ಬೆಂಗಳೂರು : 74ನೇ ಗಣರಾಜ್ಯೋತ್ಸವವನ್ನು (Republic Day 2023) ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಿದೆ. ಗಣರಾಜ್ಯೋತ್ಸವ ದಿನ, ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡುವ ದಿನವಾಗಿದೆ. ಪ್ರತಿ ವರ್ಷ ಭಾರತದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿವಿಧ ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಟ್ವೀಟ್ ಮಾಡಿ ʻʻಭಾರತ ಗಣರಾಜ್ಯವು 74ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ನಮ್ಮ ತಾಯಿನಾಡಿಗೆ ನಮ್ಮ ನಿರಂತರ ನಿಷ್ಠೆಯನ್ನು ಪ್ರತಿಜ್ಞೆ ಮಾಡೋಣ. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತೇವೆ. ಮತ್ತು ವೈವಿಧ್ಯತೆಯಲ್ಲಿ ಏಕತೆ ಹೊಂದಿದ್ದೇವೆ. ನಮ್ಮ ರಾಷ್ಟ್ರದ ಹಬ್ಬಗಳು ಮತ್ತು ದೇಶಭಕ್ತಿಯನ್ನು ಉತ್ಸಾಹದಿಂದ ಆಚರಿಸೋಣʼʼಎಂದು ಬರೆದಿದ್ದಾರೆ.
ಇದನ್ನೂ ಓದಿ: Republic day 2023 : ಚುನಾವಣಾ ವರ್ಷದಲ್ಲಿ ಸರ್ಕಾರ, ರಾಜ್ಯದ ಸಾಧನೆ ತೆರೆದಿಟ್ಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ ʻʻನಿಮಗೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ನಮ್ಮ ಹೆಮ್ಮೆಯ ಪರಂಪರೆಯನ್ನು ಗುರುತಿಸುವ ದಿನ. ಈ ವರ್ಷ, ಈ ದಿನ ನನಗೆ ಅತ್ಯಂತ ವಿಶೇಷವಾಗಿರುತ್ತದೆ. ಏಕೆ ಎಂದು ನಿಮಗೆ ಶೀಘ್ರದಲ್ಲೇ ತಿಳಿಯುತ್ತದೆ. ಜೈ ಹಿಂದ್ʼʼಎಂದು ಬರೆದಿದ್ದಾರೆ.
ಟಾಲಿವುಡ್ ನಟ ಚಿರಂಜೀವಿ ʻʻಸ್ವಾತಂತ್ರ್ಯದ ಅಮೂಲ್ಯ ಕೊಡುಗೆಗಾಗಿ ಮತ್ತು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಕ್ಕಾಗಿ ನಮ್ಮ ಸಂಸ್ಥಾಪಕ ಪಿತಾಮಹರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವುದು ಮತ್ತು ವಂದಿಸುವುದು ಈ ದಿನ. ನಮ್ಮ ತಾಯ್ನಾಡು ಎಂದೆಂದಿಗೂ ಸಮೃದ್ಧವಾಗಿರಲಿ. ಭಾರತೀಯರಾದ ನಮಗೆಲ್ಲರಿಗೂ 74ನೇ ಗಣರಾಜ್ಯೋತ್ಸವದ ಶುಭಾಶಯಗಳʼʼ ಎಂದು ಬರೆದಿದ್ದಾರೆ.
ಬಹುಭಾಷಾ ನಟ ಆರ್ ಮಾಧವನ್ ʻʻನಿಮಗೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ರಾಷ್ಟ್ರ ಗೀತೆಯನ್ನು ಗಟ್ಟಿಯಾಗಿ ಮತ್ತು ಹೆಮ್ಮೆಯಿಂದ ಹಾಡಿʼʼಬರೆದಿದ್ದಾರೆ.
ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ʻʻನನ್ನ ಎಲ್ಲಾ ಭಾರತೀಯರಿಗೆ 74 ನೇ ಗಣರಾಜ್ಯೋತ್ಸವದ ಶುಭಾಶಯಗಳು. ನಮ್ಮ ದೇಶವನ್ನು ನಡೆಸುತ್ತಿರುವ ನಮ್ಮ ಸಂವಿಧಾನದ ಅನುಷ್ಠಾನವನ್ನು ಆಚರಿಸೋಣʼʼಎಂದು ಬರೆದಿದ್ದಾರೆ.
ಟಾಲಿವುಡ್ ನಟ ಮಹೇಶ್ ಬಾಬು ʻʻಪ್ರಜಾಪ್ರಭುತ್ವದ ಚೈತನ್ಯವನ್ನು ಮತ್ತು ನಮ್ಮ ಈ ಮಹಾನ್ ರಾಷ್ಟ್ರವನ್ನು ಆಚರಿಸುತ್ತಿದ್ದೇವೆ. ಇಂದು ಮತ್ತು ಪ್ರತಿದಿನ. ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳುʼʼಎಂದು ಬರೆದಿದ್ದಾರೆ.
ನಟ ಕಮಲ್ ಹಾಸನ್ ʻʻಪ್ರತಿಯೊಬ್ಬ ಮನುಷ್ಯನನ್ನು ಸಮಾನವಾಗಿ ಪರಿಗಣಿಸಿದಾಗ ಮಾತ್ರ ಗಣರಾಜ್ಯವು ತನ್ನ ಸಂಪೂರ್ಣ ಅರ್ಥವನ್ನು ಪಡೆಯುತ್ತದೆ. ದೇಶದ ಸಾರ್ವಭೌಮತ್ವ ಪ್ರಜೆಗಳ ಮೇಲಿದೆ ಎಂಬುದನ್ನು ಮನಗಂಡು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಪಣ ತೊಟ್ಟಿರುವ ಹರಿಕಾರರಿಗೆ ನಮನ ಸಲ್ಲಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳುʼʼಬರೆದಿದ್ದಾರೆ.
ಇದನ್ನೂ ಓದಿ: Republic Day 2023: 74ನೇ ಗಣರಾಜ್ಯೋತ್ಸವ; ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಧ್ವಜಾರೋಹಣ
ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನವು ದೇಶ ಸ್ವಾತಂತ್ರ್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ.