ಬೆಂಗಳೂರು: ಕಾರ್ತಿಕ್ ಆರ್ಯನ್ ( Kartik Aaryan) ಅವರು ತಮ್ಮ ಮುಂಬರುವ ಚಿತ್ರ ‘ಚಂದು ಚಾಂಪಿಯನ್’ ನ (Chandu Champion) ಎರಡನೇ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಬಾಕ್ಸಿಂಗ್ ರಿಂಗ್‌ನಲ್ಲಿ ಗಾಯಗೊಂಡ ಮುಖದೊಂದಿಗೆ ಕಂಡಿದ್ದಾರೆ. ಮೊದಲ ಪೋಸ್ಟರ್ ಅನ್ನು ಮೇ 15ರಂದು ಅನಾವರಣಗೊಳಿಸಲಾಯಿತು. ಕಬೀರ್ ಖಾನ್ ನಿರ್ದೇಶನದ ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ಕಾರ್ತಿಕ್ ಗಮನಾರ್ಹ ರೂಪಾಂತರಕ್ಕೆ ಒಳಗಾಗಿರುವುದು ಕಂಡಿದೆ. ಕಠಿಣ ತಯಾರಿ ನಡೆಸಿರುವುದಾಗಿ ಕಂಡು ಬರುತ್ತಿದೆ.
ʼಚಂದು ಚಾಂಪಿಯನ್ʼ ಮೊದಲ ಪೋಸ್ಟರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ನಟ, “ಚಾಂಪಿಯನ್ ಬರುತ್ತಿದ್ದಾನೆ. ನನ್ನ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನ ಮತ್ತು ವಿಶೇಷ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಳ್ಳಲು ಬಹಳ ಉತ್ಸುಕನಾಗಿದ್ದೇನೆ, ಹೆಮ್ಮೆಯಾಗುತ್ತಿದೆ. ಜೂನ್ 14ಕ್ಕೆ ʼಚಂದು ಚಾಂಪಿಯನ್ʼ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Sara Ali Khan: ಬ್ರೇಕಪ್ ಕ್ಲ್ಯಾರಿಟಿ ಬೆನ್ನಲ್ಲೇ ಸಾರಾ ಆಯೋಜಿಸಿದ್ದ ಪಾರ್ಟಿಯಲ್ಲಿ ಕಾರ್ತಿಕ್ ಆರ್ಯನ್!
ಕಾರ್ತಿಕ್ ಆರ್ಯನ್ ಅವರ ಈ ಕಠಿಣ ಶ್ರಮಕ್ಕೆ ನಿರ್ದೇಶಕ ಕಬೀರ್ ಖಾನ್ ಟಿಪ್ಪಣಿಯನ್ನು ಬರೆದಿದ್ದಾರೆ. ʻʻಚಂದು ಚಾಂಪಿಯನ್‌ನ ಕಥೆಯು ನಂಬಲಾಗದಷ್ಟು ಸ್ಪೂರ್ತಿದಾಯಕ ನೈಜ ಕಥೆಯಾಗಿದೆ. ಆದರೆ ಈ ಚಾಂಪಿಯನ್ ಆಗಲು ಕಾರ್ತಿಕ್ ಮಾಡಿದ ಪ್ರಯಾಣವು ಸ್ಫೂರ್ತಿದಾಯಕವಾಗಿದೆ. ಶೇ. 39ರಷ್ಟು ಬಾಡಿ ಫ್ಯಾಟ್ ಕರಗಿಸಿದರುʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!
ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವ ʻಈ ಚಂದು ಚಾಂಪಿಯನ್ʼ, ಓರ್ವ ಕ್ರೀಡಾಪಟುವಿನ ನೈಜ ಕಥೆಯನ್ನು ಬಿಚ್ಚಿಡಲಿದೆ. ಈ ಪಾತ್ರಕ್ಕಾಗಿ ಕಾರ್ತಿಕ್ ಅವರ ಪ್ರಯಾಣ ಗಮನಾರ್ಹವಾದದ್ದು. ಜೂನ್ 14 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ.