Site icon Vistara News

Chandramukhi 2: ಚಂದ್ರಮುಖಿ-2 ಟ್ರೈಲರ್‌ ಔಟ್‌!

Chandramukhi 2

ನಟ ರಾಘವ ಲಾರೆನ್ಸ್ (raghava lawrence) ಹಾಗೂ ಕಂಗನಾ ರಾಣಾವತ್ (Kangana Ranaut) ನಟನೆಯ ‘ಚಂದ್ರಮುಖಿ-2’ ಸಿನಿಮಾ (Chandramukhi 2) ಟ್ರೈಲರ್‌ ಬಿಡುಗಡೆಯಾಗಿದೆ. ಹಿರಿಯ ನಟ ಪಿ.ವಾಸು ನಿರ್ದೇಶನದಲ್ಲಿ ಮೂಡಿಬಂದಿರುವ ಚಂದ್ರಮುಖಿ-2 ಸಿನಿಮಾದ ಟ್ರೈಲರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವೆಟ್ಟೈಯನ್ ರಾಜನ ಆಸ್ಥಾನದಲ್ಲಿ ನರ್ತಕಿಯ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದಾರೆ.

ಪಿ ವಾಸು ನಿರ್ದೇಶನದ ಚಂದ್ರಮುಖಿ 2 ಚಿತ್ರದಲ್ಲಿ ವಡಿವೇಲು, ರಾಧಿಕಾ ಶರತ್‌ಕುಮಾರ್, ಲಕ್ಷ್ಮಿ ಮೆನನ್, ಸೃಷ್ಟಿ ಡಾಂಗೆ, ಮಿಥುನ್ ಶ್ಯಾಮ್, ಮಹಿಮಾ ನಂಬಿಯಾರ್, ರಾವ್ ರಮೇಶ್, ವಿಘ್ನೇಶ್, ರವಿ ಮರಿಯಾ, ಸುರೇಶ್ ಮೆನನ್, ಟಿ.ಎಂ. ಕಾರ್ತಿಕ್ ಮತ್ತು ಸುಭಿಕ್ಷಾ ಕೃಷ್ಣನ್ ನಟಿಸಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸೆಪ್ಟೆಂಬರ್ 15 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆ ಅಷ್ಟೇ ‘ಸ್ವಾಗತಾಂಜಲಿʼ (Swagatanjali) ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಚಂದ್ರಮುಖಿ ಮೊದಲ ಭಾಗದಲ್ಲಿ ಜ್ಯೋತಿಕಾ ಅಭಿನಯಿಸಿದ್ದು, ಇದೇ ಪಾತ್ರವನ್ನೆ ಇದೀಗ ಕಂಗನಾ ರಣಾವತ್ ನಿರ್ವಹಿಸಿದ್ದಾರೆ.“ಸ್ವಾಗತಾಂಜಲಿ” ಹಾಡಿಗೆ ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ ಮತ್ತು ಶ್ರೀನಿಧಿ ತಿರುಮಲ ಹಾಡಿದ್ದಾರೆ.

ಇದನ್ನೂ ಓದಿ: Chandramukhi 2: ಅದ್ಧೂರಿಯಾಗಿ ನೆರವೇರಿತು ‘ಚಂದ್ರಮುಖಿ-2’ ಆಡಿಯೊ ಲಾಂಚ್ ಇವೆಂಟ್!

ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ‘RRR’ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಪಡೆದ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ರಾಧಾ ಕೃಷ್ಣ ಎಂಟರ್ಟೈನ್ಮೆಂಟ್ ತೆಲುಗಿನಲ್ಲಿ ಚಂದ್ರಮುಖಿ-2 ಸಿನಿಮಾವನ್ನು ರಿಲೀಸ್ ಮಾಡಲಾಗಿದೆ.ಚಂದ್ರಮುಖಿ ಸಿನಿಮಾದಲ್ಲಿ ರಜನಿಕಾಂತ್‌ ಮತ್ತು ನಟಿ ಜ್ಯೋತಿಕಾ ಅವರು ನಟಿಸಿದ್ದರು. ಕನ್ನಡದ ಆಪ್ತಮಿತ್ರ ಸಿನಿಮಾವನ್ನೇ ಚಂದ್ರಮುಖಿ ಸಿನಿಮಾವನ್ನಾಗಿ ರಿಮೇಕ್‌ ಮಾಡಲಾಗಿತ್ತು.

Exit mobile version