ಬೆಂಗಳೂರು: ಅನೇಕ ಸಿನಿ ತಾರೆಯರು(Celebrities), ರಾಜಕೀಯ ಮುಖಂಡರು ಹಾಗೂ ಕ್ರೀಡಾಪಟುಗಳ ಟ್ವಿಟರ್ ಬ್ಲೂಟಿಕ್ ಏಪ್ರಿಲ್ 20ರ ರಾತ್ರಿಯಿಂದಲೇ ಕಳೆದುಕೊಂಡಿದ್ದಾರೆ. ಟ್ವಿಟರ್ ಬ್ಲೂ ಪಡೆಯಬೇಕು ಎಂದಾದರೆ ತಿಂಗಳು ಅಥವಾ ಒಂದು ವರ್ಷದ ಚಂದಾದಾರತ್ವ ಪಡೆಯಬೇಕು. ಈ ಕ್ರಮದಿಂದ ಹಲವಾರು ಸೆಲೆಬ್ರಿಟಿಗಳು ತಮ್ಮ ನೀಲಿ ಟಿಕ್ ಮಾರ್ಕ್ ಕಳೆದುಕೊಂಡಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಿನಿಮಾ ನಟರಾದ ಅಮಿತಾಭ್ ಬಚ್ಚನ್, ಶಾರುಕ್ ಖಾನ್, ಯಶ್, ಅಲ್ಲು ಅರ್ಜುನ್ ಸೇರಿದಂತೆ ಹಲವರು ಟ್ವಿಟರ್ ಬ್ಲೂ ಟಿಕ್ ಮಾಯವಾಗಿದೆ. ಮರಳಿ ಬ್ಲೂಟಿಕ್ ಪಡೆಯಬೇಕು ಎಂದರೆ ಹಣ ಪಾವತಿಸಬೇಕು. ಏಪ್ರಿಲ್ 20ರಿಂದ ಈ ನಿಯಮ ಜಾರಿಗೆ ಬಂದಿದೆ.
ಬ್ಲೂಟಿಕ್ ಬೇಕೆಂದರೆ ಹಣ ಕಟ್ಟಲೇಬೇಕು
ಏಪ್ರಿಲ್ 1ರಿಂದ ಟ್ವಿಟ್ಟರ್ ನಿಯಮಗಳನ್ನು ಬದಲಿಸಿ ಬೇಗ ಸಬ್‌ಸ್ಕ್ರೈಬ್ ಮಾಡಿಕೊಳ್ಳುವಂತೆ ಟ್ವಿಟ್ಟರ್ ಹೇಳಿತ್ತು. ಕೆಲವರು ಮುನ್ನೆಚ್ಚರಿಕೆ ವಹಿಸಿದ ಕಾರಣ ಅವರ ಖಾತೆಗಳ ಬ್ಲೂಟಿಕ್ ಉಳಿದುಕೊಂಡಿದೆ. ಇನ್ನು ಈ ಟ್ವಿಟರ್ ಬ್ಲೂಟಿಕ್‌ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂ. ಹಣ ಪಾವತಿಸಬೇಕು. ಬ್ಲೂಟಿಕ್ ಚಂದಾದಾರರಿಗೆ ಅಕ್ಷರಮಿತಿ ಹೆಚ್ಚಿಸುವುದಾಗಿ ಹೇಳಿದ್ದರು. ವಿದೇಶಿ ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗಿದೆ. ಟ್ವೀಟ್ನ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10,000ಕ್ಕೆ ಹೆಚ್ಚಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದರು.
ಇದನ್ನೂ ಓದಿ: Twitter: ಇನ್ನು ಟ್ವಿಟರ್‌ನಿಂದಲೂ ಬಳಕೆದಾರರು ಹಣ ಗಳಿಸಬಹುದು! ಎಲಾನ್ ಮಸ್ಕ್ ಹೇಳಿದ್ದೇನು?
ಬ್ಲ್ಯೂ ಟಿಕ್ ಕಳೆದುಕೊಂಡವರ ಪಟ್ಟಿ ಬೆಳೆಯುತ್ತಲೇ ಇವೆ. ಅವರಲ್ಲಿ ಪವನ್ ಕಲ್ಯಾಣ್, ಸಮಂತಾ, ಆಲಿಯಾ ಭಟ್, ಸಲ್ಮಾನ್ ಖಾನ್, ಕ್ರಿಕೆಟಿಗ ರೋಹಿತ್ ಶರ್ಮಾ ಸೇರಿದಂತೆ ಹಲವರು ಇದ್ದಾರೆ.