ಬೆಂಗಳೂರು: ಮೇ 14 ಅಮ್ಮಂದಿರ ದಿನ. ವಿಶೇಷವಾಗಿ ತಾಯಿಯನ್ನು ಗೌರವಿಸಲು ನಾವು ತಾಯಂದಿರ ದಿನವನ್ನು (Mother’s Day) ಆಚರಿಸುತ್ತೇವೆ. ಸೋನಂ ಕಪೂರ್‌ನಿಂದ ಹಿಡಿದು ಆಲಿಯಾ ಭಟ್‌ವರೆಗೆ ಅನೇಕ ಸೆಲೆಬ್ರಿಟಿಗಳು ಮೊದಲ ತಾಯಂದಿರ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಬಿಪಾಶಾ ಬಸು
ಬಿಪಾಶಾ ಬಸು ಹೆಣ್ಣು ಮಗುವಿಗೆ ನವೆಂಬರ್ 12ರಂದು ಜನ್ಮ ನೀಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಅವರು ಕಳೆದ ಆಗಸ್ಟ್‌ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿ ತಿಳಿಸಿದ್ದರು. ತಮ್ಮ ಮಗಳಿಗೆ ದೇವಿಯ ಆಶೀರ್ವಾದ ಎಂದು ಕರೆಯುವ ಬಿಪಾಶಾ ಮಗಳಿಗೆ ‘ದೇವಿ’ ಎಂದೂ ನಾಮಕರಣ ಮಾಡಿದ್ದಾರೆ. ಬಿಪಾಶಾ ಬಸು ಅವರಿಗೆ ಮೊದಲ ತಾಯಂದಿರ ದಿನ.
ಸೋನಂ ಕಪೂರ್
ಸೋನಂ 2018 ರಲ್ಲಿ ತನ್ನ ಬಹುಕಾಲದ ಗೆಳೆಯ ಆನಂದ್ ಅಹುಜಾ ಅವರನ್ನು ವಿವಾಹವಾದರು. ಆಗಸ್ಟ್ 20, 2022ರಂದು ಗಂಡು ಮಗುವಿಗೆ ಸೋನಂ ಜನ್ಮ ನೀಡಿದ್ದರು. ಸೋನಂ ಕಪೂರ್ ದಂಪತಿ ತಮ್ಮ ಮಗನಿಗೆ ʻವಾಯು ಕಪೂರ್ ಅಜುಹಾʼ ಎಂದು ಹೆಸರಿಟ್ಟಿದ್ದಾರೆ. ಹಿಂದೂ ಧರ್ಮದಲ್ಲಿರುವ ಪಂಚಭೂತಗಳಲ್ಲಿ ವಾಯುವೂ ಕೂಡ ಒಂದು ಎಂಬ ಕಾರಣಕ್ಕೆ ತಮ್ಮ ಮಗನಿಗೆ ʻವಾಯುʼ ಎಂದು ಹೆಸರಿಟ್ಟಿದ್ದೇವೆ ಎಂದು ಸೋನಂ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಕಾಜಲ್ ಅಗರ್ವಾಲ್
ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲೂ ಗುರುತಿಸಿಕೊಂಡಿರುವ ನಟಿ ಕಾಜಲ್ ಅಗರ್ವಾಲ್ ಗಂಡು ಮಗುವಿಗೆ ತಾಯಿ ಆಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಮಗ ನೀಲ್‌ನ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದರು. ಕರೊನಾ ಲಾಕ್‌ಡೌನ್ ಸಮಯದಲ್ಲಿ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು.
ಇದನ್ನೂ ಓದಿ: Parenting Tips: ತಾಯಂದಿರೇ, ಮಕ್ಕಳ ದೇಹಕ್ಕೆ ಕ್ಯಾಲ್ಶಿಯಂ ಈ ಎಲ್ಲ ಆಹಾರಗಳಿಂದಲೂ ಸಿಗುತ್ತವೆ!
ಆಲಿಯಾ ಭಟ್
ನಟಿ ಆಲಿಯಾ ಭಟ್ ಈ ವರ್ಷ ತನ್ನ ಮೊದಲ ತಾಯಂದಿರ ದಿನವನ್ನು ಆಚರಿಸಲಿದ್ದಾರೆ. ಆಲಿಯಾ ಭಟ್ (Alia Bhatt) ಅವರು ರಣಬೀರ್ ಕಪೂರ್ ಜತೆ 2022 ಏಪ್ರಿಲ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿ ನವೆಂಬರ್ 6, 2022ರಂದು ಮಗಳು ರಾಹಳನ್ನು ಬರಮಾಡಿಕೊಂಡಿದ್ದರು. ರಾಹ ಎಂದರೆ ಅದರ ಮೂಲ ಅರ್ಥ ದೈವಿಕ ಮಾರ್ಗ ಎಂದು. ಸ್ವಾಹಿಲಿ ಭಾಷೆಯಲ್ಲಿ ಸಂತೋಷ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ಕುಲ ಎಂಬ ಅರ್ಥವಿದೆ. ಬಾಂಗ್ಲಾದಲ್ಲಿ ವಿಶ್ರಾಂತಿ, ಆರಾಮ ಹಾಗೂ ನಿರಾಳ ಎಂಬ ಅರ್ಥವಿದೆ. ಅರೇಬಿಕ್‌ನಲ್ಲಿ ಸಂತೋಷ, ಸ್ವಾತಂತ್ರ್ಯ ಹಾಗೂ ಆನಂದ ಎಂಬ ಅರ್ಥವಿದೆ. ಇವೆಲ್ಲವೂ ನಮ್ಮ ಪುತ್ರಿಗೆ ಅನ್ವರ್ಥ. ನಾವು ಅವಳನ್ನು ಹೊಂದಿದ ಮೊದಲ ದಿನದಿಂದಲೂ ಈ ಮೇಲಿನ ಎಲ್ಲವನ್ನೂ ಅನುಭವಿಸಿದ್ದೇವೆ. ನಮ್ಮ ಕುಟುಂಬಕ್ಕೆ ಬಂದಿರುವುದಕ್ಕೆ ಧನ್ಯವಾದಗಳು ರಾಹ, ನಿನ್ನಿಂದಾಗಿ ನಮ್ಮ ಜೀವನ ಈಗಷ್ಟೇ ಶುರುವಾಗಿದೆ ಎಂದು ಅಂದುಕೊಳ್ಳುತ್ತೇನೆ,” ಎಂದು Aಲಿಯಾ ಭಟ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.