ಬೆಂಗಳೂರು: “ರಿಟರ್ನ್ ಆಫ್ ದಿ ಜೇಡಿ” (“Return of the Jedi”) ಫ್ರಾಂಚೈಸ್‌ನಲ್ಲಿ ಪ್ರಿನ್ಸೆಸ್ ಲಿಯಾ ಆಗಿ ಕ್ಯಾರಿ ಫಿಶರ್ (Carrie Fisher) ನಟಿಸಿದ್ದರು. ಇದೀಗ ಕ್ಯಾರಿ ಫಿಶರ್ ಧರಿಸಿರುವ ಚಿನ್ನದ ಬಿಕಿನಿ ಶೈಲಿಯ ವೇಷಭೂಷಣ ಹರಾಜಿನಲ್ಲಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಪ್ರಮುಖವಾಗಿ ಸ್ಟಾರ್ ವಾರ್ 6ನೇ ಎಪಿಸೋಡ್‌ನಲ್ಲಿ ನಟಿ ಕ್ಯಾರಿ ಫಿಶರ್ ಮರೂನ್ ಹಾಗೂ ಗೋಲ್ಡನ್ ಬಣ್ಣದ ವಿಶೇಷ ಬಿಕಿನಿ ಧರಿಸಿದ್ದರು. ಪಾತ್ರಕ್ಕೆ ಹೊಂದಿಕೊಳ್ಳುವ ಬಿಕಿನಿ 1977ರಿಂದ 1983ರ ಅವಧಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
ಬಿಕಿನಿಯಲ್ಲಿ ಬ್ರಾ ಮೇಲೆ ಧರಿಸಿದ್ದ ಗೋಲ್ಡನ್ ಆಭರಣ ರೀತಿಯ ಡ್ರೆಸ್, ಕೈಗಳಿಗೆ ಧರಿಸಿದ್ದ ತೋಳ್ಬಳೆ, ಸೊಂಟಕ್ಕೆ ಧರಿಸಿದ್ದ ರಿಂಗ್ ಸೇರಿದಂತೆ ಫುಲ್ ಸೆಟ್ ಹರಾಜಾಗಿದೆ.
ಇನ್ನು ನಟಿ ಈ ಬಗ್ಗೆ ಈ ಮುಂಚೆ ಹಲವು ಸಂದರ್ಶನಗಳಲ್ಲಿ ಈ ಉಡುಪಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ʻʻ2016 ರ ಸಂದರ್ಶನದಲ್ಲಿ, ವೇಷಭೂಷಣವನ್ನು ಧರಿಸುವುದು ತನ್ನ ವೈಯಕ್ತಿಕ ಆಯ್ಕೆಯಲ್ಲ ಎಂದು ಫಿಶರ್ ಬಹಿರಂಗಪಡಿಸಿದರು. ನಿರ್ದೇಶಕ ಜಾರ್ಜ್ ಲ್ಯೂಕಾಸ್ ಮೊದಲು ನನಗೆ ಉಡುಪನ್ನು ತೋರಿಸಿದಾಗ ಅವರು ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿದೆ. ಅದು ನನಗೆ ತುಂಬಾ ಆತಂಕವನ್ನುಂಟುಮಾಡಿತು. ಡ್ರೆಸ್ ಹಾಕಿಕೊಳ್ಲುವಾಗಲೂ ತುಂಬ ನೇರವಾಗಿ ಕುಳಿತುಕೊಳ್ಳಬೇಕಾಗಿತ್ತುʼʼಎಂದು ಹೇಳಿಕೊಂಡಿದ್ದರು. ನಟಿ ಮರಣದ ಮುಂಚೆ ಈ ಬಗ್ಗೆ ಹೇಳಿಕೊಂಡಿದ್ದರು.
ಇದನ್ನೂ ಓದಿ: Actor Dhanush: ಮೂರೇ ದಿನಕ್ಕೆ 50 ಕೋಟಿ ರೂ. ಕಲೆಕ್ಷನ್ ಮಾಡಿದ ಧನುಷ್ ನಟನೆಯ ʻ50ʼನೇ ಸಿನಿಮಾ!
ರಿಚರ್ಡ್ ಮಿಲ್ಲರ್, ಈ ವೇಷಭೂಷಣದ ಸೃಷ್ಟಿಕರ್ತ. ಸಂದರ್ಶನವೊಂದರಲ್ಲಿ ಈ ಬಗ್ಗೆ ರಿಚರ್ಡ್ ಮಿಲ್ಲರ್ ಹೇಳಿದ್ದು ಹೀಗೆ. ʻʻಫಿಶರ್‌ಗೆ ಹೆಚ್ಚು ಚಲನೆಯ ಸ್ವಾತಂತ್ರ್ಯ ಸಿಗಬೇಕು ಎಂದು ಮೃದುವಾದ ವಸ್ತುಗಳನ್ನು ಬಳಸಿ ಬಿಕಿನಿ ತಯಾರಿಸಲಾಗಿತ್ತು. ಆದರೆ ಆಕೆ ಅದನ್ನು ಇಷ್ಟಪಡಲಿಲ್ಲ. ಈ ಬಗ್ಗೆ ಅವರನ್ನು ನಾನು ದೂಷಿಸುವುದಿಲ್ಲ, ನಟಿಗೆ ಕಂಫರ್ಟ್ ಆಗಿರಲಿ ಎಂದು ಹಿಂಭಾಗದಲ್ಲಿ ಚರ್ಮವನ್ನು ಹಾಕಿ ಉಡುಪು ತಯಾರಿಸಲಾಗಿತ್ತುʼʼಎಂದು ಹೇಳಿಕೊಂಡಿದ್ದರು.
ಕ್ಯಾರಿ ಫಿಶರ್ 2016ರ ಡಿಸೆಂಬರ್ 27ರಂದು ನಿಧನರಾಗಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲೂ ಕ್ಯಾರಿ ಅಭಿಯನದ ಮೂಲದ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಕ್ಯಾರಿ ಫಿಶರ್ ಅಭಿನಯಿಸಿದ ಸ್ಟಾರ್ ವಾರ್ಸ್ , ಲಾಸ್ಟ್ ಜೆಡಿ ಸೀರಿಸ್ ಮರಣನಂತರ ಅಂದರೆ 2017ರಲ್ಲಿ ಬಿಡುಗಡೆ ಕಂಡಿತ್ತು. ಇನ್ನು 2019ರಲ್ಲಿ ದಿ ರೈಸ್ ಆಫ್ ಸ್ಕೈವಾಕರ್ ಬಿಡುಗಡೆಯಾಗಿದೆ.