Site icon Vistara News

Challenging Star darshan: ಒಳ್ಳೆಯವರಾಗಿದ್ದು ಸಾಕು, ಇನ್ನಾದ್ರೂ ʻವಿಲನ್ʼ ಆಗೋಣ ಎಂದ ʻಡೆವಿಲ್ʼ ದರ್ಶನ್‌!

Challenging Star darshan first Reaction in birthday

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Challenging Star darshan) ಅವರ ಜನುಮದಿನದ ಅಂಗವಾಗಿ ಫ್ಯಾನ್ಸ್‌ ಮಧ್ಯರಾತ್ರಿಯಿಂದಲೇ ದರ್ಶನ್‌ ಅವರ ಮನೆ ಮುಂದೆ ಜಮಾಯಿಸಿ ವಿಶ್‌ ಮಾಡಿದ್ದಾರೆ. ದರ್ಶನ್ ಅಭಿನಯಿಸಿರುವ ಎಲ್ಲಾ ಸಿನಿಮಾಗಳ ಹೆಸರನ್ನು ಸ್ಕೂಟಿ ಮೇಲೆ ವಿಶೇಷ ಚೇತನ ಅಭಿಮಾನಿಯೊಬ್ಬರು ಹಾಕಿಸಿದ್ದಾರೆ. ದರ್ಶನ್‌ ಭಾವಚಿತ್ರದ ಟೀಶರ್ಟ್‌ವನ್ನು ಕೊಂಡುಕೊಳ್ಳುತ್ತಿದ್ದಾರೆ ಫ್ಯಾನ್ಸ್‌. ಇದೀಗ ದರ್ಶನ್‌ ಆರ್ ಆರ್ ನಗರದ ನಿವಾಸದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ದರ್ಶನ್‌ ಮಾತನಾಡಿ ʻʻ25ವರ್ಷ ಸಿನಿ ಜರ್ನಿ ಸುಲಭ ಇರ್ಲಿಲ್ಲ. ತುಂಬಾ ಕಷ್ಟ ಪಟ್ಟು ಬಂದ ಮೇಲೆ ಈ ಸಕ್ಸೆಸ್‌ ಸಿಕ್ಕಿದೆ. ಇಷ್ಟು ದಿನ ಒಳ್ಳೆಯವರಾಗಿದ್ದು ಸಾಕು, ಇನ್ನಾದ್ರೂ ವಿಲನ್ ಆಗೋಣ ಎಂದು ʻಡೆವಿಲ್ʼ ಟೀಸರ್ ಬಿಟ್ಟಿದ್ದೇವೆ. ಎಲ್ಲಾ ನಮ್ಮ ಸ್ಟಾರ್ಸ್ ನಾಳೆ (ಫೆ.17) ʻಬೆಳ್ಳಿ ಪರ್ವʼದಲ್ಲಿ ಭಾಗಿಯಾಗುತ್ತಿದ್ದಾರೆ. ʻಕಾಟೇರʼ ಸಕ್ಸೆಸ್‌ ನನ್ನ ಕರಿಯರ್‌ ಗ್ರಾಫ್ ನಲ್ಲಿ ಏನು ಬದಲಾವಣೆ ತಂದಿಲ್ಲ. ಯಾಕೆ ಹೊಸಬರ ಚಿತ್ರ ಪ್ರೇಕ್ಷಕರಿಗೆ ತಲುಪಲ್ಲ ಅಂದರೆ, ಹೊಸಬರೆಲ್ಲ ಫೀಲ್ಡ್‌ಗೆ ಇಳಿದು ಪ್ರಚಾರ ಮಾಡಬೇಕು. ನಿರ್ದೇಶಕ ತರುಣ್ ಸುಧೀರ್ ಅವರ ಜತೆ ನೆಕ್ಸ್ಟ್ ಸಿನಿಮಾ ಮುಂದಿನ ದಿನಗಳಲ್ಲಿ ಅಪ್ಡೇಟ್ ಸಿಗುತ್ತದೆ. ನಾನು ವರ್ಷಕ್ಕೆ ಎರಡು ಸಿನಿಮಾ ಮಾಡುವುದಕ್ಕೆ ಟ್ರೈ ಮಾಡುತ್ತೇನೆ. ಆದರೆ ಮಾನಿಟರ್‌ನಿಂದ ಲೇಟ್ ಆಗುತ್ತದೆ. ಎಲ್ಲರೂ ಬಂದು ನೋಡ್ತಾರೆ. ಸಜೇಷನ್‌ ಕೊಡುತ್ತಾರೆ. ಇದರಿಂದ ಎಲ್ಲವೂ ತಡವಾಗುತ್ತದೆ. ಇದರಿಂದ ಬಹಳ ದಿನ ಶೂಟಿಂಗ್ ಟೈಂ ಹಿಡಿಯುತ್ತದೆ. ಮುಂಚೆ ಮಾನಿಟರ್ ಎಲ್ಲ ಇರಲಿಲ್ಲʼʼ ಎಂದರು.

ಇದನ್ನೂ ಓದಿ: Challenging Star Darshan: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಿನಿಮಾಗೂ ಜೈ! ವಿವಾದಕ್ಕೂ ಸೈ!

ಹೇಗಿರಲಿದೆ  ‘ಬೆಳ್ಳಿ ಪರ್ವ’ ಆಚರಣೆ?

ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಫೆಬ್ರವರಿ 17ರ ಸಂಜೆ 5ಕ್ಕೆ ಈ ಕಾರ್ಯಕ್ರಮ ಆರಂಭ ಆಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ. ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ. ಇವೆಲ್ಲ ಕಾರ್ಯಗಳ ಉಸ್ತುವಾರಿಯನ್ನು ದರ್ಶನ್ ಅವರ ಆತ್ಮೀಯರಾದ ಎಸ್.ಸಚ್ಚಿದಾನಂದ ಇಂಡುವಾಳು ವಹಿಸಿಕೊಂಡಿದ್ದಾರೆ.

Exit mobile version