Site icon Vistara News

Nenapirali Prem: `ಸಿದ್ಧ ಕಣೋ, ಪ್ರಾಣ ಕೊಡೋಕೆ’ ಎಂದು ಮೋದಿಗೆ ಪತ್ರ ಬರೆದ ನಟ ಪ್ರೇಮ್, ಜಾಡಿಸಿದ ಜನ!

Nenapirali Prem Blood letter To Modhi

ಬೆಂಗಳೂರು: ಕಾವೇರಿ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗ ಕೂಡ ಹೋರಾಟಕ್ಕೆ ಸಾಥ್‌ ಕೊಟ್ಟಿತ್ತು. ಇದೀಗ ʼನೆನಪಿರಲಿʼ ಪ್ರೇಮ್‌ (Nenapirali Prem) ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರೇಮ್​ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಕಾವೇರಿ ನಮ್ಮದು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʻʻಸಿದ್ಧ ಕಣೋ, ಪ್ರಾಣ ಕೊಡೋಕೆ. ಈ ನೆಲ ಜಲ ನಾಡ ನುಡಿಗೆʼʼ ಎಂದು ಕ್ಯಾಪ್ಷನ್‌ ಕೂಡ ಕೊಟ್ಟಿದ್ದಾರೆ.

ಈ ಪೋಸ್ಟ್‌ ಹಂಚಿಕೊಳ್ಳುತ್ತದ್ದಂತೆ ನೆಟ್ಟಿಗರು ನಟನಿಗೆ ಕಾಲೆಳೆದಿದ್ದಾರೆ. ʻʻನೀವು ಸಂವಿಧಾನ , ಕಾನೂನು ತಿಳಿದಿಕೊಂಡಿದ್ದೀರಾ? ದ್ವಿ ಸರ್ಕಾರ ಪದ್ಧತಿ ನಮ್ಮಲ್ಲಿ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯವಸ್ಥೆ ಇದೆ.  ಎರಡು ರಾಜ್ಯಗಳ ನಡುವಿನ ವ್ಯಾಜ್ಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಬರುತ್ತದೆಯೇ? ನಮ್ಮ ಕಾನೂನಿನಲ್ಲಿ ಆ ಅವಕಾಶ ವಿಲ್ಲ.  ಎರಡು ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಬಳಿ ಹೋದಾಗ ಅವರನ್ನು ಸಮಾಧಾನ ಮಾಡಬಹುದೇ ವಿನಹ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕೇವಲ ಭದ್ರತಾ ವಿಷಯದಲ್ಲಿ ಮಾತ್ರ ಕೇಂದ್ರ ಸರ್ಕಾರದ  ನಿರ್ಧಾರ ತೆಗೆದುಕೊಳ್ಳುವ  ಅವಕಾಶ ಸಂವಿಧಾನ  ಕಲ್ಪಿಸಿದೆ.  ರಾಜ್ಯದಲ್ಲಿ ಅಸ್ಥಿರತೆ, ಅಜಾಗರೂಕತೆ ಉಂಟಾಗಿ ರಾಷ್ಟ್ರಪತಿ ಆಡಳಿತ ಉಂಟಾದರೆ ಕೇಂದ್ರ ಆಡಳಿತ ಇರುತ್ತದೆ. ಸದ್ಯ ಕಾವೇರಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ನ್ಯಾಯಾಂಗ ಸ್ವತಂತ್ರ ಅದರಲ್ಲಿ ಶಾಸನಕಾಂಗ ಕಾರ್ಯಾಂಗ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರ ಸಮಸ್ಯೆ ಕುರಿತು ವಾದವನ್ನು  ಸಮರ್ಪಕವಾಗಿ  ಮಂಡಿಸಿದೆಯೆ? ಇಲ್ಲವಲ್ಲ. ಅವರು ಸೂಚಿಸುವ ಮೊದಲೇ ನೀರು ಬಿಟ್ಟಿದೆ. ಅದೂ ಕೋರ್ಟ್ ಹೇಳುವುದಕ್ಕಿಂತ ಹೆಚ್ಚಾಗಿ. ಮೇಲಾಗಿ ಕಾಂಗ್ರೆಸ್ ಪಕ್ಷದ ಮಿತ್ರಪಕ್ಷವಾದ  ಡಿಎಂಕೆಯೇ ತಮಿಳುನಾಡಿನಲ್ಲಿ ಇದೆ. ಯಾಕೆ ಆ ರಾಜ್ಯದ ಮುಖ್ಯಮಂತ್ರಿಗಳೊಡನೆ ಚರ್ಚೆ ಮಾಡಿ ಕರ್ನಾಟಕ ಪರಿಸ್ಥಿತಿ ವಿವರಿಸಬಾರದು?ʼʼ ಎಂದು ಜನ ಪ್ರಶ್ನಿಸಿದ್ದಾರೆ.

“”ತ್ರಿಬ್ಯುನಲ್ ಸೂಚಿಸದರೂ ನೀರು ಬಿಡದೆ  ಸುಪ್ರೀಂ ಕೋರ್ಟ್‌ನಲ್ಲಿ ಹೋಗಿ ಕರ್ನಾಟಕ ಪರಿಸ್ಥಿತಿ ವಿವರಿಸಿಬೇಕಾಗಿತ್ತು. ಅದ್ಯಾವದನ್ನೂ ರಾಜ್ಯ ಸರ್ಕಾರ ಮಾಡಿಲ್ಲ. ಎಲ್ಲವೂ ಕೇಂದ್ರ ಸರ್ಕಾರ ಮಾಡಬೇಕೆಂದರೆ ರಾಜ್ಯ ಸರ್ಕಾರ ನಮಗೆ ಏತಕ್ಕೆ ಬೇಕು? ಯಾಕಿರಬೇಕು‌? ರಾಜ್ಯದ ಹೊಣೆ ಕೇಂದ್ರ ಸರ್ಕಾರದ್ದೋ ರಾಜ್ಯ ಸರ್ಕಾರದ್ದೋ?  ಕಾವೇರಿ ನೀರಿನ ವಿಷಯ ನಡೆಯುತ್ತಿರುವ ರಾಜಕೀಯದಲ್ಲಿ ನಿಮ್ಮಂತಹ ಕಲಾವಿದರು ಭಾಗಿಯಾಗುತ್ತಿರುವುದು ನಿಜಕ್ಕೂ ಬೇಸರ ವಿಷಯ. ರಾಜ್ಯ ಸರ್ಕಾರ ಕೇಳಬೇಕಾದ ಪ್ರಶ್ನೆ ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೀರಿ.‌ ಕಾವೇರಿ ಒಂದೇ ಅಲ್ಲ, ಉತ್ತರ ಕರ್ನಾಟಕ ನೀರಿನ ವ್ಯಾಜ್ಯಗಳು ಬಹಳ ಇವೆʼʼ ಎಂದೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Karnataka Bandh : ಕಾವೇರಿದ ಕಾವೇರಿ ವಿವಾದ; ನಿರ್ಲಕ್ಷ್ಯಕ್ಕೆ ಕಿಡಿ ಕಿಡಿ, ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ

ನೆನಪಿರಲಿ ಪ್ರೇಮ್‌ ಪೋಸ್ಟ್‌

ʻʻಕಾಂಗ್ರೆಸ್ ಏಜೆಂಟ್ ಡಿಕೆ ಶಿವಕುಮಾರ್ ಏಜೆಂಟ್ ಗಳಂತೆ ವರ್ತಿಸುವುದು ನಿಲ್ಲಿಸಿʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ʻʻಪ್ರಾಣ, ರಕ್ತ ಬೇಕಿಲ್ಲ ವಿಚಾರವಂತಿಕೆ, ಬದ್ಧತೆ ಬೇಕು. ನೀರಿದ್ದಾಗ ಮೈಮರೆತು, ನೀರಿಲ್ಲದಾಗ ಹೋರಾಟ ಮಾಡಿದರೆ ಉಪಯೋಗವಿಲ್ಲʼʼ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರದ ಬಂದ್‌ ಯಶಸ್ಸಿನಿಂದ ಉತ್ತೇಜಿತರಾಗಿರುವ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ (Vatal Nagaraj) ಅವರು ಅಕ್ಟೋಬರ್‌ 5ರಂದು ಕೆಆರ್‌ಎಸ್‌ ಅಣೆಕಟ್ಟಿಗೆ ಮುತ್ತಿಗೆ (KRS Chalo on October 5) ಹಾಕುವುದಾಗಿ ಘೋಷಿಸಿದ್ದಾರೆ. ಅಂದು 22 ಸಾವಿರ ವಾಹನಗಳ ಮೂಲಕ ಕೆಆರ್‌ಎಸ್‌ ಚಲೋ ಮಾಡುವುದಾಗಿ ಪ್ರಕಟಿಸಿದ್ದಾರೆ.

Exit mobile version