ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಪಿಆರ್‌ಒ ಸುರೇಶ್ ಕೊಂಡೇಟಿಯಿಂದ ಕನ್ನಡದ ತಾರೆಯರಿಗೆ ದೊಡ್ಡ ಅವಮಾನವಾಗಿದೆ. ಸಂತೋಷಂ ಅವಾರ್ಡ್ಸ್ (Santosham Awards 2023) ನೀಡಲು ಕನ್ನಡ ಸ್ಟಾರ್ಸ್‌ಗೆ ಗೋವಾಗೆ ಆಹ್ವಾನ ನೀಡಿದ್ದರು ಸುರೇಶ್. ಗೋವಾದಲ್ಲಿ ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಾಂತಿ ಸಿನಿಮಾಗೆ ಅವಾರ್ಡ್ ನೀಡುತ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಕೂಡ ಆಗಿದ್ದು, ಆಯೋಜನೆಯಲ್ಲಿ ಮಹಾ ಎಡವಟ್ಟು ಸಂಭವಿಸಿದೆ.
ಕನ್ನಡಿಗರಿಗೆ ತೆಲುಗು ಆಯೋಜಕರಿಂದ ಈ ರೀತಿ ಮೋಸವಾಗಿರುವ ಕಾರಣಗಳಿಂದಾಗಿ ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ಬೆಂಗಳೂರಿಗೆ ಕನ್ನಡದ ಸ್ಟಾರ್ಸ್ ತೆರಳಿದ್ದಾರೆ. ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಸೇರಿದಂತೆ ಸುಮಾರು 30ರಿಂದ 35 ಮಂದಿ ಕನ್ನಡದ ಸ್ಟಾರ್ಸ್‌ಗಳು ಭಾಗಿಯಾಗಿದ್ದರು ಎನ್ನಲಾಗಿದೆ.
ತಮಿಳು ತಾರೆಯರು ಕೂಡ ಸಂತೋಷಂ ಫಿಲ್ಮ್ ಅವಾರ್ಡ್ಸ್ ನಲ್ಲಿ ಭಾಗಿಯಾಗದಿರಲು ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ. ರಿಯಾಜ್ ಎನ್ನುವರು ಟ್ವೀಟ್‌ನಲ್ಲಿ, ಕಾಲಿವುಡ್ ತಾರೆಯರಿಗೆ ಟಿಕೆಟ್‌ವನ್ನು ಸುರೇಶ್ ಅವರು ಕೊಡದೇ ಇರುವ ಕಾರಣ, ಸಂತೋಷಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಏರ್ ಪೋರ್ಟ್‌ಗೆ ಕನ್ನಡದ ಸ್ಟಾರ್ಸ್‌ಗಳು ಆಗಮಿಸಲಿದ್ದಾರೆ.
ಇದನ್ನೂ ಓದಿ: Sachin Tendulkar: ವಿಕ್ಕಿ ಕೌಶಲ್ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್!
ಸುರೇಶ್ ಕೊಂಡೇಟಿ ಒಡೆತನದ ಸಂತೋಷಂ ಸೌತ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ಟಾಲಿವುಡ್ ಮತ್ತು ಇತರ ಭಾರತೀಯ ಭಾಷೆಯ ಚಲನಚಿತ್ರಗಳಿಗೆ ಗೌರವ ನೀಡುವ ಪ್ರಶಸ್ತಿ ಇದಾಗಿದೆ. ನಟರಿಗೆ ಮಾತ್ರವಲ್ಲದೆ ಒಟಿಟಿ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ನೀಡುತ್ತ ಬರುತ್ತಿದೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023