Site icon Vistara News

Actor Upendra: ಉಪೇಂದ್ರ ವಿವಾದಿತ ಪದ ಬಳಕೆ ಹಿನ್ನೆಲೆ; ನಟ ಚೇತನ್‌ ಪೋಸ್ಟ್‌ ವೈರಲ್‌!

chethan Actor Upendra

ಬೆಂಗಳೂರು: ಸೋಷಿಯಲ್​ ಮೀಡಿಯಾದಲ್ಲಿ ಜಾತಿ ನಿಂದನೆ ಪದ ಬಳಿಸಿದ ಆರೋಪವನ್ನು ಎದುರಿಸುತ್ತಿದ್ದ ನಟ ಉಪೇಂದ್ರ (Actor Upendra) ಅವರು ಈಗ ನಿಟ್ಟುಸಿರು ಬಿಡುವಂತೆ ಆಗಿದೆ. ಅವರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ (fir against upendra) ತಡೆ ನೀಡಿ ಹೈಕೋರ್ಟ್​ ಆದೇಶಿಸಿದೆ. ಇದರ ಬೆನ್ನಲ್ಲೇ ನಟ ಚೇತನ್‌ ಅವರ ಪೋಸ್ಟ್‌ ವೈರಲ್‌ (chethan and upendra controversy) ಆಗುತ್ತಿದೆ. ʻʻಕ್ಯಾಮೆರಾ ರೆಕಾರ್ಡಿಂಗ್‌ನಲ್ಲಿ ಇರುವಾಗ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳುವುದು ನಿಜವಾದ ಧೈರ್ಯ ಅಲ್ಲ. ಆದರೆ ವಿಷಯಗಳು ನಿಮಗೆ ವಿರುದ್ಧವಾದಾಗ ಪರಿಣಾಮಗಳನ್ನು (upendra controversy) ಎದುರಿಸುವುದು ನಿಜವಾದ ಧೈರ್ಯʼʼಎಂದು ಪರೋಕ್ಷವಾಗಿ ನಟ ಚೇತನ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಚೇತನ್‌ ಪೋಸ್ಟ್‌ನಲ್ಲಿ ʻʻಶತಮಾನಗಳಿಂದಲೂ ದಲಿತ/ಆದಿವಾಸಿ/ಅಲೆಮಾರಿ ಸಮುದಾಯಗಳಿಗೆ ತಾರತಮ್ಯವನ್ನುಂಟು ಮಾಡಿ, ಜಾತಿಯ ಸನ್ನಿವೇಶಗಳಿಂದ/ಉಲ್ಲೇಖಗಳಿಂದ ಅನೇಕ ಅವಹೇಳನಕಾರಿ ನಿಂದನೀಯ ಪದಗಳನ್ನು ಪಡೆಯಲಾಗಿದೆ. ಅಂತಹ ಪದಗಳ ಬಳಕೆಯು ಜಾತೀಯತೆಯನ್ನು/ಬ್ರಾಹ್ಮಣ್ಯವನ್ನು ಹೆಚ್ಚು ಬೇರೂರಿಸುತ್ತದೆ. ಎಲ್ಲ ಜನರು ವಿಶೇಷವಾಗಿ ಪ್ರಬಲ ಗುಂಪುಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ತಮ್ಮ ಪದದ ಆಯ್ಕೆಗಳನ್ನು ಆತ್ಮಸಾಕ್ಷಿಯಾಗಿ ಮತ್ತು ಗಂಭೀರವಾಗಿ ಪ್ರಶ್ನಿಸುವ ಅಗತ್ಯವಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Upendra : ನಟ ಉಪೇಂದ್ರಗೆ ಹೈಕೋರ್ಟ್‌ ಬಿಗ್‌ ರಿಲೀಫ್‌, FIRಗೆ ಮಧ್ಯಂತರ ತಡೆ

ಏನಿದು ಉಪೇಂದ್ರ ದಲಿತ ನಿಂದನೆ ಪ್ರಕರಣ?

ಆಗಸ್ಟ್‌ 12ರಂದು ಪ್ರಜಾಕೀಯ ಪಕ್ಷಕ್ಕೆ 6 ವರ್ಷವಾದ ಪ್ರಯುಕ್ತ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲೆಗೇರಿ ಇರುತ್ತಲ್ಲಾ ಹಾಗೆ..ʼ ಎಂದು ಹೇಳಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಜತೆಗೆ ದಲಿತ ಸಂಘಟನೆಗಳು ಸಿಡಿದೆದ್ದವು. ಇದರಿಂದ ಎಚ್ಚೆತ್ತುಕೊಂಡ ಉಪೇಂದ್ರ ಅವರು ತಮ್ಮ ಲೈವ್‌ನ್ನು ಡಿಲೀಟ್‌ ಮಾಡಿದ್ದಲ್ಲದೆ, ಕ್ಷಮೆ ಯಾಚನೆ ಕೂಡಾ ಮಾಡಿದ್ದರು. ಆದರೆ ಸಾಮಾಜಿಕ ಆಕ್ರೋಶ ಕಡಿಮೆ ಆಗಿಲ್ಲ. ಎರಡು ಕಡೆ ಪ್ರಕರಣಗಳು ದಾಖಲಾಗಿವೆ.

ಹೈಕೋರ್ಟ್‌ ಬಿಗ್‌ ರಿಲೀಫ್‌, FIRಗೆ ಮಧ್ಯಂತರ ತಡೆ

ರಾಜ್ಯ ಹೈಕೋರ್ಟ್‌ (Karnataka High court) ಬಿಗ್‌ ರಿಲೀಫ್‌ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಚಂದನ್ ಗೌಡರ್ ಅವರ ನೇತೃತ್ವದ ನ್ಯಾಯಪೀಠದಿಂದ ಮಧ್ಯಂತರ ತಡೆಯಾಜ್ಞೆ (Stay against FIR) ನೀಡಿದೆ.

ಇದನ್ನೂ ಓದಿ: Actor Upendra: ಜಾತಿನಿಂದನೆ ಕೇಸ್; ವಿಚಾರಣೆಗೆ ಹಾಜರಾಗದೆ ನಟ ಉಪೇಂದ್ರ ಎಸ್ಕೇಪ್‌, ಫೋನ್‌ ಸ್ವಿಚ್ಡ್‌ ಆಫ್!

ಎಫ್‌ಐಆರ್‌ ರದ್ದತಿ ಕೋರಿ ಸಲ್ಲಿಸಿದ ಮನವಿಯಲ್ಲಿ ನೀಡಿದ ಕಾರಣಗಳು

  1. ಉಪೇಂದ್ರ ಅವರ ವಿರುದ್ಧದ ದೂರು ದುರುದ್ದೇಶವನ್ನು ಹೊಂದಿದೆ ಮತ್ತು ಅನಗತ್ಯ ಪ್ರಚಾರ ಪಡೆಯುವ ಉದ್ದೇಶವನ್ನು ಹೊಂದಿದೆ.
  2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಉಲ್ಲೇಖಿತವಾದ ಯಾವುದೇ ಅಂಶಗಳನ್ನು ಉಪೇಂದ್ರ ಅವರು ಉಲ್ಲಂಘಿಸಿಲ್ಲ.
  3. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಗಳನ್ನು ಅಪಮಾನ ಮಾಡುವುದಕ್ಕಾಗಿಯೇ ಕನ್ನಡದ ನುಡಿಗಟ್ಟನ್ನು ಬಳಸಿದ್ದಾರೆ ಎನ್ನುವುದು ದೂರು. ಆದರೆ, ಉಪೇಂದ್ರ ಅವರಿಗೆ ಈ ವರ್ಗಗಳ ಮೇಲೆ ತುಂಬು ಗೌರವವಿದೆ. ಅವರು ಸಮಾಜದಲ್ಲಿನ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿರುವ ವ್ಯಕ್ತಿಯಾಗಿದ್ದಾರೆ.
  4. ಈ ಮಾತಿನಿಂದ ಯಾರಿಗೋ ನೋವಾಗಿದೆ ಎಂದು ತಿಳಿದ ಕೂಡಲೇ ಅವರು ಅದನ್ನು ಡಿಲೀಟ್‌ ಮಾಡಿದ್ದಾರೆ ಮತ್ತು ಕ್ಷಮೆಯನ್ನೂ ಯಾಚಿಸಿದ್ದಾರೆ. ಅದರ ಬಳಿಕವೂ ದೋಷಾರೋಪಣೆ ಮಾಡುತ್ತಿರುವುದು ದುರುದ್ದೇಶ ಮತ್ತು ಪ್ರಚಾರದ ಗೀಳಿನ ಕ್ರಮ.
Exit mobile version