Site icon Vistara News

Vijay Raghavendra: ಜ.26ಕ್ಕೆ ʻಕೇಸ್ ಆಫ್ ಕೊಂಡಾಣʼ ಬಿಡುಗಡೆ; ಖಾಕಿ ಖದರ್‌ನಲ್ಲಿ ಚಿನ್ನಾರಿ ಮುತ್ತ

case of kondana movie Release date

ಬೆಂಗಳೂರು: ವಿಜಯ ರಾಘವೇಂದ್ರ , ಭಾವನಾ ಮೆನನ್‌ ನಟನೆಯ ʻಕೇಸ್‌ ಆಫ್ ಕೊಂಡಾಣ’ ಬಿಡುಗಡೆಗೆ ದಿನಗಣನೆಯಷ್ಟೇ ಬಾಕಿ ಇದೆ. ದೇವಿಪ್ರಸಾದ್‌ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ ‘ಸೀತಾರಾಮ್‌ ಬಿನೋಯ್‌’ ಎಂಬ ಚಿತ್ರ ಮಾಡಿದ್ದ ಇವರು ಈಗ ಹೈಪರ್‌ ಲಿಂಕ್‌ ಕಥೆ ಇರುವ ಇನ್ವೆಸ್ಟಿಗೇಷನ್‌ ಜಾನರ್‌ನ ಚಿತ್ರವನ್ನು ಮಾಡಿದ್ದಾರೆ. ಚಿತ್ರ ಜನವರಿ 26ರಂದು ತೆರೆಕಾಣಲಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ SRV ಥಿಯೇಟರ್‌ನಲ್ಲಿ ಜ.17ರಂದು ಕೇಸ್ ಆಫ್ ಕೊಂಡಾಣ ಸುದ್ದಿ ಗೋಷ್ಟಿ ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಬರಹಗಾರರು ಹಾಗೂ ಸಂಭಾಷಣೆಗಾರರು ಆಗಿರುಗ ಜೋಗಿ, ಹೊಸ ಹುಡುಗರ ಜತೆ ನಮಗೆ ಕಲಿಯುವುದು ಇರುತ್ತದೆ. ಹೇಳಿದ ಕಥೆ ಬಹಳ ಚೆನ್ನಾಗಿತ್ತು. ಈ ಕಥೆ ನಡೆಯವುದು ಸಂಜೆ ಶುರುವಾಗಿ ರಾತ್ರಿ ನಡೆಯುತ್ತದೆ. ಬೆಳಗ್ಗೆ ಮುಗಿಯುತ್ತದೆ. ಕೊಂಡಾಣ ಇರುವುದು ದೇವಿಪ್ರಸಾದ್ ಮನಸ್ಸಿನಲ್ಲಿ. ಪ್ರತಿ ಪಾತ್ರ ದ್ರೋಹ ಮತ್ತು ದ್ರೋಹ ಕಂಡುಹಿಡಿಯುವ ಪಾತ್ರ. ಡೈಲಾಗ್ ರೈಟರ್ ಆಗಿ ನನ್ನ ಬಹಳಷ್ಟು ತಿದ್ದಿದ್ದಾರೆ. ಸಿನಿಮಾ ಪ್ರೀತಿಯಿಂದ ಬಂದ ಹುಡುಗರು ಅದ್ಭುತ ಸೆಟ್ ನಲ್ಲಿ ಶೂಟ್ ಮಾಡಿದ್ದಾರೆ. ಈ ರೀತಿ ನಿರ್ದೇಶಕರು ಹಾಗೂ ನಿರ್ಮಾಪಕರು ಬೇಕು ಎಂದರು.

ನಿರ್ಮಾಪಕ ಸಾತ್ವಿಕ್ ಹೆಬ್ಬಾರ್ ಮಾತನಾಡಿ ʻʻಸೀತಾರಾಮ್ ಬಿನೋಯ್ ಮಾಡಿದ್ದು ಅನಿವಾರ್ಯದಿಂದ. ಡೈರೆಕ್ಟನ್ ವಿಭಾಗದಲ್ಲಿ ನಾನು ದೇವಿ ಪ್ರಸಾದ್ ಕೆಲಸ ಮಾಡುತ್ತಿದ್ದೇವು. ಸ್ವಾತಂತ್ರ್ಯವಾಗಿ ಸಿನಿಮಾ ಮಾಡಲು ಹೊರಟಾಗ ಆಗಿದ್ದು ಸೀತಾರಾಮ್ ಬಿನೋಯ್. ಈ ಚಿತ್ರಕ್ಕೆ ಜನ ಮೆಚ್ಚುಗೆ ಸಿಕ್ಕಿತ್ತು. ಇನ್ನೊಂದು ಹೆಜ್ಜೆ ಇಟ್ಟಾಗ ಆಗಿದ್ದು ಕೇಸ್ ಆಫ್ ಕೊಂಡಾಣʼʼ ಎಂದರು.

ಇದನ್ನೂ ಓದಿ: Vijay Raghavendra: ವಿಜಯ್‌ ರಾಘವೇಂದ್ರ ಈಗ ಖಡಕ್‌ ಪೊಲೀಸ್‌; ʼಕೇಸ್ ಆಫ್ ಕೊಂಡಾಣʼ ಚಿತ್ರದ ಟ್ರೈಲರ್‌ ಔಟ್‌

ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ʻʻಜೋಗಿ ಸರ್ ಜತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಹೆಮ್ಮೆ ಇದೆ. ವಿಜಯ್ ಸರ್ ಸೆಕೆಂಡ್ ಅವಕಾಶ ಕೊಟ್ಟರು. ಕಥೆ ಕೇಳಿ ಒಕೆ ಎಂದರು. ಸೀತಾರಾಮ್ ಬಿನೋಯ್ ತರ ಚಿತ್ರ ಅಲ್ಲಾ. ಇದು ಮೂರು ನಾಲ್ಕು ಸ್ಟೋರಿ ಮೇಲೆ ಕಥೆ ಸಾಗುತ್ತದೆ. ಇದು ಐಮ್ಯಾಜಿನರಿ ಕಥೆ. ಹೈಪರ್ ಲಿಂಕ್ ಸಿನಿಮಾʼʼ ಎಂದರು.

ವಿಜಯ್ ರಾಘವೇಂದ್ರ ಮಾತನಾಡಿ, ʻʻಹೊಸಬರ ತಂಡ ತಾಳ್ಮೆಯಿಂದ ಕಾದು ಸಂಭಾಷಣೆ ಕೊಟ್ಟಿದ್ದಾರೆ. ಜೋಗಿ ಸರ್ ಅವರಿಗೆ ಧನ್ಯವಾದ. ಸೀತಾರಾಮ್ ಬಿನೋಯ್ ಆದ ಮೇಲೆ ಇನ್ನೊಂದು ಹಂತ ಬೆಳೆಯಬೇಕು. ಬೆಳವಣಿಗೆ ಕಾಣಬೇಕು. ಕಥೆ ರೂಪದಲ್ಲಿ ಅಥವಾ ಅದನ್ನು ಪ್ರೆಸೆಂಟ್ ಮಾಡುವ ರೀತಿ ಬೆಳವಣಿಗೆಯನ್ನು ಕಥೆ ರೂಪದಲ್ಲಿ ತಂದಿದ್ದರು. ಕೇಸ್ ಕೊಂಡಾಣ ಶೇಖಡಾ 80 ರಿಂದ 90 ರಾತ್ರಿ ಶೂಟ್‌ ಕೆಲಸದ ಬಗ್ಗೆ ಸಮಾಧಾನವಿದೆ. ಒಬ್ಬ ನಟನಾಗಿ ನಾನು ಬಹಳಷ್ಟು ಕಲಿತ್ತಿದ್ದೇನೆ. ತುಂಬಾ ಖುಷಿ ಖುಷಿಯಿಂದ ಕೆಲಸ ಮಾಡಿದ್ದೇವೆ. ನಮ್ಮ ಸಿನಿಮಾದ ಕಂಟೆಂಟ್ ಹಾಗೂ ಡೇಟ್ ಮೇಲೆ ನಂಬಿಕೆ ಇದೆʼʼ ಎಂದರು.

ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದ್ದು, ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ಕಥೆಯನ್ನು ಎಣೆಯಲಾಗಿದೆ. ಹೈಪರ್‌ಲಿಂಕ್ ನಿರೂಪಣೆಯನ್ನು ಹೊಂದಿರುವ ಕೇಸ್ ಆಫ್ ಕೊಂಡಾಣದಲ್ಲಿ ಖುಷಿ ರವಿ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಎಮೋಷನ್, ಕ್ರೈಂ, ಆಕ್ಷನ್, ಇರುವುದರ ಜೊತೆಗೆ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಚಿತ್ರಕಥೆ ಇದೆ.

ಇದನ್ನೂ ಓದಿ: Sruthi Hariharan: ಬಿಡುಗಡೆಗೆ ಸಜ್ಜಾಗಿ ನಿಂತಿದೆ ಶ್ರುತಿ ಹರಿಹರನ್ ಸಿನಿಮಾ ʼಸಾರಾಂಶ’!

ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವ ಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವ ಜಿತ್ ರಾವ್ ಸಾಹಿತ್ಯವಿರುವ ಈ ಚಿತ್ರಕ್ಕೆ ಜೋಗಿಯವರು ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜತೆಗೆ ದೇವಿಪ್ರಸಾದ್ ಶೆಟ್ಟಿ ಯವರು ಸಾತ್ವಿಕ್ ಹೆಬ್ಬಾರ್ ಜತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕೇಸ್ ಆಫ್ ಕೊಂಡಾಣ ಗಣರಾಜ್ಯ ದಿನದಂದು ಪ್ರೇಕ್ಷಕರ ಎದುರು ಬರಲಿದೆ.

Exit mobile version