Site icon Vistara News

Fighter Movie: ʻಫೈಟರ್‌ʼ ಚಿತ್ರದಲ್ಲಿನ ದೀಪಿಕಾ ʻಬಿಕಿನಿʼ ಮೇಲೆ ಸೆನ್ಸಾರ್‌ ಮಂಡಳಿ ಕೆಂಗಣ್ಣು!

intimate scenes from the Fighter Movie

ಮುಂಬೈ: ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ʻಫೈಟರ್ʼ ಇದೇ ಜನವರಿ 25ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಬಿಕಿನಿ ದೃಶ್ಯಕ್ಕೆ ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಕತ್ತರಿ ಹಾಕಿದೆ ಎಂದು ವರದಿಯಾಗಿದೆ.

‘ಫೈಟರ್’ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟು ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಅದೇ ಹಾಡಿನಲ್ಲಿ ಹೃತಿಕ್ ರೋಷನ್ ಸಹ ಶರ್ಟ್ ಬಿಚ್ಚಿ ತಮ್ಮ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಿದ್ದಾರೆ. ಈ ಹಾಡಿಗೆ ಸಿಬಿಎಫ್​ಸಿ ಎರಡು ಕಟ್​ಗಳನ್ನು ಸೂಚಿಸಿ ಯು/ಎ ಪ್ರಮಾಣ ಪತ್ರ ನೀಡಿದೆ. ವಿಶೇಷ ಅಂದರೆ ಈ ಹಿಂದೆ ʻಪಠಾಣ್‌ʼ ಸಿನಿಮಾದ ಬಿಕಿನಿ ವಿಚಾರಕ್ಕೆ ದೀಪಿಕಾ ಸಖತ್‌ ಸುದ್ದಿಯಾಗಿದ್ದರು. ʻಪಠಾಣ್‌ʼನಲ್ಲಿಯ ದೀಪಿಕಾರ ಬಿಕಿನಿ ಹಾಡಿಗೆ 10 ಕಟ್​ಗಳನ್ನು ಸಿಬಿಎಫ್​ಸಿ ಸೂಚಿಸಿತ್ತು. ʻಫೈಟರ್‌ʼ ಹಾಗೂ ʻಪಠಾಣ್‌ʼ ಎರಡೂ ಸಿನಿಮಾಗಳ ನಿರ್ದೇಶಕ ಒಬ್ಬರೇ. ಇದೀಗ ಸಿದ್ಧಾರ್ಥ್‌ ಆನಂದ್‌ ಮತ್ತೆ ಸೆನ್ಸಾರ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಲೈಂಗಿಕ ದೃಶ್ಯಗಳಿರುವ ಸೀನ್‌ಗಳನ್ನು ತೆಗೆದುಹಾಕಲು ಕೂಡ ಸೂಚಿಸಿದೆ.

ಸಿನಿಮಾ ಪ್ರಚಾರ ಮಾಡುತ್ತಿಲ್ಲ ದೀಪಿಕಾ!

ನಟಿ ದೀಪಿಕಾ ಮತ್ತು ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಡುವೆ ಬಿರುಕು ಉಂಟಾಗಿದೆ ಎಂಬ ಗಾಸಿಪ್‌ಗಳಿವೆ. ಇದಕ್ಕೆ ಪೂರಕ ಎಂಬಂತೆ ನಟಿ ಎಲ್ಲಿಯೂ ʻಫೈಟರ್‌ʼ ಸಿನಿಮಾವನ್ನು ಪ್ರಚಾರ ಮಾಡುತ್ತಿಲ್ಲ. ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಜತೆಗೆ ಹೃತಿಕ್ ಮತ್ತು ಅನಿಲ್ ಕಪೂರ್ ಮಾತ್ರ ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Fighter Movie: ʻಫೈಟರ್‌ʼ ಸಿನಿಮಾ ʻಶೇರ್ ಖುಲ್ ಗಯೇʼ ಕದ್ದ ಟ್ಯೂನ್‌? ನೀವೆ ಕೇಳಿ ಹೇಳಿ!

ವರದಿಯ ಪ್ರಕಾರ ಸಿನಿಮಾ ಬಿಡುಗಡೆಗೂ ಮುನ್ನ 3.7 ಕೋಟಿ ರೂ ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಈಗಾಗಲೇ ಲಕ್ಷಾಂತರ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಹಿಂದಿ 2ಡಿ ಆವೃತ್ತಿಯನ್ನು 46,175 ಸಿನಿ ವೀಕ್ಷಕರು ಖರೀದಿಸಿದ್ದರೆ, ಹಿಂದಿ 3ಡಿ ಆವೃತ್ತಿಗೆ 61,419 ಟಿಕೆಟ್‌ಗಳನ್ನು ಖರೀದಿಸಲಾಗಿದೆ. ಇದಲ್ಲದೆ, ಹಿಂದಿ IMAX 3D ಗಾಗಿ 6,014 ಮತ್ತು ಹಿಂದಿ 4DX 3D ಗಾಗಿ 1,577 ಟಿಕೆಟ್‌ಗಳು ಮಾರಾಟವಾಗಿವೆ.

ಗಲ್ಫ್ ದೇಶಗಳಲ್ಲಿ ʻಫೈಟರ್‌ʼ ಸಿನಿಮಾ ನಿಷೇಧ!

ಫಿಲ್ಮ್‌ ಬಿಸ್ನೆಸ್‌ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್‌ ಜೋಹಾರ್‌ ಪ್ರಕಾರ ಸದ್ಯ ಯುಎಇ (Fighter Banned) ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾಕ್ಕೆ ಅನುಮತಿ ದೊರಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಗಲ್ಫ್‌ ದೇಶಗಳಲ್ಲಿ ಫೈಟರ್‌ ಸಿನಿಮಾ ಬಿಡುಗಡೆಯಾಗದೆ ಇರುವುದಕ್ಕೆ ಕಾರಣವೇನೆಂದು ಬಹಿರಂಗವಾಗಿಲ್ಲ.

ಈಗಾಗಲೇ ಪಠಾಣ್‌ ಮೂಲಕ 1000 ಕೋಟಿಯ ಹಿಟ್‌ ಸಿನಿಮಾ ನೀಡಿರುವ ಸಿದ್ಧಾರ್ಥ್‌ ಆನಂದ್‌, ಫೈಟರ್‌ ಮೂಲಕ ಮತ್ತೊಂದು ಹಿಟ್‌ ಸಿನಿಮಾ ನೀಡಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಂದು ನಿಮಿಷ 10 ಸೆಕೆಂಡ್‌ನ ಟೀಸರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಹೃತಿಕ್​ ರೋಷನ್​ ಜತೆ ಸಿದ್ಧಾರ್ಥ್‌ ಆನಂದ್‌ ಅವರು ಈ ಹಿಂದೆ ‘ವಾರ್​’ ಮತ್ತು ‘ಬ್ಯಾಂಗ್​ ಬ್ಯಾಂಗ್​’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್​’ ಚಿತ್ರದಲ್ಲಿ ಹೃತಿಕ್​ ರೋಷನ್​ ಜತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.

Exit mobile version