ಬೆಂಗಳೂರು: ʼಬಿಗ್ ಬಾಸ್ʼನಿಂದ ಹೆಚ್ಚು ಜನಪ್ರಿಯರಾಗಿರುವ ಆ್ಯಂಕರ್ ಚೈತ್ರಾ ವಾಸುದೇವನ್ (Chaitra Vasudevan) ಅವರು ತಮ್ಮ ದಾಂಪತ್ಯಕ್ಕೆ ವಿಚ್ಛೇದನ ನೀಡಿದ್ದು, ಈ ನಿರ್ಧಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (instagram) ಪ್ರಕಟಿಸಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದಾರೆ.
ಆ್ಯಂಕರ್ ಆಗಿದ್ದ ಚೈತ್ರಾ ‘ಬಿಗ್ ಬಾಸ್ (big boss) ಕನ್ನಡ ಸೀಸನ್ 7’ರ ಸ್ಪರ್ಧಿಯಾಗಿದ್ದರು. ಚೈತ್ರಾ ವಾಸುದೇವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ದಿನಚರಿಗಳ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಈಗ ಅವರು ನೀಡಿರುವುದು ಶಾಕಿಂಗ್ ಸುದ್ದಿ. ಅವರು ಸತ್ಯ ನಾಯ್ಡು ಅವರನ್ನು ಸರಳವಾಗಿ ಮದುವೆ ಆಗಿದ್ದರು. ದಾಂಪತ್ಯದಲ್ಲಿ ಬಂದಿರುವ ಯಾವುದೇ ಬಿಕ್ಕಟ್ಟಿನ ಬಗ್ಗೆ ಅವರು ಏನೂ ಮಾಹಿತಿ ನೀಡಿರಲಿಲ್ಲ. ಇದ್ದಕ್ಕಿದ್ದಂತೆ ಡೈವೋರ್ಸ್ ಸೂಚನೆ ನೀಡಿರುವುದು ಚೈತ್ರಾ ಅಭಿಮಾನಿಗಳಿಗೆ ಶಾಕಿಂಗ್ ಆಗಿದ್ದು, ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಚೈತ್ರಾ ವಾಸುದೇವನ್ ಅವರು ತಿಳಿಸಿಲ್ಲ.
ಚೈತ್ರಾ ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚೈತ್ರಾ ಅವರು ರೇಂಜ್ ರೋವರ್ ಕಂಪೆನಿಯ Evoque ಮಾಡೆಲ್ ಎಸ್ಯುವಿ ಅನ್ನು ಖರೀದಿ ಮಾಡಿದ್ದರು. ಈ ಕಾರಿನ ಆನ್ ರೋಡ್ ಬೆಲೆ 89 ಲಕ್ಷ ರೂಪಾಯಿ ಇದೆ.