Site icon Vistara News

Vikrant Rona | ವಿಕ್ರಾಂತ್‌ ರೋಣನ ಬಗ್ಗೆ ಸೆಲೆಬ್ರಿಟಿಗಳ ಮೆಚ್ಚುಗೆಯ ಟ್ವೀಟ್‌ಗಳು

Vikrant Rona

ಬೆಂಗಳೂರು: ವಿಶ್ವಾದ್ಯಂತ ವಿಕ್ರಾಂತ್‌ ರೋಣನ (Vikrant Rona) ಅಬ್ಬರ ಮುಂದುವರಿದಿದೆ. 3ಡಿ ಹಾಗೂ 2ಡಿ ರೂಪದಲ್ಲಿ 2500 ಸ್ಕ್ರೀನ್‌ಗಳಲ್ಲಿ ತೆರೆಕಂಡಿರುವ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್‌ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಶುರುವಾಗಿದ್ದು, ಅಭಿಮಾನಿಗಳು ಕಿಚ್ಚನ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಸೆಲೆಬ್ರಿಟಿಗಳು ವಿಕ್ರಾಂತ್‌ ರೋಣ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ಬಾಲಿವುಡ್‌, ಸ್ಯಾಂಡಲ್‌ವುಡ್‌, ಕಾಲಿವುಡ್‌, ಟಾಲಿವುಡ್‌ ಹೀಗೆ ನಟ-ನಟಿಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇದೀಗ ಬಾಲಿವುಡ್‌ ನಟ ರಿತೇಶ್ ದೇಶಮುಖ್‌ ವಿಕ್ರಾಂತ್‌ ರೋಣ ಸಿನಿಮಾ ಹಾಗೂ ಸುದೀಪ್‌ ನಟನೆಯ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಬ್ಲಾಕ್‌ಬಸ್ಟರ್‌ ಅಲರ್ಟ್‌!! 3D ಯಲ್ಲಿ #VikrantRona ಅನುಭವ ಅದ್ಭುತವಾಗಿದೆ ಎಂದು ರಿತೇಶ್‌ ಬರೆದುಕೊಂಡಿದ್ದಾರೆ.

ಕಿಚ್ಚನ ಅಭಿಮಾನಿಗಳ ಬಳಗ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಲ್ಲದೆ ವಿಆರ್ ಹಾಗೂ ಕಿಚ್ಚನ ಭಾವಚಿತ್ರದ ಟ್ಯಾಟೂವನ್ನು ಉಚಿತವಾಗಿ ಫ್ಯಾನ್ಸ್‌ಗೆ ಟ್ಯಾಟೂ ಕೂಡ ಹಾಕಿಸಿದ್ದಾರೆ.

ಸಿನಿಮಾಗಿಂತ ಹೆಚ್ಚಿನದಾಗಿ ರಕ್ಕಮ್ಮ ಹಾಡಿಗೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು ಹಾಡು ಬಂದ ತಕ್ಷಣ ಸೀಟ್‌ನಿಂದ ಎದ್ದು ನಿಂತು ಹೆಜ್ಜೆ ಹಾಕಿದ್ದಾರೆ. ವೀರೇಶ್ ಚಿತ್ರಮಂದಿರ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು, ಒಟ್ಟಾರೆ ರಾತ್ರಿ 10 ಗಂಟೆವರೆಗೂ ಶೋ ನಡೆಯಲಿವೆ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದೆ. ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ಒಳ್ಳೆಯ ಕಲೆಕ್ಷನ್ ಮಾಡಿದೆ. ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು, ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ.

ಇದನ್ನೂ ಓದಿ | Vikrant Rona | ರಕ್ಕಮ್ಮ ಹಾಡಿಗೆ ಕುಣಿದು ಕುಪ್ಪಳಿಸಿದ ಕಿಚ್ಚನ ಅಭಿಮಾನಿಗಳು, ಎಲ್ಲೆಡೆ ಅಬ್ಬರಿಸುತ್ತಿದೆ ರೋಣ

ಶಾಲಿನಿ ಆರ್ಟ್ಸ್ ಬ್ಯಾನರ್​ ಅಡಿ ಜಾಕ್​ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ | Vikrant Rona Review | ಮೇಕಿಂಗ್‌ನಲ್ಲಿ ಹೊಸ ಜಗತ್ತು ಕಟ್ಟಿದ ವಿಕ್ರಾಂತ್‌ ರೋಣ

Exit mobile version