ಬೆಂಗಳೂರು: ಟೋಬಿ ಫಸ್ಟ್ ಲುಕ್ ಇವೆಂಟ್ ವೇಳೆ ಟೋಬಿ ಸಿನಿಮಾದ ನಟಿ ಚೈತ್ರಾ ಆಚಾರ್ ಅವರು ರಾಜ್ಬಿ ಶೆಟ್ಟಿ (Raj B Shetty) ಅವರನ್ನು ಅಪ್ಪಿ ಮುತ್ತು ಕೊಟ್ಟಿರುವ ವಿಡಿಯೊ ವೈರಲ್ ಆಗಿತ್ತು. ಈ ಸುದ್ದಿ ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ರಾಜ್ ಈ ಬಗ್ಗೆ ವಿಸ್ತಾರ ನ್ಯೂಸ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ʻʻಚೈತ್ರಾ ಆಚಾರ್ ಮಗು ತರ. ಹಗ್, ಕಿಸ್ ಎನ್ನುವುದು ಸೆಕ್ಷುವಲ್ ಅಲ್ಲʼʼ ಎಂದು ನೇರವಾಗಿಯೇ ಉತ್ತರ ನೀಡಿದ್ದಾರೆ.
ರಾಜ್ ಬಿ ಶೆಟ್ಟಿ ಮಾತನಾಡಿ ʻʻಚೈತ್ರಾ ಆಚಾರ್ ಮಗು ತರ. ಹಗ್, ಕಿಸ್ ಎನ್ನುವುದು ಸೆಕ್ಷುವಲ್ ಅಲ್ಲ. ಅವಳು ಮಗುವೇ. ಕ್ಯಾಮೆರಾ ಮುಂದೆ ಈ ರೀತಿ ಮಾಡಬೇಕಾ. ಮಾಡಬಾರದಾ ಎಂಬುದು ಅವಳಿಗೆ ಗೊತ್ತಿಲ್ಲ. ಅಂತಹ ಮುಗ್ದೆ ಅವಳು. ಹಾಗಾಗಿ ಅದನ್ನು ಬೇರೆ ತರ ಭಾವಿಸುವುದು ತಪ್ಪು. ಅಣ್ಣ ತಂಗಿ, ಫ್ರೆಂಡ್ ಫ್ರೆಂಡ್ ಹಗ್ ಮಾಡುವುದು ತಪ್ಪೇನಲ್ಲʼʼ ಎಂದು ಹೇಳಿದರು.
ಟೋಬಿ ಸಿನಿಮಾ ಈಗಾಗಲೇ ಕಥೆಗಾರ ಟಿ. ಕೆ. ದಯಾನಂದ್ ತಾವೇ ಸ್ವತಃ ನೋಡಿದ ಕಾರವಾರದ ವಿಲಕ್ಷಣ ವ್ಯಕ್ತಿಯ ಬದುಕನ್ನು ಈ ಸಿನಿಮಾದಲ್ಲಿ ಇದೆ ಎಂದಿದ್ದಾರೆ. ಆ ವ್ಯಕ್ತಿಯನ್ನು ನೋಡಿದಾಗಿಂದ, ನಾನಾ ರೀತಿಯಲ್ಲಿ ಆತ ಕಾಡಿದ. ಆ ಕಾಡಿದ ವ್ಯಕ್ತಿಯ ಕಥೆಯೇ ಟೋಬಿ ಸಿನಿಮಾ ಎಂದಿದ್ದಾರೆ ಅವರು. ಸಂದರ್ಶನದಲ್ಲಿ ರಾಜ್ ಈ ಬಗ್ಗೆ ಮಾತನಾಡಿ ʻʻಟೋಬಿ ಸಿನಿಮಾವನ್ನು ಶೂಟಿಂಗ್ ಮಾಡಲು ತುಂಬ ಸಮಯ ತೆಗೆದುಕೊಂಡೆವು. ಮಂಗಳೂರಿನ ಭಾಗಗಳಲ್ಲಿ ಶೂಟ್ ಮಾಡಿದೆವು. ಕುಮಟಾದಲ್ಲಿಯೇ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಬೇರೆ ಕಡೆಯಲ್ಲಿ ಮಾಡಬೇಕಾಯ್ತು. ಅದೇ ರೀತಿ ಹೊಂದುವಂತಹ ಮುಲ್ಕಿ ಭಾಗದಲ್ಲಿ ಶೂಟಿಂಗ್ ಮಾಡಿದೆವುʼʼ ಎಂದರು.
ಇದನ್ನೂ ಓದಿ: Raj B Shetty: ಕುರಿ ತರಲು ಹೋಗಿ ಹೋತ ತಂದ್ರು; ಟಗರಿನ ಕಥೆ ಬಿಚ್ಚಿಟ್ಟ ರಾಜ್ !
ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಚೈತ್ರಾ ಆಚಾರ್
‘ಮಹಿರ’ ಸಿನಿಮಾ ಮೂಲಕ ಚೈತ್ರಾ ಆಚಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ‘ಆ ದೃಶ್ಯ’ ಚಿತ್ರದಲ್ಲೂ ನಟಿಸಿದ್ದರು. ಒಳ್ಳೆ ಗಾಯಕಿ ಕೂಡ ಆಗಿರುವ ಆಕೆ ‘ಗರುಡಗಮನ ವೃಷಭವಾಹನ’ ಚಿತ್ರದ ‘ಸೋಜುಗಾದ ಸೂಜಿ ಮಲ್ಲಿಗೆ’ ಹಾಡು ಹಾಡಿ ಕಮಾಲ್ ಮಾಡಿದ್ದರು. ಚೈತ್ರಾ ನಟನೆಯ ‘ಗಿಲ್ಕಿ’ ಹಾಗೂ ‘ತಲೆದಂಡ’ ಚಿತ್ರಗಳು ರಿಲೀಸ್ ಆಗಿದೆ. ಸದ್ಯ ‘ಸ್ಟ್ರಾಬೆರಿ’, ‘ಬ್ಲಿಂಕ್’, ‘ಹ್ಯಾಪಿ ಬರ್ತ್ಡೇ ಟು ಮಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ.