Site icon Vistara News

Chiranjeevi | ಮೆಗಾಸ್ಟಾರ್ ಚಿರಂಜೀವಿ ಅಭಿನಯದ ʻವಾಲ್ತೇರ್‌ ವೀರಯ್ಯʼ ಮೊದಲ ದಿನದ ಕಲೆಕ್ಷನ್‌ ಎಷ್ಟು?

Chiranjeevi

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ (Chiranjeevi ) ಅವರ ʻವಾಲ್ತೇರ್‌ ವೀರಯ್ಯʼ ಜನವರಿ 13ರಂದು ತೆರೆಕಂಡಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರದ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ವರದಿ ಆಗಿದೆ. ನಂದಮೂರಿ ಬಾಲಕೃಷ್ಣ ಅವರ ವೀರ ಸಿಂಹ ರೆಡ್ಡಿ ಸಿನಿಮಾಗೆ ಕಠಿಣ ಸ್ಪರ್ಧೆಯನ್ನು ನೀಡಿದೆ. 2023 ರ ಅವರ ಮೊದಲ ಬಿಡುಗಡೆಯಾದ ʻವಾಲ್ತೇರ್‌ ವೀರಯ್ಯʼ ಮೊದಲ ದಿನ 33 ಕೋಟಿ ರೂ.ಗಳಿಸಿದೆ.

ಷೇರು ಸಂಗ್ರಹವು ಸುಮಾರು 20 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ಹೇಳಲಾಗಿದೆ. ಚಿರಂಜೀವಿ ಅವರ ಕೊನೆಯ ಸಿನಿಮಾ ಗಾಡ್‌ ಫಾದರ್‌ಗಿಂತಲೂ ಉತ್ತಮ ಪ್ರದರ್ಶನ ಈ ಸಿನಿಮಾ ನೀಡಿದೆ ಎನ್ನಲಾಗುತ್ತಿದೆ. ಕಮರ್ಷಿಯಲ್ ಎಂಟರ್ಟೈನರ್ ಆಗಿ ತಯಾರಾಗಿರುವ ಈ ಚಿತ್ರವನ್ನು ಬಾಬಿ ನಿರ್ದೇಶಿಸುತ್ತಿದ್ದಾರೆ. ನಾಯಕಿಯರಾಗಿ ಶ್ರುತಿ ಹಾಸನ್ ಮತ್ತು ಕ್ಯಾಥರೀನ್ ನಟಿಸಿದ್ದಾರೆ.

ಇದನ್ನೂ ಓದಿ | Chiranjeevi | ಮೆಗಾಸ್ಟಾರ್ ಚಿರಂಜೀವಿ ಅಭಿನಯದ ʻವಾಲ್ತೇರ್‌ ವೀರಯ್ಯʼ ಬಿಡುಗಡೆ

ವಾಲ್ತೇರ್‌ ವೀರಯ್ಯ ಸಿನಿಮಾದಲ್ಲಿ ಮೆಗಾಸ್ಟಾರ್ ಎದುರು ರವಿತೇಜ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಅವರು ನಿರ್ಮಿಸಿದ್ದಾರೆ, ಜಿಕೆ ಮೋಹನ್ ಸಹ ನಿರ್ಮಾಪಕರಾಗಿದ್ದಾರೆ. ಕಥೆ ಮತ್ತು ಸಂಭಾಷಣೆಯನ್ನು ಬಾಬಿ ಅವರೇ ಬರೆದಿದ್ದರೆ, ಕೋನ ವೆಂಕಟ್ ಮತ್ತು ಕೆ ಚಕ್ರವರ್ತಿ ರೆಡ್ಡಿ ಚಿತ್ರಕಥೆಯನ್ನು ಬರೆದಿದ್ದಾರೆ.

ಇದನ್ನೂ ಓದಿ | Actor Chiranjeevi | ಟಾಲಿವುಡ್‌ ಸ್ಟಾರ್‌ ಚಿರಂಜೀವಿ ಕಿರಿಯ ಮಗಳಿಗೆ ಮೂರನೇ ಮದುವೆ?

Exit mobile version