Site icon Vistara News

Chandini Bar | ಸರ್ವೇ ಜನೋ ಸುಖಿನೋ ಭವಂತು

Chandini Bar

ಬೆಂಗಳೂರು : ಚಾಂದಿನಿ ಬಾರ್ (Chandini Bar) ಸಿನಿಮಾ ಎಣ್ಣೆ ಹೊಡೆಯುವವರ ಕಥೆಯಲ್ಲ. ಬದುಕಿನ ಬವಣೆಯ ಸುತ್ತ ಹೆಣೆಯಲಾದ ಕಥೆ ಇದು. ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದೆ. ‘ಮಾಡೇಬಿಟ್ವಿ ಒಂದು ಸಿನಿಮಾ ಹಾಡು’ ಈಗಾಗಲೇ ರಿಲೀಸ್ ಆಗಿದ್ದು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಸರ್ವೇ ಜನೋ ಸುಖಿನೋ ಭವಂತು- ಎಂಬುದು ಚಿತ್ರದ ಟ್ಯಾಗ್‌ಲೈನ್.‌ ʼಚಾಂದಿನಿ ಬಾರ್ ಕುಡಿಯೋರ್ ಕಥೆ ಅಲ್ಲ. ದುಡಿಯೋರ್ ಕಥೆʼ ಎಂಬುದು ಟೀಮ್‌ನ ಆಶಯ. ನೈಜತೆಗೆ ಒತ್ತು ಕೊಟ್ಟು ಮಾಡಲಾದ ಸಿನಿಮಾ. ನಿರ್ದೇಶಕ ರಾಘವೇಂದ್ರ ಕುಮಾರ್ ಈ ಮುಂಚೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು ಮೊದಲ ಬಾರಿಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಎರಡು ವರ್ಷ ನಿರಂತರವಾಗಿ ಕಥೆಯ ಮೇಲೆ ವರ್ಕ್ ಮಾಡಿ ಸಿನಿಮಾ ಮಾಡಲಾಗಿದೆ. ನಿಜ ಜೀವನದ ಕಥೆ ಇದು. ಜತೆಗೆ ರೈತನ ಕಥೆಯನ್ನು ತೋರಿಸಲಾಗಿದೆ. ಎಲ್ಲವೂ ಅಕಸ್ಮಾತ್ ಆಗಿ ಬಂದು ಸೇರುವ ಜಾಗವಾಗಿ ಬಾರ್‌ನಲ್ಲಿನ ಕಥೆ ಯನ್ನು ತೋರಿಸಲಾಗಿದೆ. ಬಾರ್‌ನಲ್ಲಿ ಹುಟ್ಟುವ ನಾಯಕನ ಪ್ರೀತಿಯ ಕನಸಿನ ಕಥೆಯೂ ಜತೆ ಇದೆ. ತಿಂಗಳಾನುಗಟ್ಟಲೆ ಬಾರ್ ರೆಡಿ ಮಾಡಿ ಶೂಟಿಂಗ್ ಸೆಟ್ ಹಾಕಲಾಗಿದೆ.

ಇದನ್ನೂ ಓದಿ | 777 ಚಾರ್ಲಿ ಸಿನಿಮಾವನ್ನು ಮೆಚ್ಚಿಕೊಂಡ ಪ್ರೇಕ್ಷಕರು; 3ನೇ ದಿನದ ಕಲೆಕ್ಷನ್‌ ಎಷ್ಟು?

ಆಗಸ್ಟ್ ಮೊದಲ ವಾರದಲ್ಲಿ ರಿಲೀಸ್ ಮಾಡೋ‌ ಪ್ಲ್ಯಾನ್ ಮಾಡಿದೆ ಚಿತ್ರತಂಡ. ಕಂಪ್ಲೀಟ್ ಮೈಸೂರಿನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ 5 ಹಾಡುಗಳಿದ್ದು, ಸದ್ಯ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲಾಗಿದೆ.

ಭರತ್‌ ಕುಮಾರ್‌ ನಿರ್ಮಾಣ ಮಾಡಿದ್ದು, ಚೇತನ್‌ ಶರ್ಮಾ ಛಾಯಾಗ್ರಹಣ ಮಾಡಿದ್ದಾರೆ. ಸುಕೃತಿ ಪ್ರಭಾಕರ್‌ ಮತ್ತು ರಶ್ಮಿ ನಟಿಯರಾಗಿದ್ದು, ರಾಘವೇಂದ್ರ ಕುಮಾರ್, ಸಿದ್ದು ಬದನವಾಳು, ಮಣಿಕಂಠ, ತಾರಾ ಬಳಗವೇ ಇದೆ.

ಇದನ್ನೂ ಓದಿ | Golden Star | ಬಾನದಾರಿಯಲ್ಲಿ ಸಿನಿಮಾ First Look ರಿಲೀಸ್‌

Exit mobile version