Site icon Vistara News

Cannes Film Festival:  ಮಾಡೆಲ್‌ನನ್ನು ಒರಟಾಗಿ ಹೊರ ದಬ್ಬಿದ ಕಾನ್‌ ಚಲನಚಿತ್ರೋತ್ಸವ ಸಂಘಟಕರು; ವಿಡಿಯೊ ವೈರಲ್‌!

Cannes Film Festival Ukrainian model Sawa Pontyjska assault by security guard

ಬೆಂಗಳೂರು: ಉಕ್ರೇನಿಯನ್ ಮಾಡೆಲ್, ಫ್ಯಾಷನ್‌ ಟಿವಿ ನಿರೂಪಕಿ ಸಾವಾ ಪಾಂಟಿಜ್ಸ್ಕಾ ( Sawa Pontyjska ) ಅವರು ಇತ್ತೀಚೆಗೆ ನಡೆದ ಕಾನ್‌ ಚಲನಚಿತ್ರೋತ್ಸವದ (Cannes Film Festival) ಸಂಘಟಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಾವಾ ಆರೋಪಿಸಿದ್ದಾರೆ. ಭದ್ರತಾ ಸಿಬ್ಬಂದಿ ಸಾವಾ ಅವರನ್ನು ರೆಡ್‌ ಕಾರ್ಪೆಟ್‌ ಮೇಲೆ ಬರದಂತೆ ತಡೆದಿರುವ ವಿಡಿಯೊ ವೈರಲ್‌ ಆಗಿದೆ.

ಮಾರ್ಸೆಲ್ಲೊ ಮಿಯೊ ಅವರ ಪ್ರಥಮ ಪ್ರದರ್ಶನವಾಗುತ್ತಿತ್ತು. ಸಾವಾ ಪಾಂಟಿಜ್ಸ್ಕಾ ಟಿಕೆಟ್‌ನೊಂದಿಗೆ ಚಿತ್ರಮಂದಿರಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಅಲ್ಲಿರುವ ಸಿಬ್ಬಂದಿ ಅತ್ಯಂತ ಕ್ರೂರವಾಗಿ ಮಾಡೆಲ್‌ ಅವರನ್ನು ತಡೆದು ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಡೆಲ್‌ ಮಾತನಾಡಿ ʻʻಸಿಬ್ಬಂದಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾಕೆಂದರೆ ಅದು ಔಟ್‌ ಡೋರ್‌ ಆಗಿತ್ತು. ಆದರೆ ಭದ್ರತಾ ಸಿಬ್ಬಂದಿ ನನ್ನನ್ನು ಒಳಗೆ ತಳ್ಳಲು ಪ್ರಯತ್ನಿಸುತ್ತಿದ್ದಳು. ನನ್ನ ಮೇಲೆ ಕ್ರೂರವಾಗಿ ನಡೆದುಕೊಂಡಿದ್ದನ್ನು ಯಾರೂ ನೋಡಿಲ್ಲ. ಬಳಿಕ ನನ್ನನ್ನು ಹಿಂದಿನ ಬಾಗಿಲಿನ ಮೂಲಕ ಹೊರಹಾಕಿದರುʼʼ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಸಾವಿರಾರು ಜನರ ಸಮ್ಮುಖದಲ್ಲಿ ಹಿಂಸಾತ್ಮಕವಾಗಿ ನಡೆದುಕೊಂಡ ರೀತಿ ಬಗ್ಗೆ ನಟಿ ಮಾನಸಿಕವಾಗಿ ಕುಗ್ಗಿ ಹೋಗಿರುವುದಾಗಿ ವರದಿಯಾಗಿದೆ. ಇದೀಗ ನಟಿ ಕಾನ್‌ ಚಲನಚಿತ್ರೋತ್ಸವದ ಸಂಘಟಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ; Cannes 2024 Sandalwood Actress Interview: ಕಾನ್‌ನಲ್ಲಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ ಹೇಳಿದ್ದೇನು?

ವೈರಲ್‌ ವಿಡಿಯೊ

ನಟಿ ದೂರಿನಲ್ಲಿ ʻʻನನ್ನ ಮೇಲೆ ಕಾನ್‌ ಚಲನಚಿತ್ರೋತ್ಸವದ ಸಂಘಟಕರು ದೈಹಿಕವಾಗಿ ಹಾಗೂ ಮಾನಸಿಕವಾಕಿ ಹಲ್ಲೆ ನಡೆಸಿದ್ದಾರೆ. ನನ್ನ ಖ್ಯಾತಿಗೆ ಧಕ್ಕೆಯಾಗಿದೆ ಮತ್ತು ಪರಿಹಾರ ಧನ ನೀಡಬೇಕುʼʼಎಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

ಇದಕ್ಕೂ ಮೊದಲು ಮೇ 21 ರಂದು ನಡೆದ ಘಟನೆಯ ವಿಡಿಯೊವನ್ನು ಸಾವಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಮಹಿಳಾ ಸಿಬ್ಬಂದಿ ಬಳಿ ಒಳಗೆ ಹೋಗಲು ಸಾವಾ ಅನಮತಿ ಕೇಳಿದ್ದರು. ಆದರೆ ಭದ್ರತಾ ಸಿಬ್ಬಂದಿ ಸಾವಾ ಅವರನ್ನು ಒಳಗೆ ಬಿಟ್ಟಿಲ್ಲ. ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಅತಿಥಿಗಳಿಗೆ ಕಟ್ಟುನಿಟ್ಟಾದ ನಿಯಮಗಳು ಇವೆ. ಇದಕ್ಕೆ ಕಾನ್‌ ಹೆಸರುವಾಸಿಯಾಗಿದೆ.

Exit mobile version