‌ಲೆಸ್ʼ ಚಿತ್ರಕ್ಕಾಗಿ ಅನಸೂಯಾ ಸೇನ್‌ಗುಪ್ತಾ (Anasuya Sengupta) ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು. ಕಾನ್‌ ಫೆಸ್ಟಿವಲ್‌ನಲ್ಲಿ ಈ ಗೌರವಕ್ಕೆ ಪಾತ್ರರಾದ ಭಾರತೀಯ ಮೊದಲ ತಾರೆ ಇವರು. ಅನ್ ಸರ್ಟೈನ್ ರಿಗಾರ್ಡ್ ಎಂಬುದು ಕಾನ್‌ ಚಲನಚಿತ್ರೋತ್ಸವದ ಅಧಿಕೃತ ಆಯ್ಕೆಯ ಒಂದು ವಿಭಾಗವಾಗಿದೆ.

ಶುಕ್ರವಾರ ರಾತ್ರಿ (ಮೇ.24) ನಡೆದ ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅನಸೂಯಾ ಸೇನ್‌ಗುಪ್ತಾ ʻದಿ ಶೇಮ್‌ಲೆಸ್ʼ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಮುಖ್ಯವಾಗಿ ಮುಂಬೈನಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು ಅನುಸೂಯಾ. ಅನಸೂಯಾ ಸೇನ್‌ಗುಪ್ತಾ ಅವರು ಬಲ್ಗೇರಿಯನ್ ನಿರ್ದೇಶಕ ʻಕಾನ್‌ಸ್ಟಾಂಟಿನ್ ಬೊಜಾನೋವ್ʼ (Constantin Bojanov’s ) ಅವರ ಚಲನಚಿತ್ರ ʻದಿ ಶೇಮ್‌ಲೆಸ್‌ನಲ್ಲಿʼನ ಅವರ ಪಾತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಚಿತ್ರವನ್ನು ಭಾರತ ಮತ್ತು ನೇಪಾಳದಲ್ಲಿ ಒಂದೂವರೆ ತಿಂಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು ಎಂದು ವರದಿಯಾಗಿದೆ.

ಕಾನ್‌ಸ್ಟಾಂಟಿನ್ ಬೊಜಾನೋವ್ (Konstantin Bojanov) ನಿರ್ದೇಶನದ `ದಿ ಶೇಮ್‌ಲೆಸ್’ (The Shameless) ಚಿತ್ರ ರಾಣಿ ಎಂಬ ಭಾರತೀಯ ಲೈಂಗಿಕ ಕಾರ್ಯಕರ್ತೆಯ ಕುರಿತಾದ ಸಿನಿಮಾ. ರಾಣಿ ತೀರ್ಥಯಾತ್ರೆಗೆ ಹೋಗಿರುತ್ತಾಳೆ. ಆ ಬಳಿಕ ಬೆಂಗಳೂರಿನಲ್ಲಿ ಆಕೆ ಕೊಲೆಯಾಗುತ್ತಾಳೆ. ಇದು ಚಿತ್ರದ ತಿರುಳು.

ಇದನ್ನೂ ಓದಿ: Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ

ಅತ್ಯುತ್ತಮ ನಟಿ
ಅನಸೂಯಾ ಸೇನ್‌ಗುಪ್ತಾ

ಅತ್ಯುತ್ತಮ ನಟ
ಅಬೋ ಸಂಗಾರೆ

ಅತ್ಯುತ್ತಮ ನಿರ್ದೇಶಕ
ರಾಬರ್ಟೊ ಮಿನರ್ವಿನಿ (ROBERTO MINERVINI)

ಕಾನ್‌ ಚಲನಚಿತ್ರೋತ್ಸವದಲ್ಲಿ 18 ಫೀಚರ್‌ ಫಿಲ್ಮ್ಸ್‌ ಒಳಗೊಂಡಿತ್ತು. ಜ್ಯೂರಿಗಳಾಗಿ ಕೆನಡಾದ ನಟ, ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಕ್ಸೇವಿಯರ್ ಡೋಲನ್ ಇದ್ದರು. ಫ್ರೆಂಚ್-ಸೆನೆಗಲೀಸ್ ಚಿತ್ರಕಥೆಗಾರ ಮತ್ತು ನಿರ್ದೇಶಕ ಮೈಮೌನಾ ಡೌಕೋರೆ, ಮೊರೊಕನ್ ನಿರ್ದೇಶಕ ಅಸ್ಮೇ ಎಲ್ ಮೌದಿರ್, ಜರ್ಮನ್-ಲಕ್ಸೆಂಬರ್ಗ್ ನಟ ವಿಕಿ ಕ್ರಿಪ್ಸ್ ಮತ್ತು ಅಮೇರಿಕನ್ ಚಲನಚಿತ್ರ ವಿಮರ್ಶಕ ಟಾಡ್ ಮೆಕಾರ್ಥಿ ತೀರ್ಪುಗಾರರಾಗಿದ್ದರು.

ಪ್ರತಿ ವರ್ಷದಂತೆ ಈ ಬಾರಿಯೂ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತೀಯ ಸೆಲೆಬ್ರಿಟಿಗಳ ಉಪಸ್ಥಿತಿ ಕಂಡುಬಂದಿತ್ತು. ಈ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಮತ್ತು ಕಿಯಾರಾ ಆಡ್ವಾಣಿ ಕೂಡ ಭಾಗವಹಿಸಿದ್ದರು. ಅದಿತಿ ರಾವ್ ಹೈದರಿ ಕೂಡ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಮೇ 25ಕ್ಕೆ ಚಿತ್ರೋತ್ಸವ ಮುಕ್ತಾಯವಾಗಿದೆ. ಮೇ 14 ರಿಂದ ಮೇ 25ರವರೆಗೂ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ಅದ್ಧೂರಿಯಾಗಿ ನಡೆದಿದೆ. ಭಾರತದ 7 ಸಿನಿಮಾಗಳು 77ನೇ ಸಾಲಿನ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿವೆ. ಅವುಗಳಲ್ಲಿ ʻಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ,ʻಸಂತೋಷ್ʼ ಕನ್ನಡ ಕಿರುಚಿತ್ರ ʻಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋʼ, ʻಮಂಥನ್ʼ, ʻಸಿಸ್ಟರ್ ಮಿಡ್‌ನೈಟ್ʼ , ʻಇನ್ ರಿಟ್ರೀಟ್ʼ `ದಿ ಶೇಮ್‌ಲೆಸ್’ ಪ್ರದರ್ಶನ ಕಂಡಿವೆ.

Exit mobile version