Site icon Vistara News

Chandanavana Film Critics Academy 2023: ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಅವಾರ್ಡ್ ನಾಮಿನೇಶನ್‌ ಪಟ್ಟಿ ಪ್ರಕಟ

Chandanavana Film Critics Academy 2023

ಬೆಂಗಳೂರು: ನಾಲ್ಕನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಅವಾರ್ಡ್ (Chandanavana Film Critics Academy 2023) ಮಾರ್ಚ್ 5ರಂದು ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿ ಹಾಗೂ 2023ನೇ ವರ್ಷದ ಟ್ರೋಫಿ ಅನಾವರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡುತ್ತ ಬಂದಿರುವ ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಅವಾರ್ಡ್, ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷ ಪ್ರಶಸ್ತಿಯನ್ನು ಘೋಷಿಸುತ್ತಾ ಬಂದಿದೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ತನ್ನ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದ್ದು, ಈ ಐದೂ ಪಶಸ್ತಿಗಳಿಗೂ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಮಹನಿಯರ ಹೆಸರುಗಳನ್ನು ನಾಮಕರಣ ಮಾಡಿದೆ.

ಇದನ್ನೂ ಓದಿ: RRR Movie : ಆರ್.ಆರ್.ಆರ್ ಸಿನಿಮಾಗೆ ಇನ್ನೊಂದು ಗರಿ; ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್‌ಗೆ ರಾಮ್ ಚರಣ್, ಜೂ. ಎನ್.ಟಿ.ಆರ್ ನಾಮನಿರ್ದೇಶನ

೧.
೨.
೩.
೪.

ಅತ್ಯುತ್ತಮ ನಟ (ಡೆಬ್ಯು),ಪ್ರಶಸ್ತಿಯನ್ನು ರಾಜ್ಯ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ, ಅತುತ್ತಮ ನಟಿ (ಡೆಬ್ಯು) ಪ್ರಶಸ್ತಿಯನ್ನು ಕನ್ನಡದ ಮೊದಲ ಚಿತ್ರದ ನಾಯಕಿ ತ್ರಿಪುರಾಂಭ ಹೆಸರಿನಲ್ಲಿ, ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹೆಸರಾಂತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಿರ್ಮಾಪಕ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟೃ ಪ್ರಶಸ್ತಿ ವಿಜೇತ ನಟ, ನಿರ್ಮಾಪಕ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ, ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ಚಿ.ಉದಯಶಂಕರ್ ಹೆಸರಿನಲ್ಲಿ, ಪ್ರದಾನ ಮಾಡಲಾಗುತ್ತಿದೆ.

ಇದನ್ನೂ ಓದಿ: RRR Movie: ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಅವಾರ್ಡ್‌ನಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ RRR!

ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್‌, ನಟಿಯರಾದ ಇತಿ ಆಚಾರ್ಯ, ಪಾವನಾ ಗೌಡ ಮತ್ತು ಸಂಗೀತಾ ಭಟ್‌ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟ್ರೋಫಿ ಅನಾವರಣ ಮಾಡಿದರು.

Exit mobile version