Site icon Vistara News

Niranjan Sudhindra | ʻಸೂಪರ್‌ ಸ್ಟಾರ್‌ʼ ನಿರ್ದೇಶಕರ ಮೇಲೆ ಕೇಸ್‌: ನಟ ಉಪೇಂದ್ರ ಕುಟುಂಬದ ಕುಡಿ ಈ ಸಿನಿಮಾ ಹೀರೊ!

Niranjan Sudhindra

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್‌ ಸುಧೀಂದ್ರ (Niranjan Sudhindra) ನಟನೆಯ ʻಸೂಪರ್‌ ಸ್ಟಾರ್‌ʼ ಚಿತ್ರದ ನಿರ್ದೇಶಕ ರಮೇಶ್‌ ವೆಂಕಟೇಶ್‌ ಬಾಬು ಅವರ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಚಿತ್ರದ ನಿರ್ಮಾಪಕ ಮೈಲಾರಿ ಎಂಬುವರು ನಿರ್ದೇಶಕರ ಮೇಲೆ ಕೋಟ್ಯಂತರ ರೂಪಾಯಿ ವಂಚನೆ ಮತ್ತು ತಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರ ತೆರೆಗೆ ಬರುವದಕ್ಕಿಂತ ಮುಂಚೆಯೇ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ನಿರ್ಮಾಪಕ ಮೈಲಾರಿ ಅವರು ನಿರ್ದೇಶಕರ ಮೇಲೆ ದೂರು ದಾಖಲಿಸಿದ್ದು ʻʻನಿರ್ದೇಶಕರು ನನಗೆ 1 ಕೋಟಿ 10 ಲಕ್ಷ ರೂ. ವಂಚನೆ ಮಾಡಿದ್ದಾರೆʼ ಎಂದು ಆರೋಪಿಸಿದ್ದಾರೆ. ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ತಮ್ಮ ಹಣವನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನಿರ್ಮಾಪಕನ ಚಿತ್ರವನ್ನು ನಿರ್ಮಾಪಕನಿಗೆ ಗೊತ್ತಿಲ್ಲದೆ ಮಾರಾಟ ಮಾಡಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ | Namma Hudugaru Movie | ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ ಗಾಂಧಿನಗರಕ್ಕೆ ಎಂಟ್ರಿ

ನಿರ್ದೇಶಕ ನೀಡಿದ ಪ್ರತಿಕ್ರಿಯೆ ಏನು?
ಈ ಬಗ್ಗೆ ವಿಸ್ತಾರದೊಂದಿಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಮೇಶ್‌ ವೆಂಕಟೇಶ್‌ ಬಾಬು ʻʻಮೈಲಾರಿಯವರು ಈ ಚಿತ್ರದ ನಿರ್ಮಾಪಕರೇ ಅಲ್ಲ. ಅವರು ಫೈನಾನ್ಸಿಯರ್‌ ಆಗಿ ಬಂದಿದ್ದರು. 15 ಲಕ್ಷ ರೂ. ಕೊಟ್ಟಿದ್ದಾರೆ. ನಮ್ಮ ಸಿನಿಮಾವನ್ನು ಹೈದರಾಬಾದ್‌ ಮೂಲದ ರಮಾ ಎಂಬುವರು ಟೇಕ್‌ ಓವರ್‌ ಮಾಡಿದ್ದಾರೆ. ಮೈಲಾರಿ ಅವರಿಗೆ ಈ ಸಿನಿಮಾ ಜತೆ ಯಾವುದೇ ವ್ಯವಹಾರ ಇಲ್ಲ. ಫೈನಾನ್ಸ್‌ ವಿಚಾರವಾಗಿ ಖಾಲಿ ಬಾಂಡ್‌ ಪೇಪರ್‌ ನಾನು ಕೊಟ್ಟಿದ್ದೆ. ಅದನ್ನು ತಮಗೆ ಬೇಕಾದಂತೆ ಬಳಸಿಕೊಂಡಿದ್ದಾರೆ. ಇದರ ಹೊರತಾಗಿ ಮೈಲಾರಿ ಅವರ ಬಳಿ ಯಾವುದೇ ದಾಖಲೆ ಇಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗೂ ಸತ್ಯನಾರಾಯಣ ಅವರನ್ನು ಹಾಕಿಕೊಂಡ ನಿರ್ದೇಶಕ ವೆಂಕಟೇಶ್ ಬಾಬು ಈ ಚಿತ್ರ ಮಾಡಿದ್ದಾರೆ. ನಾನು ಹಾಕಿದ ಬಂಡವಾಳ ವಾಪಾಸ್ ಕೇಳಲು ಹೋದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಹಲವು ಸಿನಿಮಾಗಳಲ್ಲಿ ನಿರಂಜನ್‌ ಬ್ಯಸಿ
ನಟ ನಿರಂಜನ್‌ ಸುಧೀಂದ್ರ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಕ್ಯೂ’ ಎಂಬ ಸಿನಿಮಾದಲ್ಲಿ ಇವರು ಹೀರೊ. ಇದರಲ್ಲಿ ‘ಮೈನೇ ಪ್ಯಾರ್‌ ಕಿಯಾ’ ಸಿನಿಮಾ ಖ್ಯಾತಿಯ ಭಾಗ್ಯಶ್ರೀ ಪುತ್ರಿ ಆವಂತಿಕಾ ನಾಯಕಿಯಾಗಿದ್ದಾರೆ. ‘ಹಂಟರ್‌’ ಎಂಬ ಸಿನಿಮಾವನ್ನು ಸಹ ನಿರಂಜನ್‌ ಒಪ್ಪಿಕೊಂಡಿದ್ದು, ವಿನಯ್‌ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಿರಂಜನ್‌ಗೆ ಜೋಡಿಯಾಗಿ ಮಲಯಾಳಂ ಬೆಡಗಿ ಸೌಮ್ಯ ಮೆನನ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Actress Shruti Haasan | ʻನನ್ನ ತಂದೆ-ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲʼ: ಶ್ರುತಿ ಹಾಸನ್‌!

Exit mobile version