ಬೆಂಗಳೂರು: ಕೃಷ್ಣದಾಸಿ ಖ್ಯಾತಿಯ ನಟಿ ಛವಿ ಮಿತ್ತಲ್ (Chhavi Mittal) ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಇದೀಗ ನಟಿ ಗಾಯದ ಗುರುತು ಇರುವ ಫೋಟೊ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಏಪ್ರಿಲ್‌ನಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ನಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಗಾಯದ ಗುರುತು ಹೊಂದಿರುವ ಫೋಟೊ ಒಂದನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ʻʻನಾನು ಈ ವರ್ಷ ಗಳಿಸಿದ್ದು ಇದನ್ನೇ. ಹೊಸ ಜೀವನ. ಒಂದು ಉತ್ತಮವಾದದ್ದು. ಬಲವಾದದ್ದು. ”ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಛಾವಿ ಅವರು ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊವನ್ನೂ ಹಂಚಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯ ಗಾಯದ ಗುರುತು ನಟಿ ಬೆನ್ನಿನ ಬಲಭಾಗದಲ್ಲಿ ಕಾಣಿಸಿಕೊಂಡಿದೆ. ಇದೀಗ ಫೋಟೊಗೆ ಅವರ ಅಭಿಮಾನಿಗಳು ಕಮೆಂಟ್ ಮೂಲಕ ʻ ಗಾಯದ ಗುರುತುಗಳನ್ನು ಯಾರು ನೋಡುತ್ತಾರೆ. ಅದು ಮುಖ್ಯವಲ್ಲ. ನೀವು ಒಂದೊಳ್ಳೆ ವ್ಯಕ್ತಿ ಎಂದುʼʼ ಅಭಿಪ್ರಾಯ ತಿಳಿಸಿದ್ದಾರೆ. ಇನ್ನೊಬ್ಬರು ʻʻದೇವರು ನಿಮ್ಮನ್ನು ಆಶೀರ್ವದಿಸಲಿ. ಇದೇ ರೀತಿಯ ಕಷ್ಟಗಳನ್ನು ಅನುಭವಿಸಿದ ಜನರಿಗೆ ನೀವು ಅದ್ಭುತ ಸ್ಫೂರ್ತಿದಾಯಕ ಎಂದು ನಾನು ಭಾವಿಸುತ್ತೇನೆ” ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ | ರಾತ್ರಿ ಬೆಳಗಾಗೋದರೊಳಗೆ ಬದುಕೇ ಬದಲಾಗಬಹುದು| ಸ್ತನ ಕ್ಯಾನ್ಸರ್ ಅನುಭವ ಬಿಚ್ಚಿಟ್ಟ ಛವಿ ಮಿತ್ತಲ್
ಸ್ತನ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಚೇತರಿಸಿಕೊಂಡಿರುವ ನಟಿ ಛವಿ ಮಿತ್ತಲ್ ತಮ್ಮ ಹೋರಾಟ, ತೊಳಲಾಟದ ಕತೆಯನ್ನು ಈ ಹಿಂದೆ ಅಷ್ಟೇ ಹೇಳಿಕೊಂಡಿದ್ದರು. “ನನ್ನ ಕುಟುಂಬ ನನ್ನ ದೊಡ್ಡ ಶಕ್ತಿ. ನನ್ನ ಗಂಡ ನನ್ನ ಬೆನ್ನೆಲುಬಾಗಿ ನಿಂತರು. ಅವರು ಆಸ್ಪತ್ರೆಯಲ್ಲಿ, ಮನೆಯಲ್ಲಿ ಎಲ್ಲವನ್ನೂ ನಿಭಾಯಿಸಿದರು. ನನ್ನ ಮಕ್ಕಳೂ ನನ್ನನ್ನು ಅರ್ಥಮಾಡಿಕೊಂಡರು. ನನ್ನ ಒಂಬತ್ತು ವರ್ಷದ ಮಗಳು ವಿಷಯ ಕೇಳಿ ಅತ್ತುಬಿಟ್ಟಳು. ನೋಡು, ಇದೂ ಎಲ್ಲ ರೋಗಗಳಂತೆ, ನಾನು ಇದರ ವಿರುದ್ಧವೂ ಹೋರಾಡಿ ಗೆದ್ದು ಬರುವೆ ಎಂದೆ. ನನ್ನ ಮಗನಿಗೆ ಇನ್ನೂ ಮೂರು ವರ್ಷ. ಆತನಿನ್ನೂ ಪರಿಸ್ಥಿತಿ ಅರಿಯುವಷ್ಟು ದೊಡ್ಡವನಲ್ಲ. ಆದರೂ, ಅಮ್ಮನಿಗೇನೋ ತೊಂದರೆಯಾಗಿದೆ ಎಂದು ಅರ್ಥ ಮಾಡಿಕೊಂಡಿದ್ದಾನೆ. ಅಮ್ಮ ತನ್ನನ್ನು ಎಂದಿನಂತೆ ಮುದ್ದು ಮಾಡುವ ಸ್ಥಿತಿಯಲ್ಲಿಲ್ಲ ಎಂಬುದನ್ನು ಸರಿಯಾಗಿಯೇ ಗ್ರಹಿಸಿಕೊಂಡು, ಪ್ರೌಢವಾಗಿ ನಡೆದುಕೊಂಡಿದ್ದಾನೆ, ಆಸ್ಪತ್ರೆಯಲ್ಲೂ ನನಗೆ ಸಹಕಾರ ನೀಡಿದೆ” ಎಂದು ಹೇಳಿ ಭಾವುಕರಾಗಿದ್ದರು.
ಇದನ್ನೂ ಓದಿ | ಛವಿ ಮಿತ್ತಲ್ ಗೆ ಬ್ರೆಸ್ಟ್ ಕ್ಯಾನ್ಸರ್: ಪಾಸಿಟಿವ್ ಪೋಸ್ಟ್ ಹಂಚಿಕೊಂಡ ನಟಿ