ಬೆಂಗಳೂರು: ಮೆಗಾ ಸ್ಟಾ ಚಿರಂಜೀವಿ ಕುಟುಂಬದಲ್ಲಿ (Chiranjeevi Daughter) ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಚೈತನ್ಯಾ ಡಿವೋರ್ಸ್ ಬಗ್ಗೆ ಚರ್ಚೆಗಳು ಆಗುತ್ತಿದ್ದಂತೆ ಇದೀಗ ಚಿರಂಜೀವಿ ಪುತ್ರಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ದಾಂಪತ್ಯ ಜೀವನದಲ್ಲಿ ಸರಿ ಇಲ್ಲ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಕಲ್ಯಾಣ್ ದೇವ್ ಇನ್‌ಸ್ಟಾದಲ್ಲಿ ಹಾಕಿರುವ ಪೋಸ್ಟ್ ಇಷ್ಟೆಲ್ಲ ಅನುಮಾನಕ್ಕೆ ಹುಟ್ಟುಹಾಕಿದೆ.
ಶ್ರೀಜಾ ಈ ಹಿಂದೆ ಶಿರೀಶ್ ಭಾರಧ್ವಜ್ ಎಂಬುವವರನ್ನು ಪ್ರೀತಿಸಿ ಪೋಷಕರ ವಿರೋಧ ಕಟ್ಟಿಕೊಂಡು ಮದುವೆ ಆಗಿದ್ದರು. 2016ರಲ್ಲಿ ಉದ್ಯಮಿ ಕ್ಯಾಪ್ಟನ್ ಕಿಶನ್ ಪುತ್ರ ಕಲ್ಯಾಣ್ ದೇವ್ ಜತೆ ಶ್ರೀಜಾ 2ನೇ ಮದುವೆ ಆಗಿತ್ತು. ದಂಪತಿಗೆ ಒಬ್ಬ ಮಗಳು ಇದ್ದಾಳೆ. ಕಲ್ಯಾಣ್ ಹೀರೊ ಆಗಿ 3 ಸಿನಿಮಾಗಳಲ್ಲಿ ಮಿಂಚಿದ್ದಾರೆ. ಶ್ರೀಜಾ ಅವರ 2 ಮದುವೆಯೂ ಉಳಿಯಲಿಲ್ಲ. ಇದೀಗ ಕಲ್ಯಾಣ್ ದೇವ್ ಅವರಿಗೆ ವಿಚ್ಛೇದನ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದಕ್ಕೆ ಕಾರಣ ಕಲ್ಯಾಣ್ ಶೇರ್ ಮಾಡಿರುವ ಪೋಸ್ಟ್.
ಪೋಸ್ಟ್‌ನಲ್ಲಿ ಕಲ್ಯಾಣ್ ಹೇಳಿದ್ದೇನು?
ನಟ ಕಲ್ಯಾಣ್ ದೇವ್ ಮಗಳೊಂದಿಗೆ ಇರುವ ಫೋಟೊ ಜತೆ ಭಾವುಕರಾಗಿದ್ದಾರೆ. ʻʻವಾರಕ್ಕೆ 4 ಗಂಟೆ ಮಾತ್ರ ಮಗಳ ಜತೆ ಸಮಯ ಕಳೆಯಲು ಸಿಗುತ್ತದೆʼʼ ಎಂದು ಹೇಳಿದ್ದಾರೆ. ಇನ್ನೊಂದು ವಿಡಿಯೊ ಶೇರ್ ಮಾಡಿ ‘ನಾವು ಮತ್ತೆ ಭೇಟಿಯಾಗುವವರೆಗೂ, ನಿನ್ನ ಈ ವಿಶೇಷ ನೆನಪುಗಳು ಯಾವಾಗಲೂ ನಗುವನ್ನು ತರುತ್ತವೆ. ಮಿಸ್ ಯು ನವ್ವು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Niharika Konidela: ನಿಹಾರಿಕಾ ದಾಂಪತ್ಯದಲ್ಲಿ ಬಿರುಕು ಪಕ್ಕಾ ಅಂದ್ರು ನೆಟ್ಟಿಗರು; ಫೋಟೊದಿಂದಾಗಿ ಹೆಚ್ಚಾಯ್ತು ಗಾಸಿಪ್!
ಡಿವೋರ್ಸ್ ಆಗಿರಬಹುದು!
ವರದಿ ಪ್ರಕಾರ ಜೋಡಿ ವಿಚ್ಛೇದನಕ್ಕೆ ಮುಂದಾದಾಗ ಅಥವಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ, ಕೌಟುಂಬಿಕ ನ್ಯಾಯಾಲಯವು ಇಂತಹ ನಿಯಮ ಜಾರಿಗೊಳಿಸುತ್ತದೆ. ಮಕ್ಕಳು ಯಾರ ಬಳಿ ಇರಬೇಕು, ತಂದೆ ಅಥವಾ ತಾಯಿಯನ್ನು ಯಾವಾಗ ಭೇಟಿ ಮಾಡಬೇಕು, ಎಷ್ಟು ಗಂಟೆ ಇರಬೇಕು ಎಂದು ನಿರ್ಧರಿಸುತ್ತದೆ. ಇದೀಗ ಕಲ್ಯಾನ್ ದೇವ ಮಗುವಿನ ಜತೆ ವಾರಕ್ಕೆ ಕೇವಲ 4 ಗಂಟೆಗಳ ಕಾಲ ಕಳೆಯುತ್ತಿದ್ದಾರೆ. ಇದರಿಂದ ನೆಟ್ಟಿಗರು ಡಿವೋರ್ಸ್ ಆಗಿರುವುದು ಗ್ಯಾರಂಟಿ ಎನ್ನುತ್ತಿದ್ದಾರೆ.
ಶ್ರೀಜಾ ಮತ್ತು ಕಲ್ಯಾಣ್ ದೇವ್ ಮಾರ್ಚ್ 2016ರಂದು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ವಿವಾಹವಾದರು. ಕೆಲವು ಸಮಯದ ನಂತರ ಶ್ರೀಜಾ ತನ್ನ ಹೆಸರಿನಿಂದ ಪತಿಯ ಹೆಸರನ್ನು ಕೈಬಿಟ್ಟರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಲ್ಯಾಣ್ ದೇವ್ ಜತೆಗಿನ ಫೋಟೊವನ್ನು ಡಿಲೀಟ್ ಮಾಡಿ ಇಬ್ಬರೂ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದರು.