Site icon Vistara News

Photos | ಜತೆಯಾಗಿ ದೀಪ ಹಿಡಿದು ದೀಪಾವಳಿ ಶುಭಾಶಯ ಕೋರಿದ ವಾಸುಕಿ ವೈಭವ್​-ಚಂದನಾ; ಕಾಲೆಳೆದ ನಟಿ ರಮ್ಯಾ

chandana ananthakrishna and vasuki vaibhav Deepavali Photoshoot

ಗಾಯಕ-ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ನಟಿ, ಡ್ಯಾನ್ಸರ್​ ಚಂದನಾ ಅನಂತಕೃಷ್ಣ ಅತ್ಯುತ್ತಮ ಸ್ನೇಹಿತರು. ಬಿಗ್​ಬಾಸ್​ ಸೀಸನ್​ 7ರಿಂದ ಪ್ರಾರಂಭವಾದ ಇವರ ಸ್ನೇಹ, ನಂತರವೂ ಮುಂದುವರಿದಿದೆ. ಈಗ ವಾಸುಕಿ ವೈಭವ್​ ಮತ್ತು ಚಂದನಾ ಒಟ್ಟಾಗಿ ದೀಪಾವಳಿ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ವಾಸುಕಿ ವೈಭವ್​ ದೀಪಾವಳಿ ಶುಭಾಶಯ ಕೋರಿದ್ದಾರೆ. ಚಂದನಾ ಮತ್ತು ವಾಸುಕಿ ಹೊಸ ಬಟ್ಟೆ ತೊಟ್ಟು, ದೀಪ ಹಿಡಿದು ದೀಪಾವಳಿ ಸಂಭ್ರಮಿಸಿದ್ದಾರೆ.

ಚಂದನಾ ಮತ್ತು ವಾಸುಕಿ ವೈಭವ್​ ಫೋಟೋ ನೋಡಿ ಅನೇಕರು ಸಿನಿಮಾ ಇಂಡಸ್ಟ್ರಿಯವರೇ ಕಮೆಂಟ್​ ಮಾಡುತ್ತಿದ್ದಾರೆ. ಅದರಲ್ಲಿ ಗಮನ ಸೆಳೆದಿದ್ದು ನಟಿ ರಮ್ಯಾ ಕಮೆಂಟ್​. ‘ಈ ಫೋಟೋಗಳನ್ನು ನೋಡಿ, ಇದು ನಿಮ್ಮ ನಿಶ್ಚಿತಾರ್ಥದ ಫೋಟೋಗಳು ಎಂದುಕೊಂಡೆ’ ಎಂದು ವಾಸುಕಿ-ಚಂದನಾರ ಕಾಲೆಳೆದಿದ್ದಾರೆ. ಭೂಮಿಶೆಟ್ಟಿ ಕೂಡ ಶುಭ ಹಾರೈಸಿದ್ದಾರೆ. ಇನ್ನು ಬಹುತೇಕ ಫಾಲೋವರ್ಸ್ ಅಂತೂ ನಿಮ್ಮದು ದಿ ಬೆಸ್ಟ್​ ಜೋಡಿ ಎಂದು ಹೇಳಿದ್ದಾರೆ. ಒಂದಷ್ಟು ಜನರಂತೂ ‘ನಿಮ್ಮ ವೈವಾಹಿಕ ಜೀವನ ಸುಖಮಯ ಆಗಿರಲಿ’ ಎಂದೂ ಹಾರೈಸಿದ್ದಾರೆ.

ಇಂಥ ಕಮೆಂಟ್​ಗಳನ್ನು ನೋಡಿದ ಬಳಿಕ ವಾಸುಕಿ ವೈಭವ್​ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿ ‘ನನ್ನ ಹೊಸ ಪೋಸ್ಟ್ ನೋಡಿ ಅನೇಕರು ಹ್ಯಾಪಿ ಮ್ಯಾರೀಡ್ ಲೈಫ್​ ಎನ್ನುತ್ತಿದ್ದಾರೆ. ಆದರೆ ಇದು ಕೇವಲ ದೀಪಾವಳಿ ಫೋಟೋಶೂಟ್ ಅಷ್ಟೇ’ ಎಂದು ಸ್ಪಷ್ಟನೆ ನೀಡಿದ್ದಾರೆ. ಇಲ್ಲಿವೆ ನೋಡಿ ವಾಸುಕಿ-ಚಂದನಾ ದೀಪಾವಳಿ ಫೋಟೋಶೂಟ್ ಫೋಟೋಗಳು..

ಇದನ್ನೂ ಓದಿ: SIIMA 2022 | ಮುಂದಿನ ಸಿನಿಮಾದ ಅಪ್‌ಡೇಟ್‌ ಕೊಟ್ರು ರಾಕಿಂಗ್‌ ಸ್ಟಾರ್‌ ಯಶ್‌: ಇಲ್ಲಿದೆ ಸೈಮಾ ಪ್ರಶಸ್ತಿಗಳ ವಿವರ

Exit mobile version