Site icon Vistara News

Chandan Shetty: ನಮ್ಮ ಖುಷಿ ಮೇಲೆ ಪ್ರಶಾಂತ್‌ ಸಂಬರಗಿ ಕಣ್ಣು; ಟಾಂಗ್‌ ಕೊಟ್ಟ ಚಂದನ್‌ ಶೆಟ್ಟಿ

Chandan Shetty reaction about prashant sambaragi statement on divorce

ಬೆಂಗಳೂರು: ಚಂದನ್‌ ಶೆಟ್ಟಿ (Niveditha Gowda) ಹಾಗೂ ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ಎಂದು ಚಂದನ್‌ ಕುರಿತಾಗಿ ಬರೆದುಕೊಂಡಿದ್ದರು. ಇದಾದ ಬಳಿಕ ಪ್ರಶಾಂತ್‌ ಸಂಬರಗಿ ʻದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಎಂದು ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆʼʼ ಎಂದಿದ್ದರು. ಇದೀಗ ಚಂದನ್‌ ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಹೆಸರನ್ನು ಪ್ರಸ್ತಾಪ ಮಾಡದೇ ಈ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ.

“ಮಾಧ್ಯಮಗಳಲ್ಲಿ ಮೂರನೇ ವ್ಯಕ್ತಿ ನಮ್ಮ ಸಂಬಂಧದ ಬಗ್ಗೆ ಕೊಟ್ಟಿರುವ ಹೇಳಿಕೆ ನಿಜವಲ್ಲ. ಇದು ನಮ್ಮ ವೈಯಕ್ತಿಕ ಜೀವನ. ನಾವಿಬ್ರು ಖುಷಿಯಾಗಿರಬೇಕು ಎಂದೇ ದೂರ ಆಗಿರುವುದು. ಆದರೆ ಆ ವ್ಯಕ್ತಿ ನಮ್ಮ ಖುಷಿ ನೋಡುವುದಕ್ಕೆ ಆಗ್ತಿಲ್ಲ ಅನ್ನಿಸುತ್ತದೆ. ನಮ್ಮ ಜೋಡಿ ನೋಡಿ ಎಲ್ಲರೂ ಖುಷಿ ಪಡ್ತಾ ಇದ್ದರು. ಬೇರೆ ಕಡೆ ನಾನು ಸಂದರ್ಶನ ಒಬ್ಬರು ಕೊಟ್ಟಿರುವುದು ನೋಡಿದೆ. ನಾನು ಯಾರಿಗೂ ಫ್ರೆಂಡ್‌ ಅಂದಿಲ್ಲ, ಆ ವ್ಯಕ್ತಿ ಜತೆ ನಾನು ಏನೂ ಆ ತರ ಮಾತನಾಡಿಲ್ಲ. ಈ ರೀತಿ ಅವರು ಮಾತನಾಡಿದ್ದು ಸುಳ್ಳು. ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಬೇರೆ ಅವರ ವೈಯಕ್ತಿಕ ಜೀವನ ಬಗ್ಗೆ ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಗೊತ್ತಿಲ್ಲ. ನಾವು ಪೋಷಕರು ಜತೆ ಮಾತನಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮಿಬ್ಬರ ಮಧ್ಯೆ ಇಲ್ಲದೇ ಇರುವ ಉಹಾ ಪೋಹಾ ಬೀಜ ಬಿತ್ತಬೇಡಿ. ಇಲ್ಲಿಗೆ ಈ ವಿಚಾರ ನಿಲ್ಲಿಸಿ. ವದಂತಿಗಳಿಗೆ ಕಿವಿ ಕೊಡಬೇಡಿ. ಆದರೆ ನಾವು ಬ್ಯಾಲೆನ್ಸ್‌ ಮಾಡೋಕೆ ನೋಡಿದ್ವಿ ಆದರೆ ಆಗಿಲ್ಲʼʼಅಷ್ಟೇ ಅಂದರು.

ಇದನ್ನೂ ಓದಿ: Chandan Shetty: ಚಂದನ್-ನಿವೇದಿತಾ ಸಂಬಂಧ ಸರಿ ಮಾಡ್ತಾರಾ ಧ್ರುವ ಸರ್ಜಾ? ಪ್ರಥಮ್ ಕೊಟ್ಟಿದ್ದಾರೆ ಕ್ಲೂ!

ಪ್ರಶಾಂತ್‌ ಸಂಬರಗಿ ಹೇಳಿದ್ದೇನು?

ಪ್ರಶಾಂತ್‌ ಸಂಬರಗಿ ಮಾತನಾಡಿ ʻʻನನಗೆ ಚಂದನ್‌ ಆತ್ಮೀಯ ಗೆಳೆಯ. ಚಂದನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’  ಸಿನಿಮಾದಲ್ಲಿ ಚಂದನ್‌ ನಾಯಕ. ನಾನು ಅದರಲ್ಲಿ ಪೊಲೀಸ್‌ ಪಾತ್ರ ಮಾಡಿದ್ದೇನೆ. 15 ದಿನಗಳ ಕಾಲ ಒಟ್ಟಿಗೆ ಶೂಟಿಂಗ್‌ ಮಾಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹೊಡೆದಾಡಿಕೊಂಡಿದ್ದೇವೆ,, ಮಜಾ ಮಾಡಿದ್ದೇವೆ. ಚಂದನ್‌ ಹಾಗೂ ನಿವೇದಿತಾ ಸ್ಯಾಂಡಲ್‌ವುಡ್‌ ಪವರ್‌ ಕಪಲ್‌. ಆದರೆ ಏಕಾಏಕಿ ಅವರು ದೂರ ಆದರು. ಎಲ್ಲರೂ ಈ ವಿಷಯ ಕೇಳಿ ಶಾಕ್‌ ಆದರು. ಆದರೆ ನನಗೆ ಈ ವಿಚಾರ ಹೊಸದಲ್ಲ. ಒಂದು ವರ್ಷದ ಹಿಂದೆಯೇ ಗೊತ್ತಿತ್ತುʼʼ ಎಂದಿದ್ದರು.

ʻʻಚಂದನ್‌ ದಸರಾದಲ್ಲಿ ಪ್ರಪೋಸ್‌ ಮಾಡಿರುವ ಬಗ್ಗೆ ನನ್ನ ಧಿಕ್ಕಾರ ಕೂಡ ಇತ್ತು. ಆದರೂ ಕೊನೆಗೆ ಅವೆಲ್ಲ ಕ್ಷಮಿಸಿ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದೆ. ಈ ತಿಂಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಪ್ರಮೋಷನ್‌ಗೆ ಚಂದನ್‌ ಬರಲಿಲ್ಲ. ಹಲವು ಪ್ರಮೋಷನ್‌ಗೆ ಬರಲಿಲ್ಲ. 6 ತಿಂಗಳ ಹಿಂದೆಯೇ ಚಂದನ್‌ ಬಗ್ಗೆ ಹಿಂಟ್‌ ಸಿಕ್ಕಿತ್ತು. ಚಂದನ್‌ ಮನಸ್ಥಿತಿ ಸರಿಯಿಲ್ಲ ಎಂದು. ಒಂದು ಪ್ರಪೋಷನ್‌ ಲಾಂಚ್‌ಗೆ ಮನೆಯಲ್ಲಿ ಹಾಕಿರುವ ಡ್ರೆಸ್‌ ಹಾಕಿಕೊಂಡೇ ಚಂದನ್‌ ಬಂದಿದ್ದರು. ಇದಕ್ಕೆ ನಮ್ಮ ಭಿನ್ನಾಭಿಪ್ರಾಯ ಕೂಡ ಇತ್ತು. ನೀವು ಹೀರೊ ಆಗಿ ಹೀರೊ ತರಹ ಪ್ರೆಸೆಂಟ್‌ ಆಗಬೇಕು. ಈ ತರಹ ಅವತಾರದಲ್ಲಿ ಬರೋದು ಸರಿಯಲ್ಲ ಎಂದು ನಿರ್ದೇಶಕರು ಕೇಳಿದಾಗ, ಈ ವಿಚಾರ ಬಹಿರಂಗಪಡಿಸಿದ್ದರು. ನಂದು ಮತ್ತೆ ನಿವೇದಿತಾ ವಿಷನ್‌ ಮ್ಯಾಚ್‌ ಆಗ್ತಿಲ್ಲ. ಒಟ್ಟಿಗೆ ಬದುಕಲು ಆಗ್ತಿಲ್ಲ. ತುಂಬ ಸಮಸ್ಯೆಯಲ್ಲಿದ್ದೇನೆ. ಮುಂದೆ ಗೊತ್ತಾಗತ್ತೆ ಎಂದು ಚಂದನ್‌ ನಿರ್ದೇಶಕರ ಹತ್ತಿರ ಹೇಳಿಕೊಂಡಿದ್ದರು ʼ ಎಂದಿದ್ದರು.

ʻʻಚಂದನ್ ಅಮೆರಿಕಾಗೆ ಮ್ಯೂಸಿಕ್ ಕಾರ್ಯಕ್ರಮಕ್ಕೆ ಹೋಗಿದ್ದ. ಆಗ ನಿವೇದಿತಾ ಹೋಗಲಿಲ್ಲ. ನನ್ನ ಮೊದಲನೇ ಪ್ರಶ್ನೆ ಇದ್ದಿದ್ದು ಯಾಕೆ ಅವಳನ್ನು ಕರೆದುಕೊಂಡು ಹೋಗುತ್ತಿಲ್ಲ ಅಂತ. ಆದರೆ, ಬೇರೆ ಟ್ರಿಪ್‌ಗೆ ನೀನು ಕರ್ಕೊಂಡು ಹೋಗಿಲ್ಲ. ಬೇರೆಯವರು ಕರ್ಕೊಂಡು ಹೋಗ್ತಾರೆ. ನೀನು ನಿನ್ನ ಎಮೋಷನ್ಸ್‌ಗೆ ಸ್ಪಂದಿಸಿಲ್ಲ ಅಂದರೆ, ಬೇರೆ ಯಾರೋ ಕೊಡ್ತಾರೆ. ನೀನು ನಿನ್ನ ವಸ್ತುವನ್ನು ಕಾಪಾಡಿಕೋ ಅಂತ ಅನೇಕ ಬಾರಿ ಹೇಳಿದ್ದೇನೆ” ಎಂದು ಪ್ರಶಾಂತ್ ಸಂಬರಗಿ ಹೇಳಿದ್ದರು.

ʻʻನಿನ್ನೆ ನಗ್ತಾನೇ ಬಂದು ಹೋದರು. ಆದರೆ ಚಂದನ್‌ಗೆ ನೋವಾಗಿದೆ. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆ. ಚಂದನ್‌ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆʼʼಎಂದಿದ್ದರು ಪ್ರಶಾಂತ್‌ ಸಂಬರಗಿ.

Exit mobile version