Chandan Shetty: ವಿಚ್ಛೇದನದ ಬಳಿಕ ಮುದ್ದುರಾಕ್ಷಸಿ ಅಂದ ಚಂದನ್ ಶೆಟ್ಟಿ Pragati Bhandari 3 ತಿಂಗಳುಗಳು ago ಕಿರುತೆಯ ಜನಪ್ರಿಯ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇದೇ ವರ್ಷ ಜೂನ್ 7ರಂದು ಒಮ್ಮತದಿಂದ ವಿಚ್ಛೇದನ ಪಡೆದುಕೊಂಡಿದ್ದರು. ಚಂದನ್ ಮತ್ತು ನಿವೇದಿತಾ ಡಿವೋರ್ಸ್ ಕಾರಂದಿಂದ ಕ್ಯಾಂಡಿ ಕ್ರಶ್ ಅನ್ನುವ ಸಿನೆಮಾ ಅರ್ಧದಲ್ಲೇ ನಿಲ್ಲಿಸಲಾಗಿತ್ತು. ಈ ಚಿತ್ರದಲ್ಲಿ ಇವರಿಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈದಿಗ ತಾತ್ಕಾಲಿಕ ಟೈಟಲ್ ಆಗಿದ್ದ ಕ್ಯಾಂಡಿ ಕ್ರಶ್ ಹೆಸರನ್ನು ಬದಲಾಯಿಸಿ ಮುದ್ದುರಾಕ್ಷಸಿ ಎಂದು ಮಾಡಲಾಗಿದೆ. ಪುನೀತ್ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋ ಥ್ರಿಲ್ಲರ್ ಮೂವಿಯಾಗಿದೆ. ಚಂದನ್ ಮತ್ತು ನಿವೇದಿತಾ ಅಗಸ್ಟ್ 30ರಂದು ಚಿತ್ರದ ಟೈಟಲ್ ಅನ್ನು ತಮ್ಮ ಜಾಲಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಎಂ.ಎಸ್.ತ್ಯಾಗರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಎ.ಕರುಣಾಕರ್ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: Namratha Gowda: ಕಪ್ಪು ಸೀರೆಯುಟ್ಟು ನೋಡುಗರ ನಿದ್ದೆಗೆಡಿಸಿದ ಕಿರುತೆರೆ ನಟಿ ನಮ್ರತಾ ಗೌಡ